ಜಾರ್ಖಂಡ್‌ನ ನಟಿ ಹತ್ಯೆ ಪ್ರಕರಣದಲ್ಲಿ ತಿರುವು: ಪತಿಯನ್ನು ಬಂಧಿಸಿದ್ದೇಕೆ ಪೊಲೀಸರು?

ಕೋಲ್ಕತ್ತಾ, ಡಿಸೆಂಬರ್ 29: ಪಶ್ಚಿಮ ಬಂಗಾಳದ ಹೆದ್ದಾರಿಯಲ್ಲಿ ಜಾರ್ಖಂಡ್‌ನ ನಟಿ ರಿಯಾ ಕುಮಾರಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆಕೆಯ ಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯಾಗಿರುವ ನಟಿ ರಿಯಾ ಕುಮಾರಿ ಅವರ ಕುಟುಂಬವು ಅವರ ಪತಿ ಪ್ರಕಾಶ್ ಕುಮಾರ್ ಮತ್ತು ಅವರ ಸಹೋದರರ ವಿರುದ್ಧ ದೂರು ದಾಖಲಿಸಿದ ನಂತರ ಬಂಧಿಸಲಾಗಿದೆ ಎಂದು ಹೌರಾ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಸ್ವಾತಿ ಭಂಗಾಲಿಯಾ ತಿಳಿಸಿದ್ದಾರೆ.

ರಿಯಾ ಕುಮಾರಿ ದಂಪತಿ ತಮ್ಮ ಮೂರು ವರ್ಷದ ಮಗಳೊಂದಿಗೆ ರಾಂಚಿಯಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿತ್ತು.

Film Producer Arrested After Actor Wifes Murder During Highway Robbery

ಹೌರಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಬುಧವಾರ ಮುಂಜಾನೆ ಈ ಘಟನೆ ನಡೆದಿದೆ.

ಅವರ ಕಾರನ್ನು ಪೊಲೀಸರು ವಶಪಡಿಸಿಕೊಂಡು ನಿನ್ನೆ ಪತಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಕೊಲೆಯಲ್ಲಿ ಆತನ ಪಾತ್ರವಿದೆ ಎಂದು ಶಂಕಿಸಿದ್ದಾರೆ.

ಹಲ್ಲೆ ಮತ್ತು ಚಿತ್ರಹಿಂಸೆ ಸೇರಿ ಇತರ ಪ್ರಕರಣಗಳನ್ನು ಎದುರಿಸುತ್ತಿರುವ ಕುಮಾರ್ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು.

'ನಾವು ನಟಿಯ ಪತಿಯನ್ನು ಬಂಧಿಸಿದ್ದೇವೆ. ಕಾರನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ವಶಪಡಿಸಿಕೊಳ್ಳಲಾಗಿದೆ. ನಟಿ ರಿಯಾ ಕುಮಾರಿ ಅವರ ಪತಿಯ ವಿರುದ್ಧ ಆಕೆಯ ಕುಟುಂಬ ಸದಸ್ಯರು ದೂರು ನೀಡಿದ್ದರು. ಈ ದೂರಿನ ಅನ್ವಯ ಆಕೆಯ ಪತಿಯನ್ನು ವಶಕ್ಕೆ ಪಡೆದಿದ್ದೇವೆ. ಆತನ ಮೇಲೆ ಹಲ್ಲೆ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಹಲವಾರು ಪ್ರಕರಣಗಳವೆ. ಈ ಕುರಿತಾಗಿಯೂ ವಿಚಾರಣೆ ನಡೆಸುತ್ತಿದ್ದೇವೆ. ಈತನನ್ನು ಜಾರ್ಖಂಡ್‌ ಪೊಲೀಸರಿಗೆ ಒಪ್ಪಿಸುತ್ತೇವೆ' ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Film Producer Arrested After Actor Wifes Murder During Highway Robbery

ನಟಿಯ ಪತಿ ತಾನೇ ಕೊಲೆ ಮಾಡಿ ಬೇರೆಯವರ ಮೇಲೆ ಹೊರಿಸಲು ಯತ್ನಿಸಿದ್ದಾನೆ. ಈ ಹಿಂದೆಯೂ ನಟಿಯ ಮೇಲೆ ಆತ ಮತ್ತು ಆತನ ಸಹೋದರರು ಹಲ್ಲೆ ನಡೆಸಿದ್ದರು. ಕಿರುಕುಳ ನೀಡಿದ್ದರು. ಈ ಹಿಂದಿನಿಂದಲೂ ಆತ ರಿಯಾ ಕುಮಾರಿಗೆ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಲೇ ಬಂದಿದ್ದಾನೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ರಿಯಾ ಕುಮಾರಿ ಅವರು ಜಾರ್ಖಂಡ್‌ನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರು ಹಲವು ಸ್ಟೇಜ್‌ ಶೋಗಳನ್ನು ನೀಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿರುವ ಅವರಿಗೆ ಚಿಕ್ಕ ವಯಸ್ಸಿನ ಮಗುವಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ಬಂಗಾಳ ಪೊಲೀಸರು ಜಾರ್ಖಂಡ್‌ ಪೊಲೀಸರೊಂದಿಗೆ ಫೋನಿನಲ್ಲಿ ಸಂವಹನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+