Lok Sabha Exit Poll : 2019ರಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿತ್ತು? ನಿಜವಾಗಿದ್ದು ಎಷ್ಟು?
ನವದೆಹಲಿ, ಜೂನ್ 01 : ದೇಶಾದ್ಯಂತ 2024 ರ ಲೋಕಸಭಾ ಚುನಾವಣೆ ಏಳು ಹಂತದಲ್ಲಿ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದ್ದು, ಇಂದು ಏಳನೇ ಹಂತದ ಮತಾನ ನಡೆಯುತ್ತಿದೆ. 18ನೇ ಲೋಕಸಭೆಯ ಸುದೀರ್ಘ ಮತದಾನದ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಮತದಾನ ಮುಗಿಯುತ್ತಿದ್ದಂತೆಯೇ ಚುನಾವಣೋತ್ತರ ಸಮೀಕ್ಷೆ ಹೊರಬೀಳಲಿದೆ.
ಈಗಾಗಳೇ ಸಾಕಷ್ಟು ಜನ ಹಿರಿಯ ರಾಜಕೀಯ ತಜ್ಞರು ಹಾಗೂ ವಿಶ್ಲೇಷಕರು ತಮ್ಮದೇ ಆದ ಅಂಕಿ ಅಂಶಗಳನ್ನ ನೀಡಿದ್ದು, ಇಂದು(ಜೂನ್1) ಮತದಾನ ಪ್ರಕ್ರಿಯೆ ಮುಗಿದ ನಂತರ ಹೊರಬೀಳುವ ಮತಗಟ್ಟೆ ಸಮೀಕ್ಷೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಕುತೂಹಲ ಮೂಡಿಸಿದೆ. 2024ರ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಜೂನ್ 1, ಸಂಜೆ 6.30ರ ನಂತರ ಪ್ರಸಾರವಾಗಲಿದ್ದು, 2019 ರ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಈ ಹಿಂದೆ ಸಾಕಷ್ಟು ಕುತೂಹಲವನ್ನ ಮೂಡಿಸಿತ್ತು.

2024 ರ ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ ಸಾಕಷ್ಟು ಕುತೂಹಲ ಮೂಡಿಸಿದ್ದು, 2019ರ ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಯನ್ನು ಹದಿನಾಲ್ಕು ವಾಹಿನಿಗಳು ಹೊರ ತಂದಿದ್ದವು. ಈ ಹದಿನಾಲ್ಕು ವಾಹಿನಿಗಳ ಸಮೀಕ್ಷೆಯಲ್ಲಿ ಎರಡು ವಾಹಿನಿಗಳ ಸಮೀಕ್ಷಾ ವರದಿಗಳು ಮಾತ್ರ ನೈಜ ಫಲಿತಾಂಶಕ್ಕೆ ಹತ್ತಿರವಾಗಿದ್ದವು.
2019 ರ ಲೋಕಸಭಾ ಚುನಾವಣೆಯ ಸಮೀಕ್ಷಾ ವರದಿ ಪ್ರಕಾರ ಎಲ್ಲಾ ವಾಹಿನಿಗಳು ಬಿಜೆಪಿ ಸರ್ಕಾರ ರಚಿಸುತ್ತವೆ ಎಂದು ಹೇಳಿದ್ದವು. ಆದರೆ ಒಂದು ವಾಹಿನಿ ಜಂಟಿಯಾಗಿ ನಡೆಸಿದ್ದ ಸಮೀಕ್ಷೆಯಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಹೇಳಿತ್ತು. ಇಂಡಿಯಾ ಟುಡೇ - ಏಕ್ಸಿಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 352 (+-13), ಯುಪಿಎ ಮೈತ್ರಿಕೂಟಕ್ಕೆ 93 ( +-15), ಇತರರಿಗೆ 82 ( +-13) ಎನ್ನುವ ಫಲಿತಾಂಶವನ್ನು ವಾಹಿನಿ ನೀಡಿತ್ತು. ಆ ಮೂಲಕ, ಸರಿಯಾದ ಸಮೀಕ್ಷಾ ವರದಿಯನ್ನು ನೀಡಿತ್ತು.
ನ್ಯೂಸ್ 24 - ಟುಡೇಸ್ ಚಾಣಕ್ಯದ ಸಮೀಕ್ಷೆಯಲ್ಲಿ ಪ್ರಕಾರ ಎನ್‌ಡಿಎ ಮೈತ್ರಿಕೂಟಕ್ಕೆ 350 (+-14), ಯುಪಿಎ ಮೈತ್ರಿಕೂಟಕ್ಕೆ 95 ( +-9), ಇತರರಿಗೆ 97 ( +-11) ಸಮೀಕ್ಷೆ ಮೂಲಕ ಹೊರ ಬಿದಿತ್ತು. ಈ ಸಮೀಕ್ಷೆ ಕೂಡಾ, ನೈಜ ಫಲಿತಾಂಶಕ್ಕೆ ಬಹುತೇಕ ಹತ್ತಿರವಾಗಿದ್ದವು. ಕಳೆದ ಬಾರಿ ಬಿಜೆಪಿ ಮೈತ್ರಿಕೂಟ 353, ಕಾಂಗ್ರೆಸ್ ಮೈತ್ರಿಕೂಟ 91 ಸ್ಥಾನದಲ್ಲಿ ಗೆಲುವನ್ನು ಸಾಧಿಸಿದ್ದು,ನ್ಯೂಸ್ 24 - ಟುಡೇಸ್ ಚಾಣಕ್ಯ ಸಮೀಕ್ಷೆ ಫಲಿತಾಂಶಕ್ಕೆ ಹತ್ತಿರವಾಗಿತ್ತು.
ಟೈಮ್ಸ್ ನೌ ವಾಹಿನಿಯೂ ಎನ್‌ಡಿಎ ಮೈತ್ರಿಕೂಟಕ್ಕೆ 306 (+/3) ಸ್ಥಾನ, ಯುಪಿಐ ಮೈತ್ರಿಕೂಟಕ್ಕೆ 132 (+/3) ಇತರೆ ಪಕ್ಷಗಳಿಗೆ 122(+/3) ಸ್ಥಾನಗಳನ್ನ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿತ್ತು. ಇಂಡಿಯಾ ಟಿವಿ ವಾಹಿನಿಯ ಸಮೀಕ್ಷೆಯ ಪ್ರಕಾರ ಎನ್‌ಡಿಎ ಮೈತ್ರಿಕೂಟಕ್ಕೆ 300 (+/3) ಸ್ಥಾನ, ಯುಪಿಐ ಮೈತ್ರಿಕೂಟಕ್ಕೆ 120 (+/3) ಇತರೆ ಪಕ್ಷಗಳಿಗೆ 122(+/6) ಸ್ಥಾನಗಳು ಎಂದು ತಿಳಿಸಿತ್ತು. 2019 ರ ಚುನಾವಣೆಯ ಏಕ್ಸಿಟ್ ಪೋಲ್ ನಲ್ಲಿ ಇಂಡಿಯಾ ಟುಡೇ - ಏಕ್ಸಿಸ್ ಮತ್ತು ನ್ಯೂಸ್ 24 - ಟುಡೇಸ್ ಚಾಣಕ್ಯ ಮಾತ್ರ ಸರಿಯಾದ ವರದಿಯನ್ನು ನೀಡಿದ್ದವು.











Click it and Unblock the Notifications