ಬಿಜೆಪಿ VS ಕಾಂಗ್ರೆಸ್: ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ವೋಟ್?

ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ಬಳಿಕ ಕೇಂದ್ರ ಬಿಜೆಪಿ ನಾಯಕರು ಅಲರ್ಟ್ ಆಗಿದ್ದಾರೆ. ಲೋಕಸಭೆ ಚುನಾವಣೆಗೆ ಮೊದಲು ಕರ್ನಾಟಕ ಸೋಲು ಬಿಜೆಪಿಗೆ ದೊಡ್ಡ ಆಘಾತ ನೀಡಿತ್ತು. ಈ ಆಘಾತವನ್ನು ಇಂದು ಹೊರಬಿದ್ದಿರುವ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ಚುನಾವಣಾ ಫಲಿತಾಂಶಗಳು ದೂರ ಮಾಡಿವೆ. ಹಾಗೇ ಬಿಜೆಪಿ ಮತ್ತೆ ಲಯಕ್ಕೆ ಮರಳಿದ್ದು, ಲೋಕಸಭೆಗೆ ರಣಕಹಳೆ ಮೊಳಗಿಸಿದೆ.

ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ವಿಧಾನಸಭೆ ಚುನಾವಣೆ ಬಗ್ಗೆ ಬಿಜೆಪಿ ಸೀರಿಯಸ್ ಆಗಿತ್ತು. ಅದರಲ್ಲೂ ಲೋಕಸಭೆ ಚುನಾವಣೆಗೆ ಮೊದಲು ನಡೆಯುವ ಪಂಚರಾಜ್ಯ ಚುನಾವಣೆ ಮುಖ್ಯ ಕೂಡ ಆಗಿತ್ತು. ಹೀಗೆ ದೊಡ್ಡ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆಯು ಬಿಜೆಪಿಗೆ ಎದುರಾಗಿತ್ತು. ಅಲ್ದೆ ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳನ್ನು ಎದುರಿಸಲು ಬಿಜೆಪಿಯ ವರಿಷ್ಠರೇ ಫೀಲ್ಡ್‌ಗೆ ಇಳಿದಿದ್ದರು. ಈಗ ಇವರ ಹೋರಾಟ ಹಾಗೂ ಕ್ಯಾಂಪೇನ್ ಸಿಕ್ಕಾಪಟ್ಟೆ ವರ್ಕೌಟ್ ಆಗಿದೆ.

Explore The Vote Percentage Difference Between Congress & BJP

4 ರಾಜ್ಯದಲ್ಲಿ ಯಾರಿಗೆ ಎಷ್ಟು ಮತ?

ಹೌದು, ಬಿಜೆಪಿ ನೇತೃತ್ವದ ಎನ್‌ಡಿಎಗೆ ಈ ಬಾರಿ ಸೋಲಿನ ಕಹಿ ಗ್ಯಾರಂಟಿ ಅಂತಾ ಹೇಳುವಾಗ ಹೊಸ ಅಲೆ ಮೂಡಿದೆ. ಪಂಚರಾಜ್ಯ ಚುನಾವಣೆ ಪೈಕಿ ಸಮೀಕ್ಷೆ ಹೇಳಿದ್ದಂತೆ ಪಕ್ಕಾ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋ ವಾತಾವರಣ ಸೃಷ್ಟಿ ಆಗಿತ್ತು. ಆದರೂ ಅದನ್ನೆಲ್ಲಾ ಬದಲಾಯಿಸಿ ಇತಿಹಾಸ ಬರೆಯೋಕೆ ಬಿಜೆಪಿ ಕೇಂದ್ರ ನಾಯಕರು ಆಯ್ಕೆ ಮಾಡಿಕೊಂಡಿದ್ದು 'ಕ್ರಾಂತಿಕಾರಿ ಹೆಜ್ಜೆಯನ್ನ. ಇದೇ ಹೆಜ್ಜೆ ಇದೀಗ ಭರ್ಜರಿ ಮತ ತರಿಸಿಕೊಟ್ಟಿದೆ. ಮಧ್ಯಪ್ರದೇಶ ರಾಜ್ಯದಲ್ಲಿ ಬಿಜೆಪಿ ಪಕ್ಷ ಬರೋಬ್ಬರಿ ಶೇಕಡಾ 48.74 ರಷ್ಟು ಮತ ಪಡೆದಿದ್ರೆ ಕಾಂಗ್ರೆಸ್ ಕೇವಲ ಶೇಕಡಾ 40.42 ರಷ್ಟು ಮತ ಪಡೆದಿದೆ. ಈ ಮೂಲಕ 8.30 ರಷ್ಟು ಮತ ಗಳಿಕೆ ಅಂತರ ಇದೆ.

ರಾಜಸ್ಥಾನ ರಾಜ್ಯದಲ್ಲಿ ಬಿಜೆಪಿ ಶೇಕಡಾ 41.79 ರಷ್ಟು ಮತ ಪಡೆದಿದೆ ಹಾಗೂ ಕಾಂಗ್ರೆಸ್‌ಗೆ ಶೇಕಡಾ 39.50 ರಷ್ಟು ಮತ ಬಿದ್ದಿದೆ. ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಸ್ಥಾನ ರಾಜ್ಯದಲ್ಲಿ ಶೇಕಡಾ 2.29 ರಷ್ಟು ಮತ ಹಂಚಿಕೆ ವ್ಯತ್ಯಾಸ ಕಂಡುಬಂದಿದೆ. ಇನ್ನುಳಿದಂತೆ ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಶೇಕಡಾ 46.30 ರಷ್ಟು ಮತ ಪಡೆದ್ರೆ, ಕಾಂಗ್ರೆಸ್‌ಗೆ ಶೇಕಡಾ 42.12 ರಷ್ಟು ವೋಟ್ ಬಿದ್ದಿದೆ. ಈ ಮೂಲಕ ಮತ ಗಳಿಕೆ ಪ್ರಮಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಶೇಕಡಾ 2.29 ರಷ್ಟು ವ್ಯತ್ಯಾಸ ಕಂಡುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+