• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಸಿಬಿಎಸ್ಇ ಕ್ಲಾಸ್ 10, 12 ರ ಪರೀಕ್ಷೆ ದಿನಾಂಕ ಘೋಷಣೆ?

|

ನವದೆಹಲಿ, ಏಪ್ರಿಲ್ 3: ಸಿಬಿಎಸ್ಇ ಕ್ಲಾಸ್ 10 ಹಾಗೂ 12ರ ಪರೀಕ್ಷೆ ದಿನಾಂಕಗಳು ಘೋಷಣೆಯಾಗಿವೆ. ಏಪ್ರಿಲ್ 22ರಿಂದ ಪರೀಕ್ಷೆ ನಡೆಯಲಿದೆ ಎಂಬ ಸಂದೇಶ ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬಿದೆ. ಆದರೆ, ಇದು ಸತ್ಯಕ್ಕೆ ದೂರವಾಗಿದೆ ಎಂಬ ಸ್ಪಷ್ಟಣೆ ಸಿಕ್ಕಿದೆ.

ಏಪ್ರಿಲ್ 25ರಿಂದ ಉತ್ತರಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ ಎಂದು ಕೂಡಾ ಪ್ರಕಟಣೆಯಲ್ಲಿ ಹೇಳಲಾಗಿದೆ. ಆದರೆ, ಸಿಬಿಎಸ್ಇ ಈ ರೀತಿ ಯಾವುದೇ ಪ್ರಕಟಣೆ ಹೊರಡಿಸಿಲ್ಲ.

ಕೊವಿಡ್19 ಕದನ: 18 ದೇಶಗಳ ಟಾಸ್ಕ್ ಫೋರ್ಸ್‌ಗೆ ಮೋದಿ ನಾಯಕ?

ಈ ಬಗ್ಗೆ ಸ್ಪಷ್ಟಣೆ ಕೊಟ್ಟಿರುವ ಸಿಬಿಎಸ್ಇ, ಕೇಂದ್ರ ಸರ್ಕಾರ, ಉನ್ನತ ಶಿಕ್ಷಣ, ಶಾಲಾ ಶಿಕ್ಷಣ ಇಲಾಖೆ, ಗೃಹ ಸಚಿವಾಲಯ ನೀಡಿರುವ ಸೂಚನೆ(ಮಾರ್ಚ್ 18ರ ಆದೇಶ)ಯಂತೆ, ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮಾರ್ಚ್ 18 ರಿಂದ ಮಾರ್ಚ್ 31ರ ತನಕ ಪರೀಕ್ಷೆಗಲು ನಿಗದಿಯಾಗಿತ್ತು. ಪರೀಕ್ಷಾ ದಿನಾಂಕ ಪರಿಷ್ಕರಣೆಗೊಂಡ ಬಳಿಕ ಬದಲಿ ದಿನಾಂಕ ಕುರಿತಂತೆ ಬೋರ್ಡ್ ವೆಬ್ ಸೈಟ್, ಟ್ವಿಟ್ಟರ್ ಸೇರಿದಂತೆ ಎಲ್ಲಾ ಲಭ್ಯ ಮಾಧ್ಯಮಗಳ ಮೂಲಕ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ಕೊವಿಡ್19 ಸಂದರ್ಭದಲ್ಲಿ ಶಾಲಾ ಸಿಬ್ಬಂದಿ, ವಿದ್ಯಾರ್ಥಿ, ಪೋಷಕರ ಆತಂಕವನ್ನು ಗಮನದಲ್ಲಿಟ್ಟುಕೊಂಡು ಬೋರ್ಡ್ ತನ್ನ ನಿರ್ಣಯವನ್ನು ತೆಗೆದುಕೊಳ್ಳಲಿದೆ.

1 ರಿಂದ 8 ನೇ ಕ್ಲಾಸ್ ತನಕದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಪಾಸ್ ಮಾಡಿ ಮುಂದಿನ ತರಗತಿಗೆ ಕಳಿಸಬಹುದು. 9 ರಿಂದ 11 ರ ತನಕ ವಿದ್ಯಾರ್ಥಿಗಳ ಪ್ರಾಜೆಕ್ಟ್ ವರ್ಕ್, ಅಸೈನ್ಮೆಂಟ್, ಟರ್ಮ್ ಎಕ್ಸಾಂ ಆಧಾರದ ಮೇಲೆ ಮುಂದಿನ ತರಗತಿಗೆ ಕಳಿಸಬಹುದು. 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದ್ದು, ದಿನಾಂಕವನ್ನು ಮುಂದಿನ ಪ್ರಕಟಣೆಯಲ್ಲಿ ತಿಳಿಸಲಾಗುತ್ತದೆ.

English summary
A press release stating that the CBSE class 10 and 12 exams would resume from April 22 2020 has been doing the rounds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X