• search

ತೈಲ ದರ 1 ಪೈಸೆ ಕಡಿತಗೊಳಿಸಿ ಹಾಸ್ಯಕ್ಕೆ ಗುರಿಯಾದ ಸರ್ಕಾರ!

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಕೊನೆಗೂ ಪೆಟ್ರೋಲ್ ಡೀಸೆಲ್ ದರ 1 ಪೈಸೆಗೆ ಇಳಿಕೆ | Oneindia Kannada

    ನವದೆಹಲಿ, ಮೇ 31: ಪೆಟ್ರೋಲ್ ಬೆಲೆ ಕೇವಲ 1 ಪೈಸೆ ಕಡಿಮೆ ಮಾಡಿ ಕೇಂದ್ರ ಸರ್ಕಾರ ಜನರ ಹಾಸ್ಯಕ್ಕೆ ಗುರಿಯಾಗಿದೆ. ಇದರ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮೊದಲು 60 ಪೈಸೆ ಕಡಿತಗೊಳಿಸುವಂತೆ ತಿಳಿಸಿದ್ದರೂ ನಂತರದಲ್ಲಿ ಕೇವಲ 1 ಪೈಸೆ ಕಡಿಮೆ ಮಾಡಿದ್ದಾರೆ.

    ಸತತ 16 ದಿನಗಳು ತೈಲ ಬೆಲೆ ಏರಿಕೆಗೊಂಡಿತ್ತು. ಆದರೆ 60 ಪೈಸೆಯಾದರೂ ಕಡಿಮೆಯಾಗಬಹುದು ಎಂದು ತೈಲ ಕಂಪನಿಗಳು ಹಾಗೂ ಜನರಿಗಿದ್ದ ನಿರೀಕ್ಷೆ ಹುಸಿಯಾಗಿದೆ.

    16 ದಿನಗಳ ಏರಿಕೆ ನಂತರ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ

    ಕೆಟ್ಟ ಅಭಿರುಚಿಯ ಕೀಟಲೆ: ಪ್ರೀತಿಯ ಪ್ರಧಾನಿಯವರೇ, ಪೆಟ್ರೋಲ್‌, ಡೀಸೆಲ್‌ ದರವನ್ನು ಲೀಟರ್‌ಗೆ ಒಂದು ಪೈಸೆ ಇಳಿಸಿದ್ದೀರಿ. ಒಂದು ಪೈಸೆಯೇ!? ಕೀಟಲೆ ಮಾಡುವುದು ನಿಮ್ಮ ಉದ್ದೇಶವಾಗಿದ್ದರೆ ಅದು ಬಹಳ ಕೆಟ್ಟ ಅಭಿರುಚಿಯದ್ದಾಗಿದೆ.

    Finally, the long-awaited cut in fuel prices — all of 1 paisa

    ವಿ.ಸೂ: ನಾನು ನಿಮ್ಮ ಮುಂದೆ ಇರಿಸಿದ್ದ 'ತೈಲ ಬೆಲೆ ಇಳಿಕೆ ಸವಾಲಿಗೆ' ಒಂದು ಪೈಸೆ ಇಳಿಕೆ ಸರಿಯಾದ ಪ್ರತಿಕ್ರಿಯೆ ಅಲ್ಲ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ತೈಲ ದರದಲ್ಲಿ 60 ಪೈಸೆ ಕಡಿಮೆ ಮಾಡಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಮೊದಲಿಗೆ ಘೋಷಿಸಿತ್ತು. ದಿನವೂ ತೈಲ ದರ ಪರಿಷ್ಕರಣೆ ವ್ಯವಸ್ಥೆಯನ್ನು ಕಳೆದ ಜೂನ್‌ನಲ್ಲಿ ಜಾರಿಗೊಳಿಸಿದ ಬಳಿಕ ಇದು ಅತ್ಯಂತ ದೊಡ್ಡ ಕಡಿತವಾಗಿತ್ತು. ಆದರೆ, ತಾಸಿನೊಳಗೆ ಸ್ಪಷ್ಟೀಕರಣ ನೀಡಿದ ಐಒಸಿ, ತಾಂತ್ರಿಕ ಲೋಪದಿಂದಾಗಿ 60 ಪೈಸೆ ಕಡಿತ ಎಂಬುದು ಪ್ರಕಟವಾಗಿದೆ. ನಿಜವಾದ ಕಡಿತ ಒಂದು 'ಪೈಸೆ' ಎಂದು ತಿಳಿಸಿತು.

    ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗುತ್ತಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯವೂ ಏರಿಕೆಯಾಗುತ್ತಿದೆ. ಹಾಗಾಗಿ ತೈಲ ಆಮದು ಅಗ್ಗವಾಗಲಿದೆ. ಪರಿಣಾಮವಾಗಿ ಮುಂದಿನ ದಿನಗಳಲ್ಲಿ ತೈಲ ಬೆಲೆ ಇಳಿಯಲಿದೆ' ಎಂದು ಐಒಸಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

    ಸಿಂಗಪುರದಲ್ಲಿ ಪೆಟ್ರೋಲ್‌ ಬೆಲೆ ಮತ್ತು ಅರಬ್‌ ಕೊಲ್ಲಿಯಲ್ಲಿ ಡೀಸೆಲ್‌ ದರಗಳ 15 ದಿನಗಳ ಸರಾಸರಿಯನ್ನು ತೆಗೆದುಕೊಂಡು ಭಾರತದ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ನಿಗದಿ ಮಾಡುತ್ತವೆ.

    ಮೇ 15ರಿಂದ ಮೇ 29ರವರೆಗಿನ ಸರಾಸರಿ ದರದ ಆಧಾರದಲ್ಲಿ ಮೇ 30ರ ತೈಲ ದರವನ್ನು ನಿರ್ಧರಿಸಲಾಗುತ್ತದೆ. ಮೇ 16ರಿಂದ ಮೇ 31ರವರೆಗಿನ ಸರಾಸರಿ ದರದ ಅಧಾರದಲ್ಲಿ ಜೂನ್‌ 1ರ ತೈಲ ಬೆಲೆ ನಿಗದಿಯಾಗುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರುವ ಕಚ್ಚಾ ತೈಲ ಬೆಲೆ ಕುಸಿತದ ಪರಿಣಾಮ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳಲ್ಲಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    The government suffered considerable embarrassment on Wednesday when the first fuel price reduction in a month turned into a 'cruel joke' for consumers because of a “technical glitch” by state-run oil companies. After first indicating a 60-paise reduction, they hastily clarified within a few hours that the cut in petrol and diesel rates actually amounted to 1 paisa per litre.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more