ಪ್ರಜಾಪ್ರಭುತ್ವದ ದೇವಾಲಯ, ಹೊಸ ಸಂಸತ್ತಿನ ಕಟ್ಟಡದ ಬಗ್ಗೆ ತಿಳಿಯಿರಿ

ನವದೆಹಲಿ, ಮೇ. 28: ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಿದ್ದಾರೆ. ಲೋಕಸಭಾ ಸ್ಪೀಕರ್ ಕುರ್ಚಿ ಬಳಿ ಐತಿಹಾಸಿಕ ರಾಜದಂಡ 'ಸೆಂಗೊಲ್' ಅನ್ನು ಸ್ಥಾಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಪೂಜೆ ಹಾಗೂ ಸರ್ವಧರ್ಮ ಪ್ರಾರ್ಥನೆ ನಡೆದಿದೆ. ಇದರ ಜೊತೆಗೆ ನಾವು ನಮ್ಮ ಪ್ರಜಾಪ್ರಭುತ್ವದ ದೇಗುಲಲ ಬಗ್ಗೆ ತಿಳಿದಿರಬೇಕಾದ ಅಂಶಗಳು ಇಲ್ಲಿವೆ.

ಪ್ರಧಾನಿ ನೂತನ ಕಟ್ಟಡದ ಸ್ಮರಣ ಫಲಕವನ್ನು ಅನಾವರಣಗೊಳಿಸಿದ್ದಾರೆ. ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಗಣ್ಯರು ಉಪಸ್ಥಿತರಿದ್ದರು. ಸಂಸತ್ತಿನ ಹೊಸ ಕಟ್ಟಡಕ್ಕೆ ಕಾಲಿಟ್ಟ ಪ್ರಧಾನಿ ಮೋದಿಗೆ 'ಸೆಂಗೊಲ್' ಹಸ್ತಾಂತರಿಸಿದ ನಂತರ ಅದನ್ನು ಸ್ಥಾಪಿಸಿದ್ದಾರೆ.

Facts About New Parliament Building

* ಈ ಹೊಸ ಸಂಸತ್ತಿನ ಒಳಭಾಗವು ಮೂರು ರಾಷ್ಟ್ರೀಯ ಚಿಹ್ನೆಗಳಾದ ಕಮಲ, ನವಿಲು ಮತ್ತು ಆಲದ ಮರವನ್ನು ಅದರ ಮುಖ್ಯ ಥೀಮ್ ಆಗಿ ಹೊಂದಿದೆ.

* ಹೊಸ ಸಂಸತ್ ಕಟ್ಟಡವನ್ನು ಟಾಟಾ ಪ್ರಾಜೆಕ್ಟ್ ಲಿಮಿಟೆಡ್ ನಿರ್ಮಿಸಿದೆ.

* ಹೊಸ ಸಂಸತ್ತಿನ ಕಟ್ಟಡವು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಭವ್ಯವಾದ ಸಂವಿಧಾನ ಭವನವನ್ನು ಹೊಂದಿದೆ

* ಸಂಸದರಿಗೆ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಕಮಿಟಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಹೊಂದಿದೆ.

Facts About New Parliament Building

* ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ.

* ಸಂಸತ್ ಭವನ ಇದು ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ

* ಸಂಸತ್ ಭವನದಲ್ಲಿ ವಿಐಪಿಗಳು, ಸಂಸದರು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶದ್ವಾರಗಳಿವೆ

* ಹೊಸ ಕಟ್ಟಡಕ್ಕೆ ಬಳಸಲಾದ ವಸ್ತುಗಳನ್ನು ದೇಶದ ವಿವಿಧ ಭಾಗಗಳಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.

* ಈ ಕಟ್ಟಡದ ಲೋಕಸಭೆಯಲ್ಲಿ 888 ಸದಸ್ಯರು ಮತ್ತು ರಾಜ್ಯಸಭಾ ಕೊಠಡಿಯಲ್ಲಿ 300 ಸದಸ್ಯರು ಆರಾಮವಾಗಿ ಕುಳಿತುಕೊಳ್ಳಬಹುದು.

* ಉಭಯ ಸದನಗಳ ಜಂಟಿ ಅಧಿವೇಶನಕ್ಕಾಗಿ, 1,280 ಸಂಸದರಿಗೆ ಲೋಕಸಭೆಯ ಕೊಠಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+