ಡಿ.14ರವರೆಗೆ ಹಿಮಾಚಲ ಪ್ರದೇಶ, ಗುಜರಾತ್ ಎಕ್ಸಿಟ್ ಪೋಲ್ ಪ್ರಕಟಿಸುವಂತಿಲ್ಲ
ನವದೆಹಲಿ, ಅಕ್ಟೋಬರ್ 26: ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ತಿಳಿದುಕೊಳ್ಳಲು ಡಿಸೆಂಬರ್ 14ರ ಸಂಜೆವರೆಗೆ ಜನರು ಕಾಯಬೇಕಾಗಿದೆ.
ಎರಡೂ ರಾಜ್ಯಗಳಲ್ಲಿ ಎಲ್ಲಾ ಹಂತದ ಮತದಾನ ಕೊನೆಗೊಂಡ ಅರ್ಧಗಂಟೆ ನಂತರ ಅಂದರೆ ಡಿಸೆಂಬರ್ 14ರ ಸಂಜೆಯ ನಂತರ ಚುನಾವಣೋತ್ತರ ಸಮೀಕ್ಷೆ ಬಹಿರಂಗಪಡಿಸಬಹುದು ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿ ಹೇಳಿದ್ದಾರೆ.

ಹಿಮಾಚಲ ಪ್ರದೇಶದ ನವೆಂಬರ್ 9ರಂದು ಒಂದೇ ಹಂತದ ಮತದಾನ ನಡೆಯಲಿದೆ. ಇನ್ನು ಗುಜರಾತ್ ನಲ್ಲೂ ಮೊದಲ ಹಂತದ ಮತದಾನ ಡಿಸೆಂಬರ್ 9ರಂದು ನಡೆಯಲಿದೆ. ಎರಡನೇ ಹಂತದ ಮತದಾನ ಇಲ್ಲಿ ಡಿಸೆಂಬರ್ 14ರಂದು ನಡೆಯಲಿರುವುದರಿಂದ ಅಲ್ಲಿಯವರೆಗೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಬಹಿರಂಗಪಡಿಸುವಂತಿಲ್ಲ.
ಈ ಬಗ್ಗೆ ಚುನಾವಣಾ ಆಯೋಗ ಸದ್ಯದಲ್ಲೇ ಸ್ಪಷ್ಟ ಸುತ್ತೋಲೆ ಹೊರಡಿಸಲಿದೆ.
ಸದ್ಯ ಚಾಲ್ತಿಯಲ್ಲಿರುವ ಕಾನೂನುಗಳ ಪ್ರಕಾರ ಮತದಾನಕ್ಕೂ 48 ಗಂಟೆಗಳ ಮೊದಲು ಸಮೀಕ್ಷೆಯ ವರದಿಗಳನ್ನು ಜನರ ಮುಂದಿಡುವಂತಿಲ್ಲ.












Click it and Unblock the Notifications