• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರಿಯಾಣದಲ್ಲಿ ಪೊಲೀಸ್ ಲಾಠಿಚಾರ್ಜ್ ಮರುದಿನವೇ ರೈತರಿಂದ ರಸ್ತೆ ತಡೆ

|
Google Oneindia Kannada News

ನವದೆಹಲಿ, ಆಗಸ್ಟ್ 29: ಹರಿಯಾಣ ಕರ್ನಾಲ್ ಜಿಲ್ಲೆಯ ಘರೌದಾ ಟೋಲ್ ಪ್ಲಾಜಾದ ಬಳಿ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಮರುದಿನವೇ ನುಹ್ ನಗರದಲ್ಲಿ ರೈತರು ಮಹಾಪಂಚಾಯತ್ ನಡೆಸುತ್ತಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಎಲ್ಲ ರೈತ ಸಂಘಟನೆಗಳು ಮತ್ತು ಮುಖಂಡರು ಈ ಮಹಾಪಂಚಾಯತ್ ಸಭೆಯಲ್ಲಿ ಭಾಗವಹಿಸಿದ್ದರು. ಸಂಯುಕ್ತ ಕಿಸಾನ್ ಮೋರ್ಚಾಮುಖಂಡ ಧರ್ಶನ್ ಪಾಲ್, ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಮತ್ತು ಬಲ್ಬೀರ್ ಸಿಂಗ್ ರಜ್ಜೇವಾಲ ಹಾಗೂ ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಸಭೆಯಲ್ಲಿ ಹಾಜರಾಗಿದ್ದರು. ಶನಿವಾರ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಈ ಘಟನೆ ನಡೆಯುವುದಕ್ಕೂ ಮೊದಲೇ ಇಂದಿನ ಸಭೆಗೆ ಸಮಯವನ್ನು ನಿಗದಿಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.

ಹರಿಯಾಣ ರೈತರ ಮೇಲೆ ಲಾಠಿ ಚಾರ್ಜ್: 'ಮತ್ತೆ ರಕ್ತ ಹರಿದಿದೆ' ಎಂದ ರಾಹುಲ್‌ ಗಾಂಧಿ ಹರಿಯಾಣ ರೈತರ ಮೇಲೆ ಲಾಠಿ ಚಾರ್ಜ್: 'ಮತ್ತೆ ರಕ್ತ ಹರಿದಿದೆ' ಎಂದ ರಾಹುಲ್‌ ಗಾಂಧಿ

ಹರಿಯಾಣದಲ್ಲಿ ರೈತರ ಮೇಲೆ ನಡೆಸಿದ ಹಿಂಸಾಚಾರವನ್ನು ಖಂಡಿಸಿ ಭಾನುವಾರ ಮಧ್ಯಾಹ್ನ ಎರಡು ಗಂಟೆವರೆಗೂ ಜಲಂಧರ್ ಮತ್ತು ದೆಹಲಿಯ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಯಿತು. ಇದರ ಜೊತೆ ಜಲಂಧರ್ ಪಿಎಪಿ ಚೌಕ್ ಪ್ರದೇಶದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆ ನಡೆಸಿದ್ದು, ಇದೇ ಅವಧಿಯಲ್ಲಿ ಅಮೃತಸರ್ ಮತ್ತು ಲೂಧಿಯಾನ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ನೆರೆಯ ಪಂಜಾಬ್ ರಾಜ್ಯದಲ್ಲೂ ರಾಷ್ಟ್ರೀಯ ಹೆದ್ದಾರಿಗಳನ್ನು ಎರಡು ಗಂಟೆಯ ಅವಧಿ ಬಂದ್ ಮಾಡಲಾಗುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಜೋಗಿಂದರ್ ಉಗ್ರಾಹನ್ ತಿಳಿಸಿದ್ದಾರೆ.

ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ರಸ್ತೆ ತಡೆ

ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ರಸ್ತೆ ತಡೆ

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪರವಾಗಿ ರಾಜ್ಯಮಟ್ಟದ ಸಭೆಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಈ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ಶನಿವಾರದವೇ ರಾಜ್ಯದ ಹಲವು ಕಡೆಗಳಲ್ಲಿ ರಸ್ತೆ ತಡೆ ನಡೆಸಲಾಗಿತ್ತು. ಕಳೆದ ಜೂನ್ ತಿಂಗಳಿನಲ್ಲಿ ಸಭೆ ನಡೆಸಿದ್ದ ಸಿಎಂ ಖಟ್ಟರ್, ತಮ್ಮ ಮಿತಿಯನ್ನು ಮೀರಿ ನಡೆದುಕೊಳ್ಳುವುದು ಯಾರಿಗೂ ಒಳ್ಳೆಯದಲ್ಲ ಎನ್ನುವ ಮೂಲಕ ರೈತರಿಗೆ ಎಚ್ಚರಿಕೆ ನೀಡಿದ್ದರು. ರೈತರ ವಿರುದ್ಧ ಸಿಎಂ ನೀಡಿದ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ರೈತರ ಮೇಲಿನ ಲಾಠಿಚಾರ್ಜ್ ಬಳಿಕ ಚಿತ್ರಣ ಹೇಗಿತ್ತು?

ರೈತರ ಮೇಲಿನ ಲಾಠಿಚಾರ್ಜ್ ಬಳಿಕ ಚಿತ್ರಣ ಹೇಗಿತ್ತು?

ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ನಿಯಂತ್ರಿಸಲು ಅತ್ಯಂತ ಕಡಿಮೆ ಪ್ರಮಾಣದ ಭದ್ರತಾ ಪಡೆ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು ಎಂದು ಕರ್ನಾಲ್ ಪೊಲೀಸ್ ಐಜಿ ಮಮತಾ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಘಟನೆ ನಂತರ ಆ ಪ್ರದೇಶದಲ್ಲಿನ ಚಿತ್ರಣ ಬೇರೆಯದ್ದೇ ಕಥೆಯನ್ನು ಹೇಳುತ್ತದೆ. ರೈತರ ಬಟ್ಟೆಗಳಿಗೆ ನೆತ್ತರು ಅಂಟಿಕೊಂಡಿದ್ದರೆ, ಹಲವು ಬ್ಯಾಂಡೆಜ್ ಹಾಕಿಕೊಂಡಿದ್ದಾರೆ. ಇನ್ನು ಕೆಲವು ಮಂದಿ ಗಂಭೀರವಾಗಿ ಗಾಯಗೊಂಡಿರುವುದರ ಬಗ್ಗೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರೈತರು ಹಾಗೂ ವಿರೋಧ ಪಕ್ಷಗಳ ಆಗ್ರಹದ ನಡುವೆಯೂ ಕರ್ನಾಲ್ ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾ ವಿರುದ್ಧ ಯಾವುದೇ ರೀತಿ ಕಾನೂನು ಕ್ರಮ ತೆಗೆದುಕೊಂಡಿಲ್ಲ ಎಂದು ದೂಷಿಸಲಾಗುತ್ತಿದೆ.

ರೈತರ ಮೇಲೆ ಸರ್ಕಾರಿ ಪ್ರಾಯೋಜಿತ ಹಲ್ಲೆ ಎಂಬ ಆರೋಪ

ರೈತರ ಮೇಲೆ ಸರ್ಕಾರಿ ಪ್ರಾಯೋಜಿತ ಹಲ್ಲೆ ಎಂಬ ಆರೋಪ

ರಾಹುಲ್‌ ಗಾಂಧಿಯವರು ಹಿಂಸಾತ್ಮಕ ಛಾಯಾಚಿತ್ರವನ್ನು ಟ್ವೀಟ್‌ ಮಾಡಿದ್ದು, ಆ ಚಿತ್ರದಲ್ಲಿ ಬಿಳಿ ಕುರ್ತಾ ಪೈಜಾಮಾ ರಕ್ತದಿಂದ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಹಾಗೆಯೇ ರೈತರ ತಲೆಯ ಮೇಲೆ ಗಾಯವಾಗಿದ್ದು, ಬಟ್ಟೆಯು ರಕ್ತದಿಂದ ತೋಯ್ದು ಹೋಗಿದೆ. ಇನ್ನಿಬ್ಬರು ಆ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತಿರುವುದು ಚಿತ್ರದಲ್ಲಿ ಕಂಡು ಬಂದಿದೆ. ಈ ಚಿತ್ರದೊಂದಿಗೆ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, "ಮತ್ತೊಮ್ಮೆ ರೈತರ ರಕ್ತ ಹರಿದಿದೆ ಮತ್ತು ಭಾರತ ನಾಚಿಕೆಯಿಂದ ತಲೆ ಬಾಗಿದೆ," ಎಂದು ಹೇಳಿದ್ದಾರೆ.

ರೈತರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್ ಅನ್ನು ಖಂಡಿಸಿರುವ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಇದೊಂದು ಸರ್ಕಾರಿ ಪ್ರಾಯೋಜಿಕತ್ವದ ದಾಳಿಯಾಗಿದೆ. ಪೊಲೀಸರು ನಡೆಸಿರುವ ಹಲ್ಲೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಕ್ಕೆ ಆಗುವುದಿಲ್ಲ ಎಂದು ಕಿಡಿ ಕಾರಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಬೀಸಿರುವುದು ಖಂಡಿತ ತಪ್ಪು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ದೆಹಲಿ ಗಡಿಯಲ್ಲಿ ಮುಂದುವರಿದ ರೈತರ ಹೋರಾಟ

ದೆಹಲಿ ಗಡಿಯಲ್ಲಿ ಮುಂದುವರಿದ ರೈತರ ಹೋರಾಟ

ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ. ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ರೈತರು ಪ್ರತಿಭಟನೆ ನಡೆಸಿದರು.

ರೈತರು ವಿರೋಧಿಸುತ್ತಿರುವ ಕೃಷಿ ಕಾಯ್ದೆಗಳು ಯಾವುವು?:

ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

English summary
Farmers Mahapanchayat Day: After Clashes With Cops in Haryana farmers holds Road Blocked in many Cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion