ಅಸ್ಸಾಂನ ಶಾಸಕಿ ಲತಾ ಬಗ್ಗೆ ಸ್ವಾರಸ್ಯಕರ ಸಂಗತಿ

Posted By:
Subscribe to Oneindia Kannada

ಗುವಾಹಟಿ, ಮೇ 26: ಬಾಲಿವುಡ್ ನ ನಿರ್ದೇಶಕ ರಾಮ ಗೋಪಾಲ್ ವರ್ಮಾ ಸುಂದರಿ ಎಂದಿರುವ ಅಸ್ಸಾಂನ ಬಿಜೆಪಿ ಶಾಸಕಿ ಕಮ್ ನಟಿ ಅಂಗೂರ್ ಲತಾ ದೇಕಾ ಬಗ್ಗೆ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ.

ಅಸ್ಸಾಂನಲ್ಲಿ ಟೂರಿಂಗ್ ಟಾಕೀಸ್ ರೀತಿ ಸುತ್ತುವ ಮೊಬೈಲ್ ಥಿಯೇಟರ್ ಕಂಪನಿಗಳ ಮೂಲಕ ಜನಪ್ರಿಯತೆ ಗಳಿಸಿದ ನಟಿ ಅಂಗೂರ್ ಲತಾ ದೇಕಾ ಅವರು ಈಗ ಬಿಜೆಪಿಯ ಶಾಸಕಿಯಾಗಿದ್ದಾರೆ. [ಅಸ್ಸಾಂನಲ್ಲಿ ಬಿಜೆಪಿ ಆಡಳಿತ ಆರಂಭ, ಸಿಎಂ ಆದ ಸೋನೊವಾಲ್]

ಅಸ್ಸಾಂ ಮೊಬೈಲ್ ಥಿಯೇಟರ್ ಕ್ಷೇತ್ರಗಳಲ್ಲಿ 'ಬೆನಜೀರ್ ಭುಟ್ಟೋ' ಎಂದೇ ಹೆಸರುವಾಸಿಯಾಗಿದ್ದ ಲತಾ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಬಾವುಟ ಹಿಡಿದು ಅಸ್ಸಾಂನ ಮಾಜಿ ಸಚಿವರೊಬ್ಬರ ವಿರುದ್ಧ ಜಯ ದಾಖಲಿಸಿದರು. ಅಂಗೂರ್ ಲತಾ ದೇಕಾ ಬಗ್ಗೆ ಒಂದಿಷ್ಟು ವಿವರ ಮುಂದಿದೆ...

Angoorlata Deka

* ನಲ್ಬಾರಿಯಲ್ಲಿ ಜನಿಸಿದ ಅಂಗೂರ್ ಲತಾ ಗೆ ಚಿಕ್ಕಂದಿನಿಂದಲೇ ನಟನೆಗಿಂತಲೂ ನೃತ್ಯಗಾರ್ತಿಯಾಗುವ ಬಯಕೆ ಇತ್ತು. ಬರ್ನಾಲಿ ಮಹಂತಾ ಅವರ ಶಿಷ್ಯೆಯಾಗಿ ಕಥಕ್ ನೃತ್ಯದಲ್ಲಿ ಪರಿಣತಿ ಹೊಂದಬೇಕು ಎಂಬ ಆಸೆ ಇರಿಸಿಕೊಂಡಿದ್ದ ಆಕೆ ಕೊನೆ ನಟಿಯಾಗಿ ಹೆಚ್ಚು ಪ್ರಚಾರ ಪಡೆದರು. [ಅಸ್ಸಾಂ ಶಾಸಕಿ ಸುಂದರಿ ಎಂದ ವರ್ಮಾ ಇನ್ ಟ್ರಬಲ್!]

* ನಟಿಯಾಗಲು ಮನೆಯಲ್ಲಿ ವಿರೋಧವಿತ್ತು: ಡ್ಯಾನ್ಸ್ ತರಬೇತಿ ಸಂದರ್ಭದಲ್ಲಿ ನಿರ್ದೇಶಕ ಚಕ್ರಹಾರ್ ದೆಕಾ ಕಣ್ಣಿಗೆ ಬಿದ್ದ ಲತಾ ಅವರನ್ನು 'ಪ್ರೇಮ್ ಭೋರಾ ಸೊಕುಲು' ಎಂಬ ಚಿತ್ರದ ನಾಯಕಿಯಾಗುವಂತೆ ಆಫರ್ ನೀಡಿದರು. ಆದರೆ, ಲತಾ ನಟಿಯಾಗುವುದು ಮನೆಯವರಿಗೆ ಇಷ್ಟವಿರಲಿಲ್ಲ.[ಬಿಜೆಪಿಯ ಕನಸಿನ 'ಕಾಂಗ್ರೆಸ್ ಮುಕ್ತ್ ಭಾರತ್' ಹತ್ತಿರ, ಇನ್ನಷ್ಟು ಹತ್ತಿರ]

* ನಂತರ ಅಂತಾರಾಷ್ಟ್ರೀಯ ಖ್ಯಾತಿಯ ನಟಿ ಸೀಮಾ ಬಿಸ್ವಾಸ್ ಭೇಟಿ ಮಾಡಿದ ನಂತರ ಲತಾ ಅವರ ಬದುಕು ಬದಲಾಯಿತು. ಸೀಮಾ ಅವರು ಖುದ್ದು ಲತಾ ಅವರ ಮನೆಗೆ ತೆರಳಿ ಮನೆಯವರಿಗೆ ಸಿನಿಮಾ ಜಗತ್ತಿನ ಪರಿಚಯ ಮಾಡಿಸಿ, ಲತಾ ಅವರನ್ನು ಸಿನಿಮಾ ಜಗತ್ತಿಗೆ ಕರೆ ತಂದರು.

-
-
-
-
-
-
ಅಸ್ಸಾಂನ ಶಾಸಕಿ ಅಂಗೂರ್ ಲತಾ ದೇಕಾ

ಅಸ್ಸಾಂನ ಶಾಸಕಿ ಅಂಗೂರ್ ಲತಾ ದೇಕಾ

-
-
-
-
-

* 8 ವರ್ಷಗಳ ಕಾಲ ಮೊಬೈಲ್ ಥಿಯೇಟರ್ ನಲ್ಲಿ ಜನಪ್ರಿಯ ನಟಿಯಾಗಿ ಬೆಳೆದ ಲತಾ 2008ರಲ್ಲಿ ಬೆನಜೀರ್ ಭುಟ್ಟೋ ಪಾತ್ರ ಮಾಡಿ ತಮ್ಮ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡರು.

* ನಟ ತಪನ್ ದಾಸ್ ರನ್ನು ಗುರುವಾಗಿ ಕಾಣುವ ಲತಾ ಅವರು 'ಜುಂಡಾ ಎಮಾನ್ ಗುಂಡಾ?', 'ಬಕೊರ್ ಪುಟೆಕ್' ಮುಂತಾದ ಚಿತ್ರಗಳಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದರು.

* ಆಸ್ಸಾಂ ಸಿನಿಮಾ ಜಗತ್ತಿನ ನಟ ಅಕಾಶ್ ದೀಪ್ ರನ್ನು ಮದುವೆಯಾಗಿರುವ ಲತಾ ಅವರು ನಾಗಾಂವ್ ನ ನಿವಾಸಿಯಾಗಿದ್ದು, ಅದೇ ಕ್ಷೇತ್ರದಿಂದ ಅಸೆಂಬ್ಲಿಗೆ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Facts You Need to Know About actress turned politician Assam BJP MLA Angoorlata Deka. She got married with Actor Akaasheep, they live in Batadraba (Nagaon) form where she fought election and win this year.
Please Wait while comments are loading...