ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಹಂತದ ಲೋಕಸಭಾ ಮತದಾನ ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ?

|
Google Oneindia Kannada News

ಸಣ್ಣಪುಟ್ಟ ಹಿಂಸಾಚಾರದ ಘಟನೆಗಳನ್ನು ಹೊರತುಪಡಿಸಿದರೆ ಗುರುವಾರದಂದು ಮೊದಲ ಹಂತದ ಲೋಕಸಭಾ ಚುನಾವಣೆ ಮತದಾನ ಶಾಂತಯುತವಾಗಿತ್ತು ಎಂದು ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಹೇಳಿದ್ದಾರೆ. 20 ರಾಜ್ಯಗಳ 91 ಲೋಕಸಭಾ ಕ್ಷೇತ್ರಕ್ಕೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭೆಗೆ ಮತದಾನ ನಡೆಯಿತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಉತ್ತಮ ಸಂಖ್ಯೆಯಲ್ಲಿ ಪಾಲ್ಗೊಂಡ ಮತದಾರರಿಗೆ ನಾವು ಧನ್ಯವಾದ ಹೇಳುತ್ತೇವೆ. ರಾಜ್ಯಗಳ ಆಡಳಿತ, ಭದ್ರತಾ ಸಿಬ್ಬಂದಿ ಹಾಗೂ ನೋಡಲ್ ಅಧಿಕಾರಿಗಳ ಬೆಂಬಲವನ್ನು ಇಷ್ಟು ಸಲೀಸಾಗಿ ಚುನಾವಣೆ ನಡೆಯಲು ಸಾಧ್ಯವಾಗಿದ್ದಕ್ಕೆ ಅವರಿಗೂ ಧನ್ಯವಾದ ತಿಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಅಂಡಮಾನ್-ನಿಕೋಬಾರ್ ನಲ್ಲಿನ ಒಂದೇ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಂಜೆ ಐದು ಗಂಟೆ ಹೊತ್ತಿಗೆ 56% ಮತದಾನ ಆಗಿತ್ತು. ಛತ್ತೀಸ್ ಗಢದ ಬಸ್ತಾರ್ ನಲ್ಲಿ ಸಂಜೆ 5ರ ಹೊತ್ತಿಗೆ 56% ಮತದಾನ ಆಗಿತ್ತು. ರಾಜ್ಯವಾಗಿ ರಚನೆಯಾದ ಮೇಲೆ ಇದೆ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಎದುರಿಸಿದ ತೆಲಂಗಾಣದಲ್ಲಿ 60.6% ಮತದಾನ ಆಗಿದೆ.

First phase of Lok sabha polls: Where is highest and lowest percentage of voting?

ಜಮ್ಮು-ಕಾಶ್ಮೀರದ ಎರಡು ಸ್ಥಾನಗಳಿಗೆ ನಡೆದ ಮತದಾನ ಬಾರಾಮುಲ್ಲಾ ಮತ್ತು ಜಮ್ಮುವಿನಲ್ಲಿ ಕ್ರಮವಾಗಿ 32.29% ಹಾಗೂ 67.39%ನಷ್ಟು ಆಗಿದೆ. ಆಂಧ್ರಪ್ರದೇಶದಲ್ಲಿ 66%ನಷ್ಟು ಮತದಾನ ಆಗಿದೆ.

ಸಿಕ್ಕಿಂ, ಮಿಜೋರಾಂ ಮತ್ತು ನಾಗಾಲ್ಯಾಂಡ್ ನಲ್ಲಿ ಒಂದೇ ಹಂತದಲ್ಲಿ ಮತದಾನ ಮುಗಿದಿದೆ. ಅಲ್ಲೆಲ್ಲ ಕ್ರಮವಾಗಿ 69, 60 ಹಾಗೂ 78 ಪರ್ಸೆಂಟ್ ಮತದಾನ ಆಗಿದೆ. ಮಣಿಪುರದಲ್ಲಿ 78.2%, ತ್ರಿಪುರಾದಲ್ಲಿ ಅತಿ ಹೆಚ್ಚು 81.2%, ಅಸ್ಸಾಂನಲ್ಲಿ 68 ಹಾಗೂ ಪಶ್ಚಿಮ ಬಂಗಾಲದಲ್ಲಿ 81% ಮತದಾನ ಆಗಿದೆ.

ಮೊದಲ ಮತದ ಪುಳಕ, ಸುಕ್ಕುಬಿದ್ದ ಮುಖದ ಹೊಳಪು, ಕೈಗೂಸಿನ ಜತೆ ತಾಯಿ!ಮೊದಲ ಮತದ ಪುಳಕ, ಸುಕ್ಕುಬಿದ್ದ ಮುಖದ ಹೊಳಪು, ಕೈಗೂಸಿನ ಜತೆ ತಾಯಿ!

ಎರಡನೇ ಹಂತದ ಮತದಾನ ಏಪ್ರಿಲ್ ಹದಿನೆಂಟರಂದು ನಡೆಯಲಿದೆ. ಮೊದಲ ಐದು ಹಂತದ ಮತದಾನಕ್ಕೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಇನ್ನುಳಿದ ಹಂತದ ಮತದಾನಕ್ಕೆ ಏಪ್ರಿಲ್ ಹದಿನಾರು ಹಾಗೂ ಇಪ್ಪತ್ತೆರಡರಂದು ಹೊರಡಿಸಲಾಗುವುದು. ಲೋಕಸಭಾ ಚುನಾವಣೆಯ ಫಲಿತಾಂಶ ಮೇ ಇಪ್ಪತ್ಮೂರರಂದು ಹೊರಬೀಳಲಿದೆ.

ಏಪ್ರಿಲ್ 11ರಂದು ನಡೆದ ಮತದಾನದ ಕ್ಷೇತ್ರಗಳು ಒಟ್ಟು 91. ಆ ಪೈಕಿ 32 ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರು ಸದ್ಯಕ್ಕೆ ಇದ್ದಾರೆ. ಇನ್ನೂ ಹದಿನಾರು ರಾಜ್ಯಗಳಲ್ಲಿ ಮತದಾನ ನಡೆಯಬೇಕಿದೆ.

English summary
Lok Sabha Elections 2019: Here is the details of first phase of voting. Where is highest and lowest percentage of voting briefed by deputy election commissioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X