ಕೋವಿಡ್; 22 ರಾಜ್ಯಗಳಿಗೆ 890 ಕೋಟಿ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ, ಆಗಸ್ಟ್ 06: ಕೋವಿಡ್ ಪರಿಸ್ಥಿತಿ ಎದುರಿಸಲು ಕೇಂದ್ರ ಸರ್ಕಾರ 22 ರಾಜ್ಯಗಳಿಗೆ 890.32 ಕೋಟಿ ರೂ. ಬಿಡುಗಡೆ ಮಾಡಿದೆ. ಉಪಕರಣಗಳ ಖರೀದಿ, ಸಿಬ್ಬಂದಿಗೆ ತರಬೇತಿ ಮುಂತಾದವುಗಳಿಗೆ ಈ ಅನುದಾನ ಖರ್ಚು ಮಾಡಬಹುದು.

ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ ಅನುದಾನದಲ್ಲಿ 2ನೇ ಕಂತನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಐಸಿಯುಗಳ ಸ್ಥಾಪನೆ. ಕೋವಿಡ್ ಪರೀಕ್ಷೆ ಲ್ಯಾಬ್ ಆರಂಭ ಸೇರಿದಂತೆ ತುರ್ತು ಅಗತ್ಯಗಳಿಗೆ ಇದನ್ನು ಬಳಕೆ ಮಾಡಬಹುದು.

ಕರ್ನಾಟಕ, ಛತ್ತೀಸ್‌ಗಢ, ಗುಜರಾತ್, ಆಂಧ್ರಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ ಸೇರಿದಂತೆ 22 ರಾಜ್ಯಗಳಿಗೆ ಈ ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಿದೆ. ಏಪ್ರಿಲ್‌ನಲ್ಲಿ ಮೊದಲ ಹಂತದ ಅನುದಾನಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿತ್ತು.

Fight Against COVID 19 Union Govt Released 890 Crore To 22 States

ಈ ಅನುದಾನವನ್ನು ಆರ್‌ಟಿ-ಪಿಸಿಆರ್ ಉಪಕರಣ ಖರೀದಿ, ಆಕ್ಸಿಜನ್ ಜನರೇಟರ್ ಸ್ಥಾಪನೆ, ಆಮ್ಲಜನಕ ವಿತರಣೆ ವ್ಯವಸ್ಥೆ ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಉಪಯೋಗಕ್ಕೆ ಬಳಕೆ ಮಾಡಬಹುದಾಗಿದೆ.

ಕೋವಿಡ್ ಪರಿಸ್ಥಿತಿ ನಿರ್ವಹಣೆ ಮಾಡಲು ಬೇಕಾದ ಸಿಬ್ಬಂದಿ ನೇಮಕಾತಿ, ತರಬೇತಿ ಮುಂತಾದವುಗಳಿಗೆ ಸಹ ರಾಜ್ಯಗಳು ಖರ್ಚು ಮಾಡಬಹುದು. ಹಲವು ರಾಜ್ಯಗಳು ಕೋವಿಡ್ ಪರಿಸ್ಥಿತಿ ಎದುರಿಸಲು ಅನುದಾನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+