ಸೀರಮ್‌ನ ಗರ್ಭಕಂಠದ ಕ್ಯಾನ್ಸರ್ ಲಸಿಕೆ ದೃಢೀಕರಣಕ್ಕೆ ಶಿಫಾರಸು
ನವದೆಹಲಿ, ಜೂನ್ 15: ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಕ್ವಾಡ್ರೈವಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆಯನ್ನು ತಯಾರಿಸುವಂತೆ ಔಷಧೀಯ ನಿಯಂತ್ರಣ ಮಂಡಳಿಯ ವಿಷಯ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿದೆ.
ಬುಧವಾರದಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ (SII) ಭಾರತದ ಮೊದಲ ಕ್ವಾಡ್ರೈವಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ (qHPV) ಅನ್ನು ತಯಾರಿಸಲು ಶಿಫಾರಸು ಮಾಡಲಾಗಿದೆ.
ಲಕ್ಷಾಂತರ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅಲ್ಲದೇ ಈ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ತುಂಬಾ ಹೆಚ್ಚಾಗಿದೆ. ಭಾರತದಲ್ಲಿ 15-44 ವಯೋಮಾನದ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಎರಡನೇ ಅತಿ ಹೆಚ್ಚು ಕ್ಯಾನ್ಸರ್ ಆಗಿದೆ.

ಲಸಿಕೆಗಾಗಿ ವಿದೇಶಗಳ ಮೇಲೆ ಅವಲಂಬನೆ:
ಪ್ರಸ್ತುತ, ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಲಸಿಕೆಗಾಗಿ ವಿದೇಶಿ ತಯಾರಕರ ಮೇಲೆ ಮಾತ್ರ ಸಂಪೂರ್ಣವಾಗಿ ಅವಲಂಬಿತವಾಗಿದೆ. ನಮ್ಮ ದೇಶದ ನಾಗರಿಕರು ಈ ಲಸಿಕೆಗಳನ್ನು ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದಾರೆ.












Click it and Unblock the Notifications