ವಿಧಾನಸಭೆ, ಲೋಕಸಭೆ ಚುನಾವಣೆಯನ್ನೂ ಬಹಿಷ್ಕರಿಸುತ್ತೇವೆ: ಅಬ್ದುಲ್ಲಾ ಎಚ್ಚರಿಕೆ

ಶ್ರೀನಗರ, ಸೆಪ್ಟೆಂಬರ್ 08: "ಕೇಂದ್ರ ಸರ್ಕಾರ ಸಂವಿಧಾನದ 35A ಮತ್ತು 370ನೇ ವಿಧಿಯ ಬಗೆಗಿನ ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳದೆ ಇದ್ದಲ್ಲಿ ನಾವು ಕೇವಲ ಪಂಚಾಯತ್ ಚುನಾವಣೆಯನ್ನು ಮಾತ್ರವಲ್ಲ, ವಿಧಾನಸಭೆ, ಲೋಕಸಭೆ ಚುನಾವಣೆಯನ್ನೂ ಬಹಿಷ್ಕರಿಸುತ್ತೇವೆ" ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿಮಾತನಾಡುತ್ತಿದ್ದ ಅವರು, "ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಪಾಕಿಸ್ತಾನಕ್ಕೆ ತೆರಳಿದ್ದಾಗ ಅದರ ವಿರುದ್ಧ ದೇಶದಲ್ಲಿ ನಡೆದ ವಿವಾದ ಸ್ವಾಗತಾರ್ಹವಲ್ಲ. ಪಾಕಿಸ್ತಾನ ಮತ್ತು ಭಾರತದ ಸಂಬಂಧ ಸುಧಾರಣೆಯಾಗಬೇಕು. ಈ ಥರದ ಮನೋಭಾವ ಎರಡೂ ದೇಶಗಳ ನಡುವಲ್ಲಿ ಶಾಂತಿ-ಸೌಹಾರ್ದತೆ ಸೃಷ್ಟಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಭಾರತ ಮತ್ತು ಪಾಕ್ ನಡುವೆ ಶಾಂತಿ ಬೇಕಿದೆ" ಎಂದಿದ್ದಾರೆ ಅಬ್ದುಲ್ಲಾ.

"ಮುಸ್ಲಿಮರು ಎಂದಿಗೂ ಹಿಂದು ಅಥವಾ ಕ್ರೈಸ್ತರ ಬಳಿ ತಮ್ಮ ಧರ್ಮದ ಆಚರಣೆಗಳನ್ನು ಬದಲಿಸಿಕೊಳ್ಳಲು ಕೇಳಿಲ್ಲ. ಆದರೆ ನಮ್ಮ ಆಚರಣೆಯಾದ ಆಜಾನ್ ಅನ್ನು ಬದಲಿಸಲು ಅವರು ಕೇಳಿದರೆ ಆಗ ಗಾಂಧಿಯವರ ಭಾರತವನ್ನು ಬದಲಿಸಬೇಕಾಗುತ್ತದೆ. ನಮ್ಮ ದೇಶವನ್ನು ಕಾಪಾಡಬೇಕೆಂದರೆ ನಾವು ಎಲ್ಲಾ ಧರ್ಮಗಳನ್ನೂ ಸಮಾನವಾಗಿ ನೋಡಬೇಕು ಮತ್ತು ಗೌರವಿಸಬೇಕು" ಎಂದಿದ್ದಾರೆ ಅಬ್ದುಲ್ಲಾ.

Farooq abdullah threats to boycott elections

"ವಾಜಪೇಯಿ ಅವರಂಥ ಆರೆಸ್ಸೆಸ್ ಮುಖಂಡರೇ ಪ್ರಧಾನಿಯಾಗಿದ್ದಾಗ ಪಾಕಿಸ್ತಾನಕ್ಕೆ ತೆರಳಿ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಮಾತುಕತೆ ಮಾಡುತ್ತಾರೆ ಎಂದಾದರೆ ಪ್ರಧಾನಿ ನರೇಂದ್ರ ಮೋದಿಯವರೂ ಅದನ್ನು ಯಾಕೆ ಮಾಡಬಾರದು? ನೆರೆಹೊರೆಯವರೊಂದಿಗೆ ಚೆನ್ನಾಗಿದ್ದರೆ ನಮ್ಮ ದೇಶವೂ ಚೆನ್ನಾಗಿರುತ್ತದೆ" ಎಂದು ಆವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+