Vande Bharath Metro: ಮೊದಲ ವಂದೇ ಭಾರತ್ ಮೆಟ್ರೋ ರೈಲು ಸಿದ್ಧ; ಹೇಗಿದೆ ನೋಡಿ
ಬಹುನಿರೀಕ್ಷಿತ ವಂದೇ ಭಾರತ್ ಮೆಟ್ರೋ ರೈಲು ಸಿದ್ಧವಾಗಿದೆ. ವಂದೇ ಭಾರತ್ ಮೆಟ್ರೋ ರೈಲಿನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದ್ದು, ವೈರಲ್ ಆಗುತ್ತಿದೆ. ಭಾರತದಲ್ಲೇ ಈ ಮೆಟ್ರೋಗಳನ್ನು ನಿರ್ಮಾಣ ಮಾಡಿರುವುದು ಮತ್ತೊಂದು ವಿಶೇಷ.
ಜುಲೈ ತಿಂಗಳಿನಲ್ಲಿ ವಂದೇ ಭಾರತ್ ಮೆಟ್ರೋ ರೈಲುಗಳ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತದೆ. ಪಂಜಾಬ್‌ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿ ವಂದೇ ಭಾರತ್ ಮೆಟ್ರೋದ ಮೊದಲ ಕೆಲವು ಕೋಚ್‌ಗಳನ್ನು ನಿರ್ಮಿಸಿದೆ.

ಮೊದಲ ಹಂತದಲ್ಲಿ 50 ವಂದೇ ಭಾರತ್ ಮೆಟ್ರೋ ರೈಲುಗಳನ್ನು ನಿರ್ಮಾಣ ಮಾಡಲಾಗುತ್ತದೆ ಮತ್ತು ಕ್ರಮೇಣ ಸಂಖ್ಯೆಯನ್ನು 400 ಕ್ಕೆ ಏರಿಸಲಾಗುವುದು ಎಂದು ರೈಲ್ವೆ ಮೂಲಗಳು ತಿಳಿಸಿವೆ.
ದೊಡ್ಡ ನಗರಗಳಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಲು ಇದು ಸಹಾಯ ಮಾಡಲಿದೆ. ಅಲ್ಲದ ಮಹಾನಗರಗಳ ಅಕ್ಕಪಕ್ಕದ ನಗರಗಳಿಗೂ ಮೆಟ್ರೋ ಸೇವೆ ವಿಸ್ತರಿಸುವ ಯೋಜನೆಗೆ ಇದು ಉತ್ತೇಜನ ನೀಡಲಿದೆ.
ವಂದೇ ಭಾರತ್ ಮೆಟ್ರೋ 100 ಕಿ.ಮೀ ಮತ್ತು 250 ಕಿ.ಮೀ ವರೆಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದು 12 ಕೋಚ್‌ಗಳನ್ನು ಹೊಂದಿರಲಿದ್ದು, 16 ಕೋಚ್‌ಗಳಿಗೆ ಹೆಚ್ಚಿಸಬಹುದಾಗಿದೆ.
First Basic until of Vande Metro from RCF Kapurtala is flagged for run trials on 30-04-2024.
— Ajay Singh (@railwaterman) May 1, 2024
The train has features similar to Vandebharat trains.
Adding a new dimension to train travel over IR.#IR#IndianRailways pic.twitter.com/m9yBE22Zf5
ಅಧಿಕಾರಿಗಳು ಹೇಳಿದ್ದೇನು?
ವಂದೇ ಭಾರತ್ ಮೆಟ್ರೋಗಾಗಿ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಮತ್ತು ಟ್ರಯಲ್ ರನ್ ಜುಲೈ 2024 ರಿಂದ ಪ್ರಾರಂಭವಾಗುತ್ತದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಂದೇ ಭಾರತ್ ಮೆಟ್ರೋ ರೈಲುಗಳನ್ನು ನಿರ್ಮಾಣ ಮಾಡಲಾಗಿದೆ.
ಅಧಿಕಾರಿಗಳು 2024 ರಲ್ಲಿ ವಂದೇ ಭಾರತ್ ಮೆಟ್ರೋವನ್ನು ಹೊರತರುವ ಗುರಿಯನ್ನು ಹೊಂದಿದ್ದಾರೆ. ಇನ್ನೆರಡು ತಿಂಗಳಲ್ಲಿ ಇದರ ಪರೀಕ್ಷೆಯು ಪ್ರಾರಂಭವಾಗುತ್ತದೆ. ಸ್ವಯಂಚಾಲಿತ ಬಾಗಿಲುಗಳು ಮತ್ತು ಹೆಚ್ಚಿನ ಸೌಕರ್ಯದ ಅಂಶಗಳ ಜೊತೆಗೆ, ಶೌಚಾಲಯ ವ್ಯವಸ್ಥೆ ಕೂಡ ಹೊಂದಿದ್ದು, ಇದು ಪ್ರಸ್ತುತ ಚಾಲನೆಯಲ್ಲಿರುವ ಮೆಟ್ರೋ ರೈಲುಗಳಲ್ಲಿ ಲಭ್ಯವಿಲ್ಲದ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೆಟ್ರೋದ ಹೆಚ್ಚುವರಿ ವೈಶಿಷ್ಟ್ಯಗಳ ವಿವರಗಳು, ಚಿತ್ರಗಳೊಂದಿಗೆ, ಸಾರ್ವಜನಿಕರೊಂದಿಗೆ ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರೈಲ್ವೇ ಮೂಲಗಳ ಪ್ರಕಾರ, ವಂದೇ ಮೆಟ್ರೋ ವಿಶಿಷ್ಟವಾದ ಕೋಚ್‌ಗಳನ್ನು ಹೊಂದಿದೆ, ಪ್ರತಿ ಘಟಕವು ನಾಲ್ಕು ಕೋಚ್‌ಗಳನ್ನು ಒಳಗೊಂಡಿರುತ್ತದೆ ಮತ್ತು ಕನಿಷ್ಠ 12 ಕೋಚ್‌ಗಳು ವಂದೇ ಮೆಟ್ರೋ ರೈಲಿನಲ್ಲಿ ಇರಲಿವೆ. ಆರಂಭಿಕ ಹಂತದಲ್ಲಿ 12 ಕೋಚ್‌ಗಳ ವಂದೇ ಮೆಟ್ರೋ ರೈಲುಗಳನ್ನು ಪರಿಚಯಿಸಲಾಗುವುದು, ಮಾರ್ಗದ ಬೇಡಿಕೆಯ ಆಧಾರದ ಮೇಲೆ 16 ಕೋಚ್‌ಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ.
ಆರಂಭದಲ್ಲಿ, ನಾವು 12-ಕೋಚ್ ಮೆಟ್ರೋವನ್ನು ಹೊಂದಿದ್ದೇವೆ ಆದರೆ ನಗರದ ಬೇಡಿಕೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಇದನ್ನು 16 ಬೋಗಿಗಳಿಗೆ ವಿಸ್ತರಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications