Fact check: ಸೋಂಕುನಿವಾರಕ ಸಿಂಪಡಣೆಯಿಂದ ವೈರಸ್ ನಾಶ?
ನವದೆಹಲಿ, ಮೇ 17: ''ಈ ಸಾಂಕ್ರಾಮಿಕ ರೋಗವನ್ನು ತಡೆಯಲು ನಾವೆಲ್ಲರೂ ಸಹಕರಿಸಬೇಕು. ಹಾಗೆಯೇ ಈ ಪಿಡುಗಿನಿಂದ ನಾವು ಹೊರಬರಲು ಸಾಕಷ್ಟು ಸಮಯ ಬೇಕು ಎನ್ನುವುದನ್ನು ಅರಿತುಕೊಳ್ಳಬೇಕು'' ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಪ್ರಕಟಿಸಿದೆ. ಆದರೆ, ಸೋಂಕುನಿವಾರಕ ಸಿಂಪಡಣೆಯಿಂದ ವೈರಸ್ ನಾಶಪಡಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ ಎಂಬ ತಪ್ಪು ಮಾಹಿತಿ ಹಲವು ಮಾಧ್ಯಮ, ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬಿದೆ.
ಆದರೆ, ಈ ಬಗ್ಗೆ ಸ್ಪಷ್ಟನೆ ಸಿಕ್ಕಿದ್ದು, ರಸ್ತೆ, ಮನೆ, ಅಂಗಡಿ, ಮಳಿಗೆಗಳಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸುವುದರಿಂದ ಕೊರೊನಾವೈರಸ್ ಸೋಂಕು ತೊಲಗಿಸಲು ಸಾಧ್ಯವಿಲ್ಲ.
ವಸ್ತುಗಳ ಮೇಲೆ ವೈರಸ್ ಎಷ್ಟು ಕಾಲ ಜೀವಂತ ಇರಬಲ್ಲದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸೋಂಕಿತ ವ್ಯಕ್ತಿ ಬಳಸಿಕ ವಸ್ತುಗಳನ್ನು ಆರೋಗ್ಯವಂತರು ಬಳಸಿದಂತೆ ತಡೆಗಟ್ಟಲು ಸೋಂಕು ನಿವಾರಕ ಸಿಂಪಡಣೆ ಮಾಡುವುದು ಜಾರಿಯಲ್ಲಿದೆ.

ಆದರೆ, ಅನಗತ್ಯವಾಗಿ ರಾಸಾಯನಿಕಗಳನ್ನು ಸಿಂಪಡಿಸುವುದರಿಂದ ಆರೋಗ್ಯವಂತರಿಗೆ ದೈಹಿಕ ಹಾಗೂ ಮಾನಸಿಕವಾಗಿ ಕೆಟ್ಟ ಅಪ್ರಿಣಾಮ ಬೀರುವ ಸಾಧ್ಯತೆಯಿದೆ. ಕ್ಲೋರೊನ್ ಅಥವಾ ಇನ್ಯಾವುದೇ ಕೆಮಿಕಲ್ ಬಳಸುವುದರಿಂದ ಕಣ್ಣು, ಹೊಟ್ಟೆ, ಚರ್ಮಕ್ಕೆ ಹಾನಿಯಾಗುತ್ತದೆ. ಸೋಂಕು ನಿವಾರಕ ಸಿಂಪಡಣೆಯಿಂದ ವೈರಸ್ ಹರಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.












Click it and Unblock the Notifications