India Rain Alert: ದೇಶದ ಈ ಭಾಗಗಳಲ್ಲಿ 5ದಿನ ಭರ್ಜರಿ ಮಳೆ ಸಾಧ್ಯತೆ
IMD Weather Forecast: ಮುಂಗಾರು ಮಳೆಯು ಹಲವು ಭಾಗಗಳಲ್ಲಿ ಹಿಂತೆಗೆದುಕೊಳ್ಳಲು ಅನುಕೂಲಕರ ಪರಿಸ್ಥಿತಿಯಲ್ಲಿದೆ. ಕೆಲವು ವಾರಗಳಿಂದ ಧಾರಾಕಾರವಾಗಿ ಸುರಿದಿದ್ದ ಮುಂಗಾರು ಮಳೆ ಇದೀಗ ವಿವಿಧ ರಾಜ್ಯಗಳಲ್ಲಿ ದುರ್ಬಲಗೊಳ್ಳಲಿದೆ. ಇತ್ತ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತ, ವಾಯುವ್ಯ ಮತ್ತು ಮಧ್ಯ ಭಾರತದ ಭಾಗಗಳಲ್ಲಿ ರಣ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬದಲಾಗುತ್ತಿರು ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ಮುಂದಿನ ಐದು ದಿನಗಳ ಕಾಲ ವಿವಿಧೆಡೆ ಬಿರುಗಾಳಿ ಸಹಿತ ವ್ಯಾಪಕ ಮಳೆ ಆಗಲಿದೆ. ಸದ್ಯ ಮುಂಗಾರು ಮಳೆ ಸುರಿಸುವ ಮಾರುತುಗಳ ವಿವಿಧ ಕಡೆಗಳಲ್ಲಿ ಮತ್ತೆ ಸಕ್ರಿಯವಾಗಲಿದೆ. ಇಂದಿನ ಮುನ್ಸೂಚನೆ ಪ್ರಕಾರ, ಗುಜರಾತ್, ರಾಜಸ್ಥಾನ, ಹರಿಯಾಣ, ಪಂಜಾಬ್‌ನ ಕೆಲ ಭಾಗಗಳು ಉತ್ತರ ಪ್ರದೇಶ, ದೆಹಲಿ, ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದ ಸೇರಿ ಕೆಲವು ಪ್ರದೇಶಗಳಲ್ಲಿ ದುರ್ಬಲಗೊಳ್ಳುವ ನಿರೀಕ್ಷೆ ಇದೆ. ಇತ್ತ ದಕ್ಷಿಣ ಭಾರತ, ವಾಯುವ್ಯ ಭಾರತದ ಹಾಗೂ ಮಧ್ಯ ಭಾರತದ ಹಲವೆಡೆ ರಣ ಮಳೆ ಮುಂದುವರಿಯಲಿದೆ.

ಪಶ್ಚಿಮ ಬಂಗಾಳದ ಗಂಗಾನದಿಯ ತೀರ ಹಾಗೂ ಉತ್ತರ ಒಡಿಶಾ ಬಳಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಒಡಿಶಾ, ಛತ್ತೀಸ್‌ಗಢ, ತೆಲಂಗಾಣ, ಕರ್ನಾಟಕದ ಒಳನಾಡು ಭಾಗಗಳಲ್ಲಿ ಮಳೆ ಬೀಳುವ ನಿರೀಕ್ಷೆಯಿದೆ. ಇದೇ ವೇಳೆ, ಸೆಪ್ಟೆಂಬರ್ 25ರೊಳಗೆ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಪ್ರಸರಣವು ಸೃಷ್ಟಿಯಾಗಲಿದೆ. ಅದು ಸೆ. 26ರಂದು ದಕ್ಷಿಣ ಒಡಿಶಾ ಹಾಗೂ ಉತ್ತರ ಆಂಧ್ರ ಕರಾವಳಿ ತಲುಪುವ ಮುನ್ಸೂಚನೆ ಇದೆ. 27ರ ವೇಳೆಗೆ ಆ ಪ್ರದೇಶಗಳಲ್ಲಿ ಹೆಚ್ಚು ಧಾರಾಕಾರವಾಗಿ ಮಳೆ ಆಗಬಹುದೆಂದು ಹೇಳಲಾಗುತ್ತಿದೆ.
ಪೂರ್ವ ಮತ್ತು ಮಧ್ಯ ಭಾರತದಲ್ಲಿ ಸೆಪ್ಟೆಂಬರ್ 24 ರಿಂದ 27ರವರೆಗೆ ಒಡಿಶಾ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್ ಮತ್ತು ವಿದರ್ಭ ಪ್ರದೇಶಗಳಲ್ಲಿ ಮಳೆಯಾಗಲಿದೆ. ಕೆಲವು ಕಡೆ ಭಾರೀ ಮಳೆಯ ಸಾಧ್ಯತೆ ಇದೆ. ಪಶ್ಚಿಮ ಭಾರತದಲ್ಲಿ ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ 25 ರಿಂದ 29 ರವರೆಗೆ ಭಾರೀ ಮಳೆಯ ಮುನ್ಸೂಚನೆ ಇದೆ.
ಈಶಾನ್ಯ ಭಾರತದಲ್ಲಿಯೂ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ 24ರಿಂದ 29ರವರೆಗೆ ಮಳೆಯಾಗಲಿದೆ. ದಕ್ಷಿಣ ಭಾರತದಲ್ಲಿ ತೆಲಂಗಾಣ, ಆಂಧ್ರ ಕರಾವಳಿ, ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ 25ರಿಂದ 28ರವರೆಗೆ ಬಿರುಗಾಳಿ ಸಹಿತ ಅಬ್ಬರ ಮಳೆ ಆಗಬಹುದೆಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಏನಿದೆ ಮುನ್ಸೂಚನೆ?
ಕರ್ನಾಟಕ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಮಳೆ ಪ್ರಭಾವ ತಗ್ಗಿದೆ ಇದೇ ಸೆಪ್ಟಂಬರ್ 27 ರಿಂದ ಕರಾವಳಿ ಮೂರು ಜಿಲ್ಲೆಗಳು, ಮಲೆನಾಡಿನ ನಾಲ್ಕು ಜಿಲ್ಲೆಗಳು ಒಳಗೊಂಡಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ನಿರೀಕ್ಷೆ ಇದೆ. ಭಾರೀ ಮಳೆಯ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ ಸಹ ನೀಡಲಾಗಿದೆ. ಉಳಿದಂತೆ ಬೆಂಗಳೂರು ಸೇರಿ ಅನೇಕ ಕಡೆಗಳಲ್ಲಿ ಮಬ್ಬು ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications