ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಡಿಸೆಂಬರ್ 8ರಂದು ಭಾರತ್ ಬಂದ್‌ಗೆ ಕರೆ ನೀಡಿದ ರೈತರು

|
Google Oneindia Kannada News

ನವದೆಹಲಿ, ಡಿ.4 : ಕೃಷಿ ವಿಧೇಯಕ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಜೊತೆ ಕೇಂದ್ರ ಸರ್ಕಾರದ ಸತತ ಮಾತುಕತೆ ವಿಫಲವಾಗಿದೆ. ಪ್ರತಿಭಟನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸಮಯ ಬಂದಿದೆ ಎಂದು ರೈತ ಸಮೂಹ ನಿರ್ಧರಿಸಿದ್ದು, ಡಿಸೆಂಬರ್ 8ರಂದು ಭಾರತ್ ಬಂದ್‌ಗೆ ಕರೆ ನೀಡಿದೆ.

"ನಿನ್ನೆ ಕೇಂದ್ರ ಸರ್ಕಾರದ ಜೊತೆ ನಡೆದ ಸಭೆಯಲ್ಲಿ ಕೃಷಿ ವಿಧೇಯಕಗಳನ್ನು ಹಿಂಪಡೆಯುವಂತೆ ಆಗ್ರಹಿಸಲಾಯಿತು. ಮಾತುಕತೆ ಫಲಪ್ರದವಾಗದ ಕಾರಣ, ನಮ್ಮ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದು, ಡಿಸೆಂಬರ್ 8ರಂದು ಭಾರತ್ ಬಂದ್ ನಡೆಸಲು ಕರೆ ನೀಡಲಾಗಿದೆ" ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು-ಲಖೋವಾಲ್) ಪ್ರಧಾನ ಕಾರ್ಯದರ್ಶಿ ಎಚ್.ಎಸ್ ಲಖೋವಾಲ್ ಅವರು ಸಿಂಘು ಗಡಿಯಲ್ಲಿ ಹೇಳಿದರು.

 ದೇಶಾದ್ಯಂತ ರೈತರ ಹೋರಾಟದ ಕಿಚ್ಚು; ತಿಪ್ಪೆ ಸಾರಿಸಬೇಡಿ ಕಾಯಿದೆಗಳನ್ನು ಹಿಂಪಡೆಯಿರಿ... ದೇಶಾದ್ಯಂತ ರೈತರ ಹೋರಾಟದ ಕಿಚ್ಚು; ತಿಪ್ಪೆ ಸಾರಿಸಬೇಡಿ ಕಾಯಿದೆಗಳನ್ನು ಹಿಂಪಡೆಯಿರಿ...

ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ ಅವರು ಮಾತನಾಡಿ, ಕೃಷಿ ವಿಧೇಯಕವನ್ನು ಕೇಂದ್ರ ಸರ್ಕಾರವನ್ನು ಹಿಂಪಡೆಯುವ ತನಕ ನಮ್ಮ ಹೋರಾಟ ನಿಲ್ಲದು

Farmer Groups Call for Bharat Bandh on December 8

ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರೈತ ಸಂಘಟನೆಗಳ ಒಕ್ಕೂಟದ ಮುಖಂಡ ರಾಖೇಶ್ ಟಿಕಾಯತ್ "ನಮ್ಮ ಒತ್ತಾಯ ಇರುವುದು ಇಡೀ ಕಾಯಿದೆಗಳನ್ನು ರದ್ದುಪಡಿಸಬೇಕೆಂದು. ಇಲ್ಲಿ ಅನೇಕ ವಿಷಯಗಳನ್ನು ಚರ್ಚಿಸಿದ್ದೇವೆ. ಆದರೆ ಸರ್ಕಾರ ಎಂ.ಎಸ್.ಪಿ ಹಾಗೂ ಈಗಿರುವ ಕಾಯಿದೆಗಳಿಗೆ ತಿದ್ದುಪಡಿ ತರುವ ಮಾತುಗಳನ್ನಾಡುತ್ತಿದೆ" ಎಂದಿದ್ದಾರೆ.

Recommended Video

ಶಿವಮೊಗ್ಗದಲ್ಲಿ IGP Ravi ಅವರಿಗೆ ಚಾಕು ತೋರಿಸಿದ ಯುವಕ | Oneindia Kannada

ನವೆಂಬರ್.26ರಿಂದ ರೈತರ ಪ್ರತಿಭಟನೆ ಆರಂಭಗೊಂಡಿದ್ದು, ಇದುವರೆಗೂ ನಡೆಸಿದ ಮೂರು ಸಂಧಾನ ಸಭೆಗಳು ವಿಫಲವಾಗಿವೆ. ಡಿಸೆಂಬರ್ 5ರಂದು ಮತ್ತೊಂದು ಸುತ್ತಿನ ಮಾತುಕತೆ ಕರೆಯಲಾಗಿದೆ.

English summary
Farmer leaders from various association on Friday called for protests against the three new farm laws to be intensified and called for Bharat Bandh on 8 December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X