ಭಾರತೀಯ ಆ್ಯಂಟಿಜೆನ್ ಕಿಟ್‌ಗೆ ಐಸಿಎಂಆರ್ ಅನುಮೋದನೆ

ನವದೆಹಲಿ, ಜುಲೈ 23: ದೇಶೀಯ ಮೊದಲ ಆ್ಯಂಟಿಜೆನ್ ಕಿಟ್‌ಗೆ ಐಸಿಎಂಆರ್ ಅನುಮೋದನೆ ನೀಡಿದೆ.

Recommended Video

      Pride of Karnataka in Egypt - Shubha Muralidhar | Oneindia Kannada

      ಪ್ಯಾಥೋಕ್ಯಾಚ್​ ಕೊವಿಡ್​-19 ಆ್ಯಂಟಿಜೆನ್​ ರಾಪಿಡ್​ ಟೆಸ್ಟಿಂಗ್​ ಕಿಟ್​ ಎಂಬ ಹೆಸರಿನ ಈ ಕಿಟ್​ ಅನ್ನು ಭಾರತದಲ್ಲೇ ಅಭಿವೃದ್ಧಿಪಡಿಸಿದ್ದು, ಪ್ರತಿ ಕಿಟ್​ಗೆ 450 ರೂ.ನಂತೆ ಮಾರುಕಟ್ಟೆಯಲ್ಲಿ ದೊರೆಯಲಿದೆ.

      ಮೈಲ್ಯಾಬ್​ ಡಿಸ್ಕವರಿ ಸಲ್ಯೂಷನ್ಸ್​ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಮೊದಲ ಆ್ಯಂಟಿಜೆನ್​ ಕಿಟ್​ ಬಳಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಅನುಮೋದನೆ ನೀಡಿದೆ. ಕೊರೊನಾ ಸೋಂಕು ಪತ್ತೆಗೆ ಈ ಕಿಟ್​ಗಳನ್ನು ಬಳಸಲಾಗುತ್ತದೆ.

      First Antigen Kit Of Indian Make Gets ICMR Approval

      ರಾಷ್ಟ್ರದಲ್ಲಿನ ಕೊವಿಡ್​ ಪರೀಕ್ಷೆಯನ್ನು ಚುರುಕುಗೊಳಿಸಲು ಆರ್​ಆರ್​ಟಿ-ಪಿಸಿಆರ್​ ಜತೆಗೆ ಆ್ಯಂಟಿಜೆನ್​ ಆಧಾರಿತ ಪರೀಕ್ಷಾ ಸಾಧನಗಳನ್ನೂ ಬಳಸಲಾಗುತ್ತಿದೆ. ಆರ್​ಆರ್​ಟಿ-ಪಿಸಿಆರ್​ ಟೆಸ್ಟಿಂಗ್​ಗೆ ಹೋಲಿಸಿದರೆ ಆ್ಯಂಟಿಜೆನ್​ ಪರೀಕ್ಷೆಯಲ್ಲಿ ಕೇವಲ 30 ನಿಮಿಷದಲ್ಲಿ ಫಲಿತಾಂಶ ಬರುತ್ತದೆ ಎಂದು ವಿವರಿಸಿದ್ದಾರೆ.

      ಕೊವಿಡ್​-19 ಪಿಡುಗನ್ನು ನಿಯಂತ್ರಿಸಲು ನಮ್ಮ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಲೇ ಇದೆ. ವಿದೇಶಿ ಕಿಟ್​ಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಸುಲಭ ದರದ ಆರ್​ಟಿ-ಪಿಸಿಆರ್​ ಟೆಸ್ಟ್​ ಅನ್ನು ಬಿಡುಗಡೆ ಮಾಡಿದ ಬಳಿಕ ಕೊರೊನಾ ಸೋಂಕಿನ ಪರೀಕ್ಷೆಯನ್ನು ತ್ವರಿತಗೊಳಿಸಲು ಕಾಂಪ್ಯಾಕ್ಟ್​ ಎಕ್ಸ್​ಎಲ್​ ಎಂಬ ಕಿಟ್​ ಅನ್ನು ಬಿಡುಗಡೆ ಮಾಡಿದೆವು.

      ಮೊದಲ ಆ್ಯಂಟಿಜೆನ್​ ಟೆಸ್ಟಿಂಗ್​ ಕಿಟ್​ ಅನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಮೈಲ್ಯಾಬ್​ ಡಿಸ್ಕವರಿ ಸಲ್ಯೂಷನ್ಸ್​ನ ಎಂಡಿ ಹಸ್ಮುಖ್​ ರಾವಲ್​ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+