ಮೊಬೈಲ್ ಖರೀದಿಸಲು ಮಗನನ್ನೇ ಮಾರಿದ ತಂದೆ!

Subscribe to Oneindia Kannada

ಭುವನೇಶ್ವರ, ಸೆಪ್ಟೆಂಬರ್ 13: ಮಗನಿಗೆ ಮೊಬೈಲ್ ಖರೀದಿಸಿಕೊಡಲು ಏನೇನೋ ಒದ್ದಾಟ ಮಾಡುವ ತಂದೆಯಂದಿರ ಕಥೆ ನೀವು ಕೇಳಿರಬಹುದು. ಆದರೆ ಇಲ್ಲೊಬ್ಬ ತಂದೆ ಮೊಬೈಲ್ ಖರೀದಿಸಲು ತನ್ನ ಮಗನನ್ನೇ ಮಾರಾಟ ಮಾಡಿದ್ದಾನೆ. ಒಡಿಶಾದಲ್ಲಿ ಈ ಘಟನೆ ನಡೆದಿದೆ.

ಒಡಿಶಾದ ಭದ್ರಕ್ ನಿವಾಸಿ, ಕಸ ಗುಡಿಸೋ ಕೆಲಸ ಮಾಡುತ್ತಿರುವ ಬಲರಾಮ್ ಮುಖಿ ತನ್ನ 11 ತಿಂಗಳ ಮಗುವನ್ನು ನಿವೃತ್ತ ಸರಕಾರಿ ಚಾಲಕರೊಬ್ಬರಿಗೆ ಮಾರಿದ್ದಾನೆ.

Father sold his 11-month-old son for purchasing mobile in Odisha

ಇತ್ತೀಚೆಗೆ ನಿವೃತ್ತ ಚಾಲಕ ಸೋಮನಾಥ್ ಸೇಥಿ ದಂಪತಿ ತಮ್ಮ 24 ವರ್ಷದ ಮಗನನ್ನು ಕಳದುಕೊಂಡು ದುಃಖಿತರಾಗಿದ್ದರು. ಇದೇ ಸಮಯದಲ್ಲಿ ಬಲರಾಮ್ ಮಗನನ್ನು 25,000 ಸಾವಿರ ರೂಪಾಯಿಗಳಿಗೆ ಸೇಥಿಗೆ ಮಗುವನ್ನು ಮಾರಿದ್ದಾನೆ.

ಈ ಹಣದಲ್ಲಿ 2,000 ರೂಪಾಯಿಯ ಮೊಬೈಲ್ ಹಾಗೂ ಮಗಳಿಗೆ ಬೆಳ್ಳಿಯ ಕಾಲ್ಗೆಜ್ಜೆ ಕೊಂಡುಕೊಂಡಿದ್ದಾನೆ. ಉಳಿದ ಹಳದಲ್ಲಿ ಕಂಠಪೂರ್ತಿ ಕುಡಿದಿದ್ದಾನೆ.

ಇದೀಗ ಮಗನನ್ನೇ ಮಾರಾಟ ಮಾಡಿದ ಬಲರಾಮ್ ನನ್ನು ಭದ್ರಕ್ ಪೊಲೀಸರು ಬಂಧಿಸಿದ್ದಾರೆ. ಬಲರಾಮ್ ಮತ್ತು ಸುಕುತಿ ದಂಪತಿಗೆ 10 ವರ್ಷದ ಇನ್ನೋರ್ವ ಮಗನೂ ಇದ್ದಾನೆ ಎಂದು ಭದ್ರಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Man arrested from Odisha's Bhadrak district for selling his 11-month-old son for Rs 25000. He spent that money on mobile phone, silver anklet and alcohol.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ