ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಚಾಂದಿನಿ ಚೌಕ್‌ನಲ್ಲಿ ನಿಯಂತ್ರಣಕ್ಕೆ ಬಾರದ ಬೆಂಕಿ, ಅಂಗಡಿಗಳು ಭಸ್ಮ

|
Google Oneindia Kannada News

ನವದೆಹಲಿ, ನವೆಂಬರ್‌ 25: ದೆಹಲಿಯ ಭಗೀರಥ ಅರಮನೆ ಮಾರುಕಟ್ಟೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದಾಗಿ ಜನಪ್ರಿಯ ಚಾಂದಿನಿ ಚೌಕ್ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ಸ್ ಮಳಿಗೆಗಳು, ಅಸೆಂಬ್ಲಿ ಘಟಕಗಳು ಮತ್ತು ಗೋದಾಮುಗಳು ಬೆಂಕಿಗೆ ಆಹುತಿಯಾಗಿದ್ದು, ಮೂರು ಕಟ್ಟಡಗಳು ಕುಸಿದು ಬಿದ್ದಿವೆ.

ಸುಮಾರು 150 ಅಂಗಡಿಗಳು ಈಗಾಗಲೇ ಸುಟ್ಟು ಭಸ್ಮವಾಗಿವೆ. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಶುಕ್ರವಾರ ಬೆಳಗಿನ ಜಾವದ ವೇಳೆಗೆ ಬೆಂಕಿ ನಂದಿಸಲಾಗಿತ್ತು. ಆದರೆ ಕೆಲ ಅಂಗಡಿಗಳಲ್ಲಿ ಹೊಸ ಜ್ವಾಲೆ ಕಾಣಿಸಿಕೊಂಡಿದ್ದು, ನಂತರ ಬೆಂಕಿ ವ್ಯಾಪಿಸಿದೆ. ಅಂಗಡಿಗಳು ಮುಚ್ಚಿದ ನಂತರ ಬೆಂಕಿ ಹೊತ್ತಿಕೊಂಡ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಗುರುವಾರವೇ ಹೊತ್ತಿಕೊಡ ಬೆಂಕಿಯನ್ನು ಶುಕ್ರವಾರ ಬೆಳಿಗ್ಗೆ ಹತೋಟಿಗೆ ತರಲಾಗಿತ್ತು. ಆದರೆ ಸಂಜೆಯ ಹೊತ್ತಿಗೆ ಅದು ಮತ್ತೆ ಕಾಣಿಸಿಕೊಂಡು ಮತ್ತೊಮ್ಮೆ ದೊಡ್ಡದಾಯಿತು. ಬೆಂಕಿ ಕಾಣಿಸಿಕೊಂಡು ಸುಮಾರು 24 ಗಂಟೆಗಳಾದರೂ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದೇವೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಕ್ಕಳನ್ನು ನೋಡಲು ಬಿಡದ ಹೆಂಡತಿ: ಪೆಟ್ರೋಲ್‌ ಸುರಿದು ಮನೆಗೆ ಬೆಂಕಿ ಇಟ್ಟ ಪತಿಮಕ್ಕಳನ್ನು ನೋಡಲು ಬಿಡದ ಹೆಂಡತಿ: ಪೆಟ್ರೋಲ್‌ ಸುರಿದು ಮನೆಗೆ ಬೆಂಕಿ ಇಟ್ಟ ಪತಿ

ಶುಕ್ರವಾರದಂದು ರಾತ್ರಿ 9 ಗಂಟೆಗೆ 20 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿನ್ನೆ ರಾತ್ರಿಯಿಂದ ಇಲ್ಲಿಯವರೆಗೆ 40 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಮಹಾಲಕ್ಷ್ಮಿ ಮಾರ್ಕೆಟ್‌ನ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಪಕ್ಕದ ವಿದ್ಯುತ್ ಉಪಕರಣಗಳ ಅಂಗಡಿಗಳಿಗೂ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಗೆಯ ಜೊತೆಗೆ ಪ್ಲಾಸ್ಟಿಕ್ ಮತ್ತು ರಬ್ಬರ್ ಸುಡುವ ದುರ್ವಾಸನೆಯು ಗಾಳಿಯನ್ನು ಕಲುಷಿತಗೊಳಿಸಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ.

ನಮಗೆ ಹಲವಾರು ಕೋಟಿ ರೂಪಾಯಿ ನಷ್ಟ

ನಮಗೆ ಹಲವಾರು ಕೋಟಿ ರೂಪಾಯಿ ನಷ್ಟ

ಮಾಸ್ಕ್ ಮತ್ತು ಕರವಸ್ತ್ರದಿಂದ ಬಾಯಿ ಮುಚ್ಚಿಕೊಂಡ ವ್ಯಾಪಾರಿಗಳು ಬೆಂಕಿಯಿಂದ ಉಳಿದಿದ್ದನ್ನು ಸರಂಕ್ಷಿಸಲು ತಮ್ಮ ಸುಟ್ಟುಹೋದ ಅಂಗಡಿಗಳಿಗೆ ಪ್ರವೇಶಿಸಲು ಅಸಹಾಯಕರಂತೆ ಕಾಯುತ್ತಿದ್ದರು. ಹಾನಿಗೊಳಗಾದ ಕಟ್ಟಡವೊಂದರ ಪಕ್ಕದ ಲೇನ್‌ನಲ್ಲಿ ಕುಳಿತಿದ್ದ ಸಂಜಯ್ ಕುಮಾರ್, "ನನಗೆ ಏನೂ ಉಳಿದಿಲ್ಲ ಎಂದು ನಾನು ಭಾವಿಸುತ್ತೇನೆ. ನಮಗೆ ಹಲವಾರು ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

Breaking: ಜಮ್ಮು-ಕಾಶ್ಮೀರದ ಜಾಮಿಯಾ ಮಸೀದಿಯಲ್ಲಿ ಭಾರೀ ಬೆಂಕಿBreaking: ಜಮ್ಮು-ಕಾಶ್ಮೀರದ ಜಾಮಿಯಾ ಮಸೀದಿಯಲ್ಲಿ ಭಾರೀ ಬೆಂಕಿ

ರಾತ್ರಿ 11 ಗಂಟೆ ಸುಮಾರಿಗೆ ಇಲ್ಲಿ ಬೆಂಕಿ

ರಾತ್ರಿ 11 ಗಂಟೆ ಸುಮಾರಿಗೆ ಇಲ್ಲಿ ಬೆಂಕಿ

ಬೆಂಕಿ ನಂದಿಹೋಗುವುದನ್ನು ಕಾತುರದಿಂದ ಕಾಯುತ್ತಿರುವವರಲ್ಲಿ ಬಲ್ವಿಂದರ್ ಸಿಂಗ್ ಅವರು ಬೆಂಕಿ ಹೊತ್ತಿಕೊಂಡ ಎದುರಿನ ಕಟ್ಟಡದಲ್ಲಿ ಅಂಗಡಿಯನ್ನು ಹೊಂದಿದ್ದಾರೆ. ಸದ್ಯಕ್ಕೆ ನಮ್ಮ ಅಂಗಡಿ ಸುರಕ್ಷಿತವಾಗಿದೆ. ರಾತ್ರಿ 11 ಗಂಟೆ ಸುಮಾರಿಗೆ ಇಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನನ್ನ ತಂದೆ ಅಂಗಡಿಯಲ್ಲಿದ್ದರು. ನಮ್ಮ ಅಂಗಡಿ ಸುರಕ್ಷಿತವಾಗಿದೆ. ಆದರೆ ನಾನು ಪರಿಶೀಲಿಸಲು ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲೂ ಇದೇ ರೀತಿಯ ಘಟನೆ

ಸೆಪ್ಟೆಂಬರ್‌ನಲ್ಲೂ ಇದೇ ರೀತಿಯ ಘಟನೆ

ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಮತ್ತು ಪೊಲೀಸರಿಂದ ಮೀಸಲು ಪಡೆ ಬೆಂಕಿಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದೆ ಎಂದು ಪೊಲೀಸ್ ಉಪ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಇದೇ ರೀತಿಯ ಘಟನೆಯಲ್ಲಿ, ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದ ಮೇಲಿನ ಮಹಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 80 ಅಂಗಡಿಗಳು ನಾಶವಾಗಿದ್ದವು.

ಸರ್ಕಾರದಿಂದ ಪರಿಹಾರ ನೀಡಬೇಕು

ಸರ್ಕಾರದಿಂದ ಪರಿಹಾರ ನೀಡಬೇಕು

ಘಟನೆಯಲ್ಲಿ ಸುಮಾರು 400 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ವ್ಯಾಪಾರಿಗಳು ಹೇಳಿಕೊಂಡಿದ್ದು, ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಮಾರುಕಟ್ಟೆಯಲ್ಲಿ ದುರಸ್ತಿ ಕ್ರಮಗಳನ್ನು ಕೈಗೊಳ್ಳುವಂತೆ ನಾವು ದೆಹಲಿ ಸರ್ಕಾರಕ್ಕೆ ಸಾಕಷ್ಟು ಬಾರಿ ಪತ್ರ ಬರೆದಿದ್ದೇವೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಐದಾರು ತಿಂಗಳಿಗೊಮ್ಮೆ ಬೆಂಕಿ ಹೊತ್ತಿಕೊಳ್ಳುತ್ತದೆ. ಎಲ್ಲೆಂದರಲ್ಲಿ ನೇತಾಡುವ ತಂತಿಗಳ ಜಾಲರಿ ಮತ್ತು ಬೆಂಕಿ ಎಚ್ಚರಿಕೆ ವ್ಯವಸ್ಥೆ ಇಲ್ಲಿ ಇಲ್ಲ. ಯಾವುದೇ ಮೂಲಸೌಕರ್ಯ ಸುಧಾರಣೆ ಮಾಡಿಲ್ಲ ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

English summary
Electronics stores, assembly units and warehouses were gutted and three buildings collapsed in the popular Chandni Chowk area following a fire at Delhi's Bhagirath Palace Market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X