ಅಯೋಧ್ಯೆಗಾಗಿ ಶಸ್ತ್ರ ಹಿಡಿದ ಭಜರಂಗಿಗಳ ವಿರುದ್ಧ ಎಫ್ ಐಆರ್

Posted By:
Subscribe to Oneindia Kannada

ಲಕ್ನೋ, ಮೇ 25: ಅಯೋಧ್ಯೆಯಲ್ಲಿ ಸ್ವಯಂ ರಕ್ಷಣೆ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡಲು ಭಜರಂಗ ದಳ ಶಸ್ತ್ರಾಸ್ತ್ರ ತರಬೇತಿ ಶಿಬಿರ ಹಮ್ಮಿಕೊಂಡಿದೆ. ಈ ಶಿಬಿರ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಿದ ಫೈಜಾಬಾದ್ ಪೊಲೀಸರು, ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.

ಸ್ವಯಂ ರಕ್ಷಣೆ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡಲು ಅನುಕೂಲವಾಗುವಂತೆ ಶಸ್ತ್ರಾಸ್ತ್ರ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು, ಮೇ 10ರಂದು ನಡೆದಿದ್ದ ಈ ಶಿಬಿರದ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಲಾಗಿತ್ತು.

FIR against Bajrang Dal over 'self defence' camp

ಸಂಪೂರ್ಣ ಮಿಲಿಟರಿ ತರಬೇತಿ ಮಾದರಿಯಲ್ಲಿ ಶಿಬಿರದಲ್ಲಿ ತರಬೇತಿ ನೀಡಲಾಗಿತ್ತು. ಏರ್​ಗನ್ ಬಳಕೆ, ಬೆಂಕಿಯ ರಿಂಗ್​ನೊಳಗೆ ಜಿಗಿಯುವುದು, ಈಜುವುದು, ಉದ್ದ ಮತ್ತು ಎತ್ತರ ಜಿಗಿತ, ಉಗ್ರದಾಳಿಯ ಸಂದರ್ಭ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಹೇಳಿಕೊಡಲಾಗಿತ್ತು.

ಈ ಶಿಬಿರ ರಾಷ್ಟ್ರರಕ್ಷಣೆಗಾಗಿ, ದುಷ್ಟರನ್ನು ಸದೆಬಡೆಯಲು ಮಾತ್ರ ಎಂದು ಸ್ಪಷ್ಟನೆ ನೀಡಿದ ಭಜರಂಗ ದಳ, ಇದೇ ರೀತಿ ಶಿಬಿರಗಳನ್ನು ಸುಲ್ತಾನ್​ಪುರ, ಗೋರಖ್​ಪುರ, ಪಿಲಿಭಿತ್, ನೋಯ್ಡಾ, ಗಾಜಿಯಾಬಾದ್​ನಲ್ಲೂ ತರಬೇತಿ ನಡೆಸುವುದಾಗಿ ಘೋಷಿಸಿತ್ತು.


ಆದರೆ, ವಿಶ್ವ ಹಿಂದೂಪರಿಷತ್ ನ ಸಂಘಟನೆ ಭಜರಂಗ ದಳ ವಿರುದ್ಧ ಐಪಿಸಿ ಸೆಕ್ಷನ್ 1532-ಎ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಫೈಜಾಬಾದ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
An FIR has been lodged against the Bajrang Dal activists, following a video showing them taking part in a mock drill where men wearing skull caps have been portrayed as terrorists.
Please Wait while comments are loading...