ಉತ್ತರ ಪ್ರದೇಶ ಅಸೆಂಬ್ಲಿಯಲ್ಲಿ ಸ್ಫೋಟಕ ಪತ್ತೆ

Posted By:
Subscribe to Oneindia Kannada

ಲಕ್ನೋ, ಜುಲೈ 14: ಉತ್ತರ ಪ್ರದೇಶದ ಅಸೆಂಬ್ಲಿಯಲ್ಲಿ ಜು.12 ರಂದು ಸಿಕ್ಕಿದ್ದ ಅಪರಿಚಿತ ಬ್ಯಾಗ್ ವೊಂದರಲ್ಲಿದ್ದಿದ್ದಿದ್ದು, ಅಪಾಯಕಾರಿ ಸ್ಫೋಟಕ ಎಂಬುದು ದೃಢವಾಗಿದ್ದು ಆತಂಕ ಸೃಷ್ಟಿಸಿದೆ.

ಜುಲೈ 12 ರಂದು ಶ್ವಾನದಳದ ಮೂಲಕ ತಪಾಸಣೆ ನಡೆಸುತ್ತಿದ್ದ ರಕ್ಷಣಾ ಸಿಬ್ಬಂದಿಗಳಿಗೆ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಸುತ್ತಿಡಲಾಗಿದ್ದ ಬಿಳಿಬಣ್ಣದ ಪೌಡರ್ ಸಿಕ್ಕಿತ್ತು. ಅನುಮಾನಗೊಂಡು ಆ ಪುಡಿಯನ್ನು ಹೆಚ್ಚಿನ ತನಿಖೆಗೆಂದು ಫೊರೆನ್ಸಿಕ್ ಲ್ಯಾಬ್ ಗೆ ಕಳಿಸಲಾಗಿತ್ತು. ಈ ಕುರಿತು ವರದಿ ನೀಡಿದ ಫೊರೆನ್ಸಿಕ್ ಲ್ಯಾಬ್, ಇದು ಪೆಂಟಾ ಎರಿಥ್ರಿಟೋಲ್ ಟೆಟ್ರಾ ನೈಟ್ರೇಟ್ (ಪಿಇಟಿಎನ್) ಎಂಬ ರಾಸಾಯನಿವಾಗಿದ್ದು, ಈ ಪುಡಿ ಅಪಾಯಕಾರಿ ಸ್ಫೋಟಕವಾಗಿತ್ತು ಎಂದು ದೃಢಪಡಿಸಿತ್ತು.

ಯೋಗಿಗೆ ತಾಜ್ ಮಹಲ್ ಸಾಂಸ್ಕೃತಿಕ ಪರಂಪರೆ ಕೇಂದ್ರವೇ ಅಲ್ವಂತೆ!

Explosive finds in Uttar Paradesh assemblhy: Yogi Adityanath calls emergency meeting

ಈ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು (ಜು.14) ಉನ್ನತ ಮಟ್ಟದ ತುರ್ತು ಸಭೆಯೊಂದನ್ನು ಕರೆದಿದ್ದು, ಈ ಕುರಿತು ರಾಷ್ಟ್ರೀಯ ತನಿಖಾ ದಳ(NIA) ಶೀಘ್ರವಾಗಿ ತನಿಖೆ ನಡೆಸಬೇಕೆಂದು ಕೋರಿದ್ದಾರೆ.

ಇದು ಭಯೋತ್ಪಾದಕ ಚಟುವಟಿಕೆಯಾಗಿರುವ ಸಾಧ್ಯತೆ ಇರುವುದರಿಂದ ಅಸೆಂಬ್ಲಿಗೆ ಹೆಚ್ಚಿನ ಭದ್ರತೆಯ ನೀಡಲಾಗುವುದು ಎಂದು ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a strange incident, in Uttar Pradesh Assembly, an explosive was found by the security personnel with the help of dog squad on July 12 in the premises. As per reports, 150 grams of white powder, wrapped in small plastic bag, was found in the Assembly. Later, it was sent to forensic lab which confirmed that, it is a powerful explosive.
Please Wait while comments are loading...