11 ವರ್ಷಗಳಲ್ಲಿ ಇದೇ ಮೊದಲು, ಸುಪ್ರೀಂಕೋರ್ಟಿನಲ್ಲಿ ಮುಸ್ಲಿಂ ಜಡ್ಜ್ ಗಳಿಲ್ಲ!

Posted By:
Subscribe to Oneindia Kannada

ನವದೆಹಲಿ, ಸೆ. 06: ಸುಪ್ರೀಂಕೋರ್ಟಿನಲ್ಲಿ 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ಜಡ್ಜ್ ಗಳಿಲ್ಲದೆ ಕಾರ್ಯನಿರ್ವಹಿಸಲಿದೆ. ಸುಪ್ರೀಂಕೋರ್ಟಿನ ಇಬ್ಬರು ಮುಸ್ಲಿಂ ನ್ಯಾಯಾಧೀಶರು ನಿವೃತ್ತಿಯಾಗಿದ
ದಾರೆ.

ಕಳೆದ ಮೂರು ದಶಕಗಳಲ್ಲಿ ಎರಡನೇ ಬಾರಿಗೆ ಇಂಥ ಪರಿಸ್ಥಿತಿ ಎದುರಾಗಿದೆ. 2012ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಪೀಠಕ್ಕೆ ಮುಸ್ಲಿಂ ನ್ಯಾಯಾಧೀಶರನ್ನು ನೇಮಕ ಮಾಡಲಾಗಿತ್ತು. ನ್ಯಾಯಮೂರ್ತಿಗಳಾದ ಎಂ.ವೈ.ಇಕ್ಬಾಲ್ ಮತ್ತು ಫಕೀರ್ ಇಬ್ರಾಹಿಂ ಕಾಲಿಫುಲ್ಲಾ ಅವರಿಬ್ಬರು ಕ್ರಮವಾಗಿ ಫೆಬ್ರವರಿ 02 ಮತ್ತು ಜುಲೈ 22ರಂದು ನಿವೃತ್ತರಾಗಿದ್ದಾರೆ. [ಭಾಷಣದ ವೇಳೆ ಭಾವುಕರಾದ ಮುಖ್ಯ ನ್ಯಾಯಮೂರ್ತಿ ಠಾಕೂರ್]

fFrst time in last 11 years no muslim judge in supreme court

ಆದರೆ, ಸುಪ್ರೀಂಕೋರ್ಟಿಗೆ ನ್ಯಾಯಾಧೀಶರ ನೇಮಕಾತಿ ವಿಧಾನದ ಬಗ್ಗೆ ಸರ್ಕಾರ ಮತ್ತು ಸರ್ವೊನ್ನತ ನ್ಯಾಯಾಲಯದ ಭಿನ್ನಭಿಪ್ರಾಯದಿಂದಾಗಿ ಮುಸ್ಲಿಂ ನ್ಯಾಯಾಧೀಶರ ನೇಮಕ ವಿಳಂಬವಾಗಿದೆ. ಎಲ್ಲಾ ಧರ್ಮ, ಜಾತಿ ಹಾಗೂ ಪ್ರದೇಶಕ್ಕೂ ಸಮಾನ ಅವಕಾಶ ಸಿಗಬೇಕು ಎಂದು ಮಾಜಿ ಮುಖ್ಯ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ಅಸ್ಸಾಂ ಮೂಲದ ಇಕ್ಬಾಲ್ ಅಹ್ಮದ್ ಅನ್ಸಾರಿ ಅವರು ಬಿಹಾರದ ಮುಖ್ಯ ಜಸ್ಟೀಸ್ ಆಗಿದ್ದಾರೆ ಅಕ್ಟೋಬರ್ 2017ರಲ್ಲಿ ನಿವೃತ್ತಿಯಾಗಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮನ್ಸೂರ್ ಅಹ್ಮದ್ ಮೀರ್ ಅವರು ಹಿಮಾಚಲ ಪ್ರದೇಶದ ಮುಖ್ಯ ಜಸ್ಟೀಸ್ ಆಗಿದ್ದು, ಏಪ್ರಿಲ್ 2017ರ್ಲಿ ನಿವೃತ್ತರಾಗಲಿದ್ದಾರೆ. (ಏಜೆನ್ಸೀಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
For the first time in last 11 years, no Muslim judge in Supreme Court of India the Supreme Court of India is functioning without a single Muslim judge.
Please Wait while comments are loading...