Flight to Tirupatiಳ ಗೊಂಡಿಯಾ- ಹೈದರಾಬಾದ್ ವಿಮಾನ ತಿರುಪತಿವರೆಗೆ ವಿಸ್ತರಣೆ
ನಾಗ್ಪುರ ನವೆಂಬರ್ 2: ಇಂಡಿಗೋ ಏರ್‌ಲೈನ್ಸ್ ಗೊಂಡಿಯಾ- ಹೈದರಾಬಾದ್ ವಿಮಾನವನ್ನು ತಿರುಪತಿವರೆಗೂ ವಿಸ್ತರಿಸುವ ಮೂಲಕ ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿಯನ್ನು ನೀಡಿದೆ. ಆಂಧ್ರಪ್ರದೇಶದ ತಿರುಪತಿ ದೇವಾಲಯಕ್ಕೆ ತೆರಳುವ ಭಕ್ತರಿಗೆ ಮತ್ತಷ್ಟು ಸಂಪರ್ಕವನ್ನು ಈ ಮೂಲಕ ಇಂಡಿಗೋ ಏರ್‌ಲೈನ್ಸ್ ಒದಗಿಸಿದೆ.
ಗೊಂಡಿಯಾದಿಂದ ಹೈದರಾಬಾದ್‌ಗೆ ತನ್ನ ಸೇವೆಯನ್ನು ಘೋಷಿಸಿರುವ ಇಂಡಿಗೋ ಏರ್‌ಲೈನ್ಸ್ ತಿರುಪತಿಗೂ ಸಂಪರ್ಕವನ್ನು ಒದಗಿಸಿದೆ. ಇದರಿಂದ ಈ ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ನಿರೀಕ್ಷೆಯಿದೆ ಎಂದು ವಿಮಾನಯಾನ ವಲಯದ ಮೂಲಗಳು ತಿಳಿಸಿವೆ. ಡಿಸೆಂಬರ್‌ನಿಂದ ಈ ಸೇವೆಗಳು ಆರಂಭವಾಗಲಿವೆ.

ತಿರುಮಲ ತಿರುಪತಿ ದೇವಾಲಯವನ್ನು ಹಿಂದೂ ಧರ್ಮ ಗ್ರಂಥಗಳಲ್ಲಿ ವಿಷ್ಣು ದೇವನು ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ವಿವರಿಸಲಾಗಿದೆ. ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಇಂದಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಬುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ನೋಡಬಹುದು.
ತಿರುಪತಿ ಬಾಲಾಜಿ ದೇವಾಲಯವು ಭೂಮಿಯ ಮೇಲಿನ ಅತ್ಯಂತ ಜನಪ್ರಿಯ ದೇವಾಲಯವಾಗಿದ್ದು, ವರ್ಷದ ಯಾವುದೇ ದಿನ ಈ ದೇವಾಲಯಕ್ಕೆ ಭೇಟಿ ನೀಡಬಹುದು. ಲಕ್ಷಾಂತರ ಜನ ನಿತ್ಯ ತಿರುಪತಿಗೆ ಭೇಟಿ ನೀಡುತ್ತಾರೆ. ಇಲ್ಲಿ ಭಕ್ತರು ತಮ್ಮೆಲ್ಲಾ ಇಚ್ಚೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ.
ಪ್ರಾದೇಶಿಕ ಸಂಪರ್ಕದ ಗುರಿ
ಗೊಂಡಿಯಾ ವಿವಿಧ ಸ್ಥಳಗಳಿಗೆ ಸಂಪರ್ಕಿಸುವ ಪ್ರಮುಖ ಸ್ಥಳವಾಗಿದ್ದು ಈ ಮಾರ್ಗದಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆಯಿದೆ. ಗೊಂಡಿಯಾವು ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶಕ್ಕೆ ಹತ್ತಿರದಲ್ಲಿದೆ ಮತ್ತು ಇದು ಮಧ್ಯ ಮತ್ತು ಪೂರ್ವ ಭಾರತಕ್ಕೆ ಗೇಟ್‌ವೇ ಎಂದು ಕರೆಯಲ್ಪಡುತ್ತದೆ.
ಇಂಡಿಗೋ ಏರ್‌ಲೈನ್ಸ್ ಗೊಂಡಿಯಾದ ಬಿರ್ಸಿ ವಿಮಾನ ನಿಲ್ದಾಣದಿಂದ ಈ ಸೇವೆಗಳನ್ನು ಘೋಷಿಸಿದೆ. ಅಮರಾವತಿಯ ಬೆಲೋರಾ ವಿಮಾನ ನಿಲ್ದಾಣ ಶೀಘ್ರದಲ್ಲೇ ವಾಣಿಜ್ಯ ವಿಮಾನಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಚಂದ್ರಾಪುರ, ಕರಡ್ ಮತ್ತು ಧುಲೆ ವಿಮಾನ ನಿಲ್ದಾಣಗಳು ಸಹ ಪ್ರಮುಖ ಪುನರ್ರಚನೆಗೆ ಒಳಗಾಗುತ್ತಿವೆ. ಅಕೋಲಾ ವಿಮಾನ ನಿಲ್ದಾಣವನ್ನು ನವೀಕರಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಟೆಂಡರ್‌ಗಳನ್ನು ನೀಡಿದೆ. ಜಲಗಾಂವ್ ವಿಮಾನ ನಿಲ್ದಾಣವು ಸೇವೆಗಳಿಗೆ ಸಿದ್ಧವಾಗಿದೆ. ಈ ಬೆಳವಣಿಗೆಗಳು ರಾಜ್ಯದಲ್ಲಿ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.
ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಅವರು ಭಾರತದ ಈಶಾನ್ಯ ರಾಜ್ಯಗಳ ನಗರಗಳಿಗೆ ನೇರ ವಿಮಾನಯಾನವನ್ನು ಪ್ರಾರಂಭಿಸಲು ವಿಯೆಟ್ನಾಂನಿಂದ ವಿಮಾನಯಾನ ಸಂಸ್ಥೆಗಳಿಗೆ ಕರೆ ನೀಡಿದ್ದಾರೆ. ಇದು ಎರಡೂ ದೇಶಗಳಿಗೆ ಹೆಚ್ಚಿದ ಹೂಡಿಕೆ ಮತ್ತು ಪ್ರವಾಸೋದ್ಯಮ ಅವಕಾಶಗಳನ್ನು ಒದಗಿಸುತ್ತದೆ.
ಆಗ್ನೇಯ ಏಷ್ಯಾದ ಗೇಟ್‌ವೇ ಎಂದು ಕರೆಯಲ್ಪಡುವ ಗುವಾಹಟಿಯು ಈಗಾಗಲೇ ಬ್ಯಾಂಕಾಕ್ ಮತ್ತು ಸಿಂಗಾಪುರಕ್ಕೆ ನೇರ ವಿಮಾನಗಳನ್ನು ಹೊಂದಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿದೆ ಎಂದು ಅವರು ಹೈಲೈಟ್ ಮಾಡಿದರು. ಇದರಿಂದ ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಮತ್ತಷ್ಟು ಬೆಳವಣಿಗೆಯ ಸಾಧ್ಯತೆಯಿದೆ ಎಂದು ಹೇಳಿದರು.












Click it and Unblock the Notifications