ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಗ್ರಹ್ ಟೇಪ್ಸ್ ಪ್ರಕರಣ: ಮಾಜಿ ಸಿಎಂ ಅಜಿತ್ ಜೋಗಿ ವಿರುದ್ಧ ಎಫ್ಐಆರ್

|
Google Oneindia Kannada News

ರಾಯ್ ಪುರ್(ಛತ್ತೀಸ್ ಗಢ), ಫೆಬ್ರವರಿ 04: 2014ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಡೆಸಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್ಐ ಆರ್ ಹಾಕಿದ್ದಾರೆ.

ಕೋಲ್ಕತ್ತಾದಲ್ಲಿ ಭಾನುವಾರ ಹೈ ಡ್ರಾಮಾ: ಸಿಬಿಐ ವರ್ಸಸ್ ಪೊಲೀಸ್ಕೋಲ್ಕತ್ತಾದಲ್ಲಿ ಭಾನುವಾರ ಹೈ ಡ್ರಾಮಾ: ಸಿಬಿಐ ವರ್ಸಸ್ ಪೊಲೀಸ್

ಕಾಂಗ್ರೆಸ್ಸಿನ ಕಿರಣ್ಮಯಿ ನಾಯಕ್ ಅವರ ದೂರಿನನ್ವಯ ಛತ್ತೀಸ್ ಗಢ ಪೊಲೀಸರು ಈ ಕ್ರಮ ಜರುಗಿಸಿದ್ದಾರೆ. ಅಮಿತ್ ಜೋಗಿ, ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ರಾಝೇಶ್ ಮುನಾತ್, ಮಾಂತುರಾಮ್ ಪವಾರ್ ಹಾಗೂ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಅಳಿಯ ಪುನೀತ್ ಗುಪ್ತಾ ಅವರು ಅಂತಗ್ರಹ್ ಆಡಿಯೋ ಸೋರಿಕೆ ಪ್ರಕರಣದ ಆರೋಪಿಗಳಾಗಿದ್ದಾರೆ.

2014ರ ಛತ್ತೀಸ್ ಗಢ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಜಿತ್ ಜೋಗಿ ಹಾಗೂ ಅವರ ಪುತ್ರ ಅಮಿತ್ ಮತ್ತು ಗುಪ್ತಾ ನಡುವೆ ಚುನಾವಣಾ ಫಿಕ್ಸಿಂಗ್ ಬಗ್ಗೆ ಮಾತುಕತೆ ನಡೆದಿತ್ತು. ಮಂತುರಾಮ್ ಪವಾರ್ ಅವರು ಬುಡಕಟ್ಟು ಜನಾಂಗದ ನಾಯಕರಾಗಿದ್ದು, ಅಂತಗ್ರಹ್ ವಿಧಾನಸಭಾ ಕ್ಷೇತ್ರ(ಎಸ್ ಟಿ) ದಿಂದ ಸ್ಪರ್ಧೆಗಿಳಿದಿದ್ದರು.

FIR Against Ajit Jogi, His Son And Others In Antagarh Tape Scam Case

ಆದರೆ, ಜೋಗಿ ಅವರು ಫಿಕ್ಸಿಂಗ್ ಮೂಲಕ ಚುನಾವಣೆ ಫಲಿತಾಂಶ ಬದಲಾವಣೆಗೆ ಕಾರಣರಾಗಿದ್ದರು. ಕೊನೆ ಕ್ಷಣದಲ್ಲಿ ಅಭ್ಯರ್ಥಿಯು ಕಣದಿಂದ ಹಿಂದಕ್ಕೆ ಸರಿಯುವ ಮೂಲಕ ಬಿಜೆಪಿಗೆ ಜಯ ಲಭಿಸುವಂತೆ ಮಾಡಿದ್ದರು. ಸದ್ಯ ಮಂತುರಾಮ್ ಪವಾರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

ಅಗಸ್ಟಾ ವೆಸ್ಟ್ ಲ್ಯಾಂಡ್: ಎರಡನೇ ಆರೋಪಿ ಸಕ್ಸೇನ ದುಬೈನಿಂದ ಭಾರತಕ್ಕೆ ಅಗಸ್ಟಾ ವೆಸ್ಟ್ ಲ್ಯಾಂಡ್: ಎರಡನೇ ಆರೋಪಿ ಸಕ್ಸೇನ ದುಬೈನಿಂದ ಭಾರತಕ್ಕೆ

ಜೋಗಿ ಅವರ ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್ಸಿಗ ಕಿರಣ್ಮಯಿ ನಾಯಕ್ ಅವರು ಪಂಡ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 406, 420 ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

English summary
An FIR has been registered against former Chhattisgarh Chief Minister Ajit Jogi, his son Amit Jogi, BJP leader and former minister Rajesh Munat, Manturam Pawar and former Chief Minister Raman Singh's son-in-law Puneet Gupta in the Antagarh tape scam case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X