ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಪ್ರಧಾನಿ ಮೋದಿ ಅಭಿನಂದಿಸಲು 5 ನಿಮಿಷ ಎದ್ದುನಿಲ್ಲಬೇಕೆ?

|
Google Oneindia Kannada News

ನವದೆಹಲಿ, ಏಪ್ರಿಲ್ 8: ಮನೆಯ ಹೊರಗಡೆ ಬಂದು ಚಪ್ಪಾಳೆ ತಟ್ಟಿದ್ದ ಹೌದು, ದೀಪ ಇಟ್ಟಿದ್ದೂ ಹೌದು ಆದರೆ ಐದು ನಿಮಿಷ ಮನೆಯಲ್ಲೇ ನಿಂತು ನರೇಂದ್ರ ಮೋದಿಗೆ ಗೌರವ ಸೂಚಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಸುದ್ದಿ ಮಾತ್ರ ಸುಳ್ಳು.

ಕೊರೊನಾ ವೈರಸ್ ವಿರುದ್ಧ ಹೋರಾಡಲು ಏಪ್ರಿಲ್ 12 ರಂದು ಭಾನುವಾರ 5 ನಿಮಿಷಗಳ ಕಾಲ ಎದ್ದು ನಿಂತು ನರೇಂದ್ರ ಮೋದಿಯವರಿಗೆ ಅಭಿನಂದನೆ ಸೂಚಿಸಿ ಎಂದು ಎಲ್ಲೆಡೆ ಪೋಸ್ಟರ್‌ಗಳು ಹರಿದಾಡುತ್ತಿವೆ.

ಆದರೆ ಈ ಸುದ್ದಿ ಸುಳ್ಳು, ಮೋದಿ ಅವರ ಭಾವಚಿತ್ರವಿರುವ ಪೋಸ್ಟರ್ ಒಂದು ಹರಿದಾಡುತ್ತಿದ್ದು, ಅದರಲ್ಲಿ ಏಪ್ರಿಲ್ 12ರಂದು ಸಂಜೆ 5 ಗಂಟೆಯ ವೇಳೆಗೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿ ಎಂದು ಬರೆಯಲಾಗಿದೆ.

Fact Check: People To Give Modi A Standing Ovation For Five Minutes

ಪ್ರಸಾರ ಭಾರತಿ ನ್ಯೂಸ್ ಸರ್ವೀಸ್ ನಡೆಸಿದ ಫ್ಯಾಕ್ಟ್‌ ಚೆಕ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಪೋಸ್ಟರ್‌ಗಳು ಹರಿದಾಡುತ್ತಿದ್ದು, ಯಾವುದೇ ಕಾರಣಕ್ಕೂ ಜನರು ಇಂತಹ ಸುದ್ದಿಗಳ ಕಡೆಗೆ ಗಮನ ಕೊಡಬೇಡಿ ಎಂದು ಮನವಿ ಮಾಡಲಾಗಿದೆ.

ಸುಖಾಸುಮ್ಮನೆ ಮೋದಿಯವರ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಳೆದು ತರಲಾಗುತ್ತಿದೆ. ' ನಿಜವಾಗಿಯೂ ನಿಮಗೆ ಗೌರವ ಸೂಚಿಸಬೇಕೆಂದರೆ ಬಡ ಕುಟುಂಬಗಳಿಗೆ ಸಹಾಯ ಮಾಡಿ, ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ' ಎಂದು ಮೋದಿ ಹೇಳಿದ್ದಾರೆ.

ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರ ಜೊತೆಗೆ ಕೊರೊನಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ಸಂಖ್ಯೆಯೂ ಏರಿಕೆಯಾಗಿದೆ.

English summary
Fact Check: People To Give Modi A Standing Ovation For Five Minutes,A viral poster has been circulating on various social media platforms but This News Is False.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X