ಏಪ್ರಿಲ್ 2ನೇ ವಾರದಲ್ಲಿ ಸಾರ್ವತ್ರಿಕ ಚುನಾವಣೆ ಸಾಧ್ಯತೆ
ನವದೆಹಲಿ, ಜನವರಿ 07: ಲೋಕಸಭೆ ಚುನಾವಣೆ 2019ಗಾಗಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ತಯಾರಿ ನಡೆಸಿರುವ ಜೊತೆಜೊತೆಗೆ ಚುನಾವಣಾ ಆಯೋಗ ಕೂಡಾ ಸಿದ್ಧತೆ ನಡೆಸಿದೆ. ಸಾರ್ವತ್ರಿಕ ಚುನಾವಣೆಯ ದಿನಾಂಕವನ್ನು ಮಾರ್ಚ್ ತಿಂಗಳಿನಲ್ಲಿ ಆಯೋಗವು ಘೋಷಿಸುವ ಸಾಧ್ಯತೆಯಿದೆ.
ಹಬ್ಬ ಹರಿದಿನ, ಶಾಲಾ, ಕಾಲೇಜುಗಳ ಪರೀಕ್ಷಾ ದಿನಾಂಕಗಳನ್ನು ಪರಿಶೀಲಿಸಿದ ನಂತರ ಚುನಾವಣಾ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. ಬಹುತೇಕ ಏಪ್ರಿಲ್ ಎರಡನೇ ವಾರದಲ್ಲಿ ಹಾಗೂ ಮೇ ಮೊದಲ ವಾರದಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಹೆಚ್ಚಿದೆ.
ಲಭ್ಯ ಮಾಹಿತಿಯಂತೆ ಮೊದಲ ಹಂತದ ಮತದಾನವನ್ನು ಏಪ್ರಿಲ್ ಎರಡನೇ ವಾರದಲ್ಲಿ ನಡೆಸಲಾಗುವುದು, ಮೇ ತಿಂಗಳಿನಲ್ಲಿ ಎರಡನೇ ವಾರದ ಮತದಾನ ನಡೆಸುವ ಸಾಧ್ಯತೆಯಿದೆ. 2014ರಲ್ಲಿ ಏಪ್ರಿಲ್ 07ರಿಂದ ಮೇ12ರೊಳಗೆ 9 ಹಂತದಲ್ಲಿ ಚುನಾವಣೆ ನಡೆಸಲಾಗಿತ್ತು.

ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಸಿಕ್ಕಿಂ, ಒಡಿಶಾ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ವಿಧಾನಸಭೆಗೆ ಕೂಡಾ ಚುನಾವಣೆ ದಿನಾಂಕವನ್ನು ಘೋಷಿಸಲಾಗುತ್ತದೆ. ಮಹಾರಾಷ್ಟ್ರ ಹಾಗೂ ಹರ್ಯಾಣದ ಚುನಾವಣೆ ಕೂಡಾ 2019ರಲ್ಲಿ ನಡೆಯಲಿದೆ.












Click it and Unblock the Notifications