ತೆಲಂಗಾಣದಲ್ಲಿ ಮನೆಗೆ ಬೆಂಕಿ: ಒಂದೇ ಕುಟುಂಬದ 6 ಸದಸ್ಯರು ಸಜೀವ ದಹನ
ಹೈದರಾಬಾದ್ ಡಿಸೆಂಬರ್ 17: ತೆಲಂಗಾಣದ ಮಂಚಾರ್ಯಾಲ (Mancharyala) ಜಿಲ್ಲೆಯಲ್ಲಿ ಶನಿವಾರ ಮನೆಯೊಂದಕ್ಕೆ ಬೆಂಕಿ ತಗುಲಿ ಒಂದೇ ಕುಟುಂಬದ ಆರು ಸದಸ್ಯರು ಸಜೀವ ದಹನಗೊಂಡಿದ್ದಾರೆ. ಈ ಅಗ್ನಿ ಅವಘಡದಲ್ಲಿ ಮನೆ ಮಾಲೀಕ ಶಿವಯ್ಯ (50), ಅವರ ಪತ್ನಿ ಪದ್ಮಾ (45), ಪದ್ಮಾ ಅವರ ಅಕ್ಕನ ಮಗಳು ಮೌನಿಕಾ (23) ಮತ್ತು ಅವರ ಇಬ್ಬರು ಪುತ್ರಿಯರು ಸಾವನ್ನಪ್ಪಿದ್ದಾರೆ.
ಮಂದಮರಿ ಸರ್ಕಲ್ನ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ಮಾತನಾಡಿ, ತೆಲಂಗಾಣದ ಮಂದಮರ್ರಿ ಮಂಡಲದ ವೆಂಕಟಾಪುರದ ಮನೆಯಲ್ಲಿ ಶಿವಯ್ಯ ಮತ್ತು ಅವರ ಪತ್ನಿ ಪದ್ಮಾ ವಾಸವಾಗಿದ್ದರು. ಎರಡು ದಿನಗಳ ನಂತರ ಪದ್ಮಾ ಅವರ ಸೊಸೆ ಮೌನಿಕಾ, ಇಬ್ಬರು ಹೆಣ್ಣುಮಕ್ಕಳು ಮತ್ತು ಶಾಂತಯ್ಯ ಎಂಬ ಮಹಿಳೆ ಅವರೊಂದಿಗೆ ವಾಸಿಸಲು ಆರಂಭಿಸಿದ್ದರು.

ರಾತ್ರಿ 12:00 ರಿಂದ 12:30 ರ ನಡುವೆ ಅವರ ಮನೆಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿರುವುದನ್ನು ನೆರೆಹೊರೆಯವರು ಗಮನಿಸಿದ್ದಾರೆ. ಕೂಡಲೇ ಗ್ರಾಮಸ್ಥರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ತಲುಪುವಷ್ಟರಲ್ಲಿ ಇಡೀ ಮನೆಗೆ ಬೆಂಕಿಗೆ ಹೊತ್ತುಕೊಂಡಿತ್ತು. ಮಾಹಿತಿಯ ಪ್ರಕಾರ, ಮನೆಯಲ್ಲಿದ್ದ ಒಟ್ಟು ಆರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಪ್ರಮೋದ್ ಹೇಳಿದ್ದಾರೆ. ಬೆಂಕಿಯ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications