ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಣರಾಯಿ ತಲೆಗೆ 1 ಕೋಟಿ ಬಹುಮಾನ ಘೋಷಿಸಿದ್ದ RSS ನಾಯಕನ ಬಂಧನ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆಗೆ 1 ಕೋಟಿ ಬಹುಮಾನ ಘೋಷಿಸಿದ್ದ ಆರ್.ಎಸ್.ಎಸ್ ಮಾಜಿ ನಾಯಕ ಕುಂದನ್ ಚಂದ್ರಾವತ್ ರನ್ನು ಬಂಧಿಸಲಾಗಿದೆ.

By Sachhidananda Acharya
|
Google Oneindia Kannada News

ಭೋಪಾಲ್, ಮಾರ್ಚ್ 28: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆಗೆ 1 ಕೋಟಿ ಬಹುಮಾನ ಘೋಷಿಸಿದ್ದ ಆರ್.ಎಸ್.ಎಸ್ ಮಾಜಿ ನಾಯಕ ಕುಂದನ್ ಚಂದ್ರಾವತ್ ರನ್ನು ಬಂಧಿಸಲಾಗಿದೆ.

ಉಜ್ಜೈನಿಯ ಮಾಜಿ ಆರ್.ಎಸ್.ಎಸ್ ಸಹ ಪ್ರಚಾರ ಪ್ರಮುಖ್ ಕುಂದನ್ ಚಂದ್ರಾವತ್ ರನ್ನು ಉಜ್ಜೈನಿಯಲ್ಲಿ ಮಂಗಳವಾರ ಬಂಧಿಸಲಾಗಿದೆ.[ಪಿಣರಾಯಿ ತಲೆಗೆ ಆರ್.ಎಸ್.ಎಸ್ ನಾಯಕನಿಂದ 1 ಕೋಟಿ ಬಹುಮಾನ ಘೋಷಣೆ!]

Ex RSS leader Kundan Chandrawat arrested over his 1 crore bounty on Kerala CM Pinarayi Vijayan’s head

ಸರಿ ಸುಮಾರು ತಿಂಗಳ ಹಿಂದೆ ಕುಂದನ್ ಚಂದ್ರಾವತ್ ಉಜ್ಜೈನಿಯ ಜನಾಧಿಕಾರ ಸಮಿತಿ ಸಭೆಯಲ್ಲಿ ಮಾತನಾಡಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆಗೆ ಒಂದು ಕೋಟಿ ಬಹುಮಾನ ಘೋಷಣೆ ಮಾಡಿದ್ದರು.

ಇದಾದ ಬೆನ್ನಿಗೆ ಆರ್.ಎಸ್.ಎಸ್ ಚಂದ್ರಾವತ್ ರನ್ನು ಎಲ್ಲಾ ಹುದ್ದೆಗಳಿಂದ ಕಿತ್ತೊಗೆದಿತ್ತು. ನಂತರ ಕುಂದನ್ ಚಂದ್ರಾವತ್ ಕ್ಷಮೆ ಕೇಳಿದ್ದರಾದರೂ ನನ್ನ ಹೇಳಿಕೆಗೆ ಬದ್ದನಾಗಿರುವುದಾಗಿ ಹೇಳಿದ್ದರು.[ಕೇರಳ ರಾಜಕೀಯ ಸಂಘರ್ಷ: ಡಿವೈಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆ]

ಮಾರ್ಚ್ 2ರಂದು ಚಂದ್ರಾವತ್ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು. ಐಪಿಸಿ ಸೆಕ್ಷನ್ 505(1)(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯ ಚಂದ್ರಾವತ್ ಗೆ ನ್ಯಾಯಾಂಗ ಬಂಧನ ವಿಧಿಸಿದ್ದು ಜೈಲಿನಲ್ಲಿದ್ದಾರೆ.

English summary
Former Rashtriya Swayamsevak Sangh (RSS) Ujjain Mahanagar Sah Prachar Pramukh, Kundan Chandrawat had been arrested on Tuesday. Who had announced rupees 1 crore bounty for Kerala chief minister Pinarayi Vijayan’s head.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X