ಪಾಪಿ ಪಾಕಿಸ್ತಾನಕ್ಕೆ ಈಗಲಾದರೂ ಒಳ್ಳೆಯ ಬುದ್ಧಿ ಬರುತ್ತಾ? India vs Pakistan
ಪಾಪಿ ಪಾಕಿಸ್ತಾನಕ್ಕೆ ಅಂಟಿಕೊಂಡಿರುವ ಪಾಪಿ ಬುದ್ಧಿ ಶತಮಾನ ಕಳೆದರೂ ಹೋಗಲ್ಲ ಬಿಡಿ. ನಾಯಿ ಬಾಲ ನೆಟ್ಟಗೆ ಆಗಲ್ಲ, ಪಾಪಿ ಪಾಕಿಸ್ತಾನ ಬುದ್ಧಿ ಕಲಿಯಲ್ಲ ಅನ್ನೋ ಮಾತು ಇದೆ. ಅದರಲ್ಲೂ ಸದಾ ಉಗ್ರರನ್ನು ಪೋಷಣೆ ಮಾಡುತ್ತಾ ಬಂದಿರುವ ಪಾಪಿ ಪಾಕಿಸ್ತಾನ ಜಗತ್ತಿನ ಪಾಲಿಗೆ ವಿಲನ್ ಆಗಿದೆ. ಭಾರತದ ಜೊತೆಗೆ ಸದಾ ಕಿರಿಕ್ ಮಾಡುತ್ತಾ ಸರಿಯಾಗಿ ಏಟನ್ನೂ ತಿನ್ನುತ್ತಿರುವ ಪಾಪಿ ಪಾಕಿಸ್ತಾನಕ್ಕೆ, ಮೊನ್ನೆ ಮೊನ್ನೆಯಷ್ಟೇ ಭಾರತೀಯ ಸೇನೆ ಸರಿಯಾಗಿಯೇ ಪೆಟ್ಟು ಕೊಟ್ಟಿದೆ. ಹಾಗಾದ್ರೆ, ಪಾಪಿ ಪಾಕಿಸ್ತಾನಕ್ಕೆ ಈಗಲಾದರೂ ಒಳ್ಳೆಯ ಬುದ್ಧಿ ಬರುತ್ತಾ?
ಪಾಪಿ ಪಾಕಿಸ್ತಾನ ಮಾಡಿದ ಎಡವಟ್ಟು ದೊಡ್ಡ ಬೆಂಕಿಯನ್ನೇ ಹೊತ್ತಿಸಿತ್ತು. ಜಮ್ಮು & ಕಾಶ್ಮೀರ ಮೇಲೆ ಭೀಕರ ದಾಳಿ ನಡೆದ ನಂತರ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ, ಭಾರತೀಯ ಸೇನೆ ಕೂಡ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಬುದ್ಧಿ ಕಲಿಸಲು ಮುಂದಾಗಿತ್ತು. ಹೀಗಿದ್ದಾಗ ಭಾರತ ಕೊಡುತ್ತಿದ್ದ ಏಟು ತಡೆಯಲು ಆಗದೆ ಒದ್ದಾಡಿ ಹೋಗಿದ್ದ ಪಾಕಿಸ್ತಾನ, ಕೆಲವೇ ದಿನಗಳಲ್ಲಿ ಭಾರತದ ಎದುರು ಶರಣಾಗಿದೆ. ಹೀಗಿದ್ದಾಗ ಪಾಕಿಸ್ತಾನ ಕೂಡಲೇ ಸೂಕ್ತ ದಾರಿಯಲ್ಲಿ ನಡೆಯದೇ ಇದ್ದರೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೊಗುವ ಸಾಧ್ಯತೆ ಇದೆ.

ಪಾಪಿ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್!
ಭಾರತ ಇದೀಗ ಪಾಕಿಸ್ತಾನದ ವಿರುದ್ಧ ಯುದ್ಧ ನಿಲ್ಲಿಸಿದೆ, ಆದರೆ ಉಗ್ರರು & ಭಯೋತ್ಪಾದನೆ ಬೆಂಬಲಿಸುವ ಪಾಪಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಈಗಲೂ ಸಿದ್ಧವಾಗಿದೆ. ಹೀಗಿದ್ದಾಗಲೇ, ಪಾಕಿಸ್ತಾನ ತನ್ನ ನೆಲದಲ್ಲಿ ಉಗ್ರರಿಗೆ ಜಾಗ ಕೊಟ್ಟು ನೌಟಂಕಿ ಮಾಡುತ್ತಿದೆ. ಅದನ್ನ ತಕ್ಷಣ ಬದಲಾವಣೆ ಮಾಡಿಕೊಳ್ಳದೇ ಹೋದರೆ ಪರಿಸ್ಥಿತಿ ಕೂಡ ಬಿಗಡಾಯಿಸಲಿದೆ ಅಂತಾ ಇದೀಗ ತಜ್ಞರು ವಾರ್ನಿಂಗ್ ಕೊಟ್ಟಿದ್ದಾರೆ. ಯಾಕಂದ್ರೆ ಭಾರತ ಕದನ ವಿರಾಮ ಘೋಷಣೆ ಮಾಡಿದೆ ನಿಜ, ಹಾಗಂತ ಮತ್ತೆ ದಾಳಿ ಆರಂಭ ಮಾಡಲ್ಲ ಅಂತಾ ಏನು ಇಲ್ಲ. ಹೀಗಾಗಿ ಪಾಕಿಸ್ತಾನ ರಾಜಕಾರಣಿಗಳು ಎಚ್ಚರಿಕೆಯಿಂದ ಇರಲು ಇದೀಗ ತಜ್ಞರು ಸಲಹೆ ನೀಡಿದ್ದಾರೆ.
ಒಟ್ನಲ್ಲಿ ಭಾರತ & ಪಾಕಿಸ್ತಾನ ಯುದ್ಧ ನಿಂತಿದ್ದು ಭಾರತೀಯ ಸೇನೆಯ ಶಕ್ತಿ ನೋಡಿ ಎಂಬ ಮಾತಿನಲ್ಲಿ ಅನುಮಾನವೇ ಬೇಡ. ಯಾಕಂದ್ರೆ ಭಾರತೀಯ ಸೇನೆ ಅಷ್ಟು ಶಕ್ತಿಯುತವಾಗಿದೆ & ಶತ್ರು ಸೇನೆಯನ್ನ ಹೊಡೆದು ಬಿಸಾಕುವ ಸಾಮರ್ಥ್ಯ ಹೊಂದಿದೆ. ಭಾರತೀಯ ಸೇನೆಯನ್ನ ಪಾಪಿ ಪಾಕಿಸ್ತಾನ ಎದುರು ಹಾಕಿಕೊಂಡು ಬದುಕುವುದಕ್ಕೆ ಅಸಾಧ್ಯ ಅನ್ನೋದು ಗೊತ್ತಾಗಿ, ಕೊನೆಗೆ ಸಂಧಾನ ಮಾಡಿಸಿಕೊಂಡಿದೆ ಪಾಪಿ ಪಾಕಿಸ್ತಾನ. ಆದರೆ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯಿಂದಲೇ ವಿವಾದ ಸೃಷ್ಟಿ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.












Click it and Unblock the Notifications