ಡಿ. 9ರಂದು ಗುಜರಾತ್ ನಲ್ಲಿ ಮೊದಲ ಹಂತದ ಮತದಾನ
ಅಹಮದಾಬಾದ್, ಡಿಸೆಂಬರ್ 8: ಗುಜರಾತ್ ವಿಧಾನಸಭೆಗೆ ಶನಿವಾರ ಮೊದಲ ಹಂತದ ಮತದಾನ ನಡೆಯಲಿದೆ. ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ನ 89 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಒಟ್ಟು 977 ಅಭ್ಯರ್ಥಿಗಳು ಕಣದಲ್ಲಿದ್ದಾರೆ, ಇವರಲ್ಲಿ 920 ಪುರುಷ ಅಭ್ಯರ್ಥಿಗಳು ಮತ್ತು 57 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ.
ಒಟ್ಟು 2,12,31,652 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. 1,11,05,933 ಕೋಟಿ ಪುರುಷ ಮತದಾರರು ಮತ್ತು 1,01,25,472 ಮಹಿಳಾ ಮತದಾರರು ಅಭ್ಯರ್ಥಿಗಳ ಹಣೆ ಬರಹ ನಿರ್ಧರಿಸಲಿದ್ದಾರೆ.

ಜಾಮ್ನಗರ ಗ್ರಾಮಾಂತರದಲ್ಲಿ ಗರಿಷ್ಠ 27 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೆ , ಝಗಾಡಿಯಾ ಮತ್ತು ಗಂಡೇವಿಯಲ್ಲಿ ಕೇವಲ 3 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ರಾಜಕೋಟ್ ನಿಂದ ಸ್ಪರ್ಧಿಸಿರುವ ಮುಖ್ಯಮಂತ್ರಿ ವಿಜಯ್ ರೂಪಾಣಿ, ಮಾಂಡ್ವಿಯಿಂದ ಶಕ್ತಿಸಿನ್ಹಾ ಗೋಹಿಲ್, ಅಮ್ರೇಲಿಯಿಂದ ಪರೇಶ್ ಧನಾನಿ ಕಣದಲ್ಲಿರುವ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.
ಎರಡನೇ ಹಂತದ ಮತದಾನ ಡಿಸೆಂಬರ್ 14ರಂದು 93 ಕ್ಷೇತ್ರಗಳಲ್ಲಿ ನಡೆಯಲಿದೆ. ಡಿಸೆಂಬರ್ 18ರಂದು ಮತಎಣಿಕೆ ನಡೆಯಲಿದೆ.












Click it and Unblock the Notifications