ಕೇಂದ್ರ ಬಜೆಟ್ 2018: ನಿರೀಕ್ಷೆಗಳು, ಅಪೇಕ್ಷೆಗಳ ಮಧ್ಯೆ ಹಗ್ಗದ ನಡಿಗೆ

ಕೇಂದ್ರ ಸರ್ಕಾರಕ್ಕೆ ಈ ಬಾರಿಯ ಬಜೆಟ್ ಹಗ್ಗದ ಮೇಲಿನ ನಡಿಗೆ. ಈ ಬಜೆಟ್ ನಲ್ಲಿನ ಪ್ರಮುಖ ಘೋಷಣೆಗಳು ಯಾವುದು ಆಗಬಹುದು ಎಂಬುದರ ವಿವರಗಳು ಇಲ್ಲಿವೆ.

* ಆದಾಯ ತೆರಿಗೆ ವಿನಾಯಿತಿ ಸದ್ಯಕ್ಕೆ ಎರಡೂವರೆ ಲಕ್ಷ ರುಪಾಯಿ ಇದೆ. ಅದನ್ನು ಹೆಚ್ಚಿಸಬಹುದು ಎಂಬುದು ಹೆಚ್ಚಿನ ಸಂಖ್ಯೆಯಲ್ಲಿರುವ ವೇತನದಾರರ ನಿರೀಕ್ಷೆ.

* ಷೇರುಗಳಿಗೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಹಾಕಬಹುದು

* ಕಾರ್ಪೋರೇಟ್ ತೆರಿಗೆಗಳಲ್ಲಿ ಇಳಿಕೆ ಮಾಡಬಹುದು.

* ಕೃಷಿ ವಲಯಕ್ಕೆ ಭರಪೂರ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಅದರಲ್ಲೂ ದೇಶದಾದ್ಯಂತ ಕೃಷಿ ಸಾಲ ಮನ್ನಾ, ಕೃಷಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಮೊತ್ತ ಮೀಸಲಿಡುವ ಸಾಧ್ಯತೆ ಇದೆ.

Expectation and possible announcements of Union budget 2018

* ಬಂಡವಾಳ ಹಿಂತೆಗೆತದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.

* ಬಡತನ ನಿರ್ಮೂಲನೆಗಾಗಿ ಹಾಗೂ ಆದಾಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಬಹುದು.

* ಸಬ್ಸಿಡಿಗಾಗಿ ಹೆಚ್ಚಿನ ಹಣ ಮೀಸಲಿಡಬಹುದು.

* ಷೇರಿನ ಮೇಲೆ ಡಿವಿಡೆಂಡ್ ಗೆ ತೆರಿಗೆ ಹಾಕಬಹುದು, ಐವತ್ತು ಲಕ್ಷಕ್ಕಿಂತ ಹೆಚ್ಚು ಆದಾಯಕ್ಕೆ ಹೆಚ್ಚಿನ ಸರ್ ಚಾರ್ಜ್ ವಿಧಿಸಬಹುದು.

* ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಏರಿಕೆ ಮಾಡಬಹುದು

* ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಬಹುದು ಎಂಬ ನಿರೀಕ್ಷೆ ಇದೆ.

* ವಿಧಾನಸಭೆ ಚುನಾವಣೆಗಳು ಎದುರಿಗೆ ಇರುವುದರಿಂದ ಬಂಡವಾಳ ಹೂಡಿಕೆಗಿಂತ ಖರ್ಚಿನ ಬಾಬ್ತು ಹೆಚ್ಚಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+