ಸಭೆಯ ಮಧ್ಯದಲ್ಲಿಯೇ ಕೌನ್ಸಿಲರ್‌ಗಳ ನಡುವೆ ಫೈಟೋ.. ಫೈಟು... ವಿಡಿಯೋ ವೈರಲ್
ಲಕ್ನೋ ಡಿಸೆಂಬರ್ 29: ಉತ್ತರ ಪ್ರದೇಶದ ಶಾಮ್ಲಿ ಪುರಸಭೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಆರ್‌ಎಲ್‌ಡಿ ಶಾಸಕ ಮತ್ತು ಪುರಸಭೆ ಅಧ್ಯಕ್ಷರ ನಡುವೆ ತೀವ್ರ ಫೈಟ್ ನಡೆದಿದೆ. ಕೌನ್ಸಿಲರ್‌ಗಳು ಪರಸ್ಪರ ಕಪಾಳಮೋಕ್ಷ ಮಾಡಿ ಹೊಡೆದಾಡಿಕೊಂಡಿರುವ ದೃಶ್ಯ ವೈರಲ್ ಆಗಿದೆ. ಪಾಲಿಕೆ ಸಭೆಯಲ್ಲಿ 4 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳ ಚರ್ಚೆ ವೇಳೆ ಈ ಹೊಡೆದಾಟ ನಡೆದಿದೆ ಎಂದು ಹೇಳಲಾಗುತ್ತಿದೆ.
ಡಿಸೆಂಬರ್ 26 ರ ಸಂಜೆ, ಶಾಮ್ಲಿ ಮುನ್ಸಿಪಾಲಿಟಿ ಕೌನ್ಸಿಲ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಎರಡನೇ ಬಾರಿಗೆ ಮಂಡಳಿಯ ಸಭೆ ನಡೆಸಲಾಯಿತು. ಸಭೆಯಲ್ಲಿ ಪುರಸಭೆ ಅಧ್ಯಕ್ಷ ಅರವಿಂದ ಸಂಗಲ್, ಆರ್‌ಎಲ್‌ಡಿ ಶಾಸಕ ಪ್ರಸನ್ನ ಚೌಧರಿ ಉಪಸ್ಥಿತರಿದ್ದರು. ಈ ಸಮಯದಲ್ಲಿ ಪೊಲೀಸರೂ ಹಾಜರಿದ್ದರು.

ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಚರ್ಚೆ ನಡೆಯುತ್ತಿದ್ದಾಗ ಇಬ್ಬರು ಪಾಲಿಕೆ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಕೌನ್ಸಿಲರ್‌ಗಳ ನಡುವೆ ಜಗಳ ಪ್ರಾರಂಭವಾಯಿತು. ಪರಸ್ಪರ ಹೊಡೆದಾಟ ಶುರುವಾಯಿತು. ಈ ನಡುವೆ ಪೊಲೀಸ್ ಠಾಣೆಯ ಪ್ರಭಾರಿ ಸಮಯಪಾಲ್ ಅತ್ರಿ ಅವರನ್ನು ತಡೆದರು.
ಸಭೆಯಲ್ಲಿ ವಾರ್ಡ್ ಸಂಖ್ಯೆ 8ರ ಕೌನ್ಸಿಲರ್ ಅಜಿತ್ ನಿರ್ವಾಲ್ ತಮ್ಮ ವಾರ್ಡ್ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದರು. ಈ ಹಿಂದೆ ಅಭಿವೃದ್ಧಿಗಾಗಿ 4 ಕೋಟಿ ರೂಪಾಯಿ ಖರ್ಚಿನ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ವಾರ್ಡ್ ನಂ.2ರ ಪಾಲಿಕೆ ಸದಸ್ಯ ಬಾಬ್ಬಿ ಮಧ್ಯಪ್ರವೇಶಿಸಿದ್ದು, ಉಭಯ ಪುರಸಭಾ ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು. ಬಳಿಕ ಸಭೆಯನ್ನು ಮುಂದೂಡಲಾಯಿತು. ಪೊಲೀಸರು ಮತ್ತು ಹಿರಿಯ ಮುಖಂಡರ ಎದುರೇ ಇಡೀ ಘಟನೆ ನಡೆದಿದೆ.
जब विकास कार्य हुए ही नहीं तो समीक्षा बैठक में और क्या होता, इसीलिए शामली में सभासदों के मध्य जमकर शारीरिक प्रहारों का आदान-प्रदान हुआ।
— Akhilesh Yadav (@yadavakhilesh) December 28, 2023
भाजपा राज का सबक : समीक्षा बैठक में अपनी सुरक्षा का प्रबंध स्वयं करके आएं। pic.twitter.com/9Fb8wBVwmh
ಅಖಿಲೇಶ್ ಯಾದವ್ ಟ್ವೀಟ್
ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗುರುವಾರ ಶಾಮ್ಲಿಯಲ್ಲಿ ನಡೆದ ಸಭೆಯಲ್ಲಿ ಮುನ್ಸಿಪಲ್ ಕೌನ್ಸಿಲ್ ಸದಸ್ಯರು ಪರಸ್ಪರ ಗುದ್ದಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ತರಾಟೆಗೆ ತೆಗೆದುಕೊಂಡರು.
ಈ ಹೊಡೆದಾಟದ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಅಖಿಲೇಶ್ ಯಾದವ್ ಹೀಗೆ ಬರೆದಿದ್ದಾರೆ,- ''ಯಾವುದೇ ಅಭಿವೃದ್ಧಿ ಕೆಲಸ ಮಾಡದಿದ್ದಾಗ ಪರಿಶೀಲನಾ ಸಭೆಯಲ್ಲಿ ಇನ್ನೇನು ಆಗಿರಬಹುದು? ಅದಕ್ಕಾಗಿಯೇ ಶಾಮ್ಲಿಯಲ್ಲಿ ಕೌನ್ಸಿಲರ್‌ಗಳ ನಡುವೆ ದೈಹಿಕ ಹಲ್ಲೆಗಳು ನಡೆಸಿವು. ಬಿಜೆಪಿ ಆಡಳಿತದ ಪಾಠ ಇದು : ನಿಮ್ಮ ಸ್ವಂತ ಭದ್ರತೆಯನ್ನು ಏರ್ಪಡಿಸಿದ ನಂತರ ಪರಿಶೀಲನಾ ಸಭೆಗೆ ಬನ್ನಿ" ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications