ಕೊರೊನಾ ವೈರಸ್ ಲಸಿಕೆ: ಕಾರ್ಯಪಡೆಯ ಸಭೆ ನಾಳೆ
ಲಸಿಕೆ ನಿರ್ವಹಣೆಗೆ ನೇಮಕ ಮಾಡಿರುವ ತಜ್ಞರ ಸಮಿತಿಯು ನೀತಿ ಆಯೋಗದ ಡಾ. ವಿ.ಕೆ. ಪೌಲ್ ನೇತೃತ್ವದಲ್ಲಿ ಬುಧವಾರ ಸಭೆ ಸೇರಲಿದ್ದು, ಕೊರೊನಾ ವೈರಸ್ ಕಾಯಿಲೆಗೆ ರೂಪಿಸುವ ಲಸಿಕೆಗಳನ್ನು ಪಡೆದುಕೊಳ್ಳವ ಹಾಗೂ ಅವುಗಳನ್ನು ನಿರ್ವಹಣೆ ಮಾಡುವ ವ್ಯವಸ್ಥಾಪನಾ ಮತ್ತು ನೈತಿಕ ಅಂಶಗಳನ್ನು ಪರಿಗಣಿಸುವ ಸಂಬಂಧ ಚರ್ಚಿಸಲಿದೆ.
Recommended Video
ರಾಜ್ಯ ಸರ್ಕಾರಗಳು ಮತ್ತು ಲಸಿಕೆ ಉತ್ಪಾದಕರ ವಲಯದ ಪ್ರತಿನಿಧಿಗಳೊಂದಿಗೆ ಈ ಸಮಿತಿ ಸಮಾಲೋಚನೆ ನಡೆಸಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ಎಲ್ಲ ಸಂಬಂಧಿತ ಸಚಿವಾಲಯಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಪರಿಣತರ ಸಮಿತಿಯನ್ನು ಸ್ಥಾಪಿಸಿರುವ ಕೇಂದ್ರ ಸರ್ಕಾರ, ಅದರ ಮೂಲಕ ಕೊರೊನಾ ವೈರಸ್ ಲಸಿಕೆ ತಯಾರಿಸುವ ಯೋಜನೆಯ ವಿವಿಧ ಆಯಾಮಗಳನ್ನು ಪರಿಶೀಲಿಸುತ್ತಿದೆ. ಖರೀದಿ ಮಾಡಬಹುದಾದ ಲಸಿಕೆಗಳನ್ನು ಗುರುತಿಸುವ, ಅವುಗಳನ್ನು ಹಂಚಿಕೆ ಮಾಡುವ ಹಾಗೂ ನಿರ್ವಹಣೆ ಮಾಡುವ ಜವಾಬ್ದಾರಿ ಸಮಿತಿಯ ಮೇಲೆ ಇದೆ.

ಭಾರತವು ಬಳಸಬಹುದಾದ ಲಸಿಕೆಗಳನ್ನು ಆಯ್ಕೆ ಮಾಡುವ, ಲಕ್ಷಾಂತರ ಡಾಲರ್ ವೆಚ್ಚದ ಲಸಿಕೆಗಳಾದರೆ ಅದಕ್ಕೆ ಸೂಕ್ತ ಹಣಕಾಸು ಯೋಜನೆ ಮಾಡುವ ಹಾಗೂ ಅವುಗಳ ಆಡಳಿತ ನಿರ್ವಹಣೆಯ ಆದ್ಯತೆಯನ್ನು ಗುರುತಿಸುವ ಕಾರ್ಯ ಮಾಡಲಿದೆ. ಈ ಉನ್ನತ ಮಟ್ಟದ ಸಮಿತಿಯನ್ನು ಸಂಪುಟ ಕಾರ್ಯದರ್ಶಿಗಳು ಕಳೆದ ಶುಕ್ರವಾರ ರಚಿಸಿದ್ದರು.
ಇದರಲ್ಲಿ ಎಐಎಂಎಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ, ವಿದೇಶಾಂಗ ವ್ಯವಹಾರಗಳು, ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಆರೋಗ್ಯ ಸೇವೆಗಳ ಮಹಾ ನಿರ್ದೇಶಕರು, ಭಾರತೀಯ ಏಡ್ಸ್ ಸಂಶೋಧನಾ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಮತ್ತು ರಾಜ್ಯಗಳ ಪ್ರತಿನಿಧಿಗಳು ಇದ್ದಾರೆ.












Click it and Unblock the Notifications