ಬಂಗೀ ಜಂಪ್ ಅಪಘಾತ, ನಟಿ ನತಾಷಾ ಸ್ಥಿತಿ ಗಂಭೀರ!

ಬೆಂಗಳೂರು, ಮಾರ್ಚ್ 21: ಫೆಮಿನಾ ಮಿಸ್ ಇಂಡಿಯಾ ಬೆಡಗಿ, ನಟಿ ನತಾಷಾ ಸುರಿ, ಇಂಡೋನೇಷಿಯಾದಲ್ಲಿ ಬಂಗೀ ಜಂಪ್ ವೇಳೆ ಆಯತಪ್ಪಿ ಬಿದ್ದು, ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಇಂಡೋನೇಷ್ಯಾದಲ್ಲಿ ಮಳಿಗೆಯೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ನತಾಷಾ ಸುರಿ ಭಾಗವಹಿಸಿದ್ದರು. ನಂತರ, ಬಂಗೀ ಜಂಪ್ ಸಾಹಸ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು. ಎತ್ತರದಿಂದ ಹಾರಿದ್ದು, ಅವರು ಕಟ್ಟಿಕೊಂಡಿದ್ದ ಹಗ್ಗ ತುಂಡಾಗಿದೆ. ನತಾಷಾ ಅವರು ಆಳದ ಕಂದಕಕ್ಕೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.

Femina Miss India World 2006 Natasha Suri during bungee jumping in Indonesia

ನತಾಷಾ ಅವರು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರೂ, ಇನ್ನೂ ಚೇತರಿಕೆ ಕಂಡಿಲ್ಲ. 24 ಗಂಟೆಗಳ ನಂತರ ಆರೋಗ್ಯ ಪರಿಸ್ಥಿತಿ ಬಗ್ಗೆ ತಿಳಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

ನತಾಷಾ ಅವರು 2006ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದರು. 2016ರಲ್ಲಿ ಮಲಯಾಳಂ ಚಿತ್ರ 'ಕಿಂಗ್ ಲಿಯರ್' ಚಿತ್ರದಲ್ಲಿ ಸೂಪರ್ ಸ್ಟಾರ್ ದಿಲೀಪ್ ಅವರ ಜತೆ ಅಭಿನಯಿಸಿದ್ದರು. ಇದಾದ ಬಳಿಕ ಬಿಗ್ ಸ್ವಿಚ್, ಸೂಪರ್ ಡೂಡ್, ಸೆಲ್ ಗುರು ಹಾಗೂ ಸ್ಟೈಲ್ ಪೊಲೀಸ್ ಮುಂತಾದ ಶೋಗಳನ್ನು ನಡೆಸಿಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+