ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ್ಯಪಲ್‌ ಬಿಟ್ಟು ಆಮ್ ಆದ್ಮಿಯಾದ 'ಆದರ್ಶ' ಶಾಸ್ತ್ರಿ

By Srinath
|
Google Oneindia Kannada News

ನವದೆಹಲಿ, ಡಿ. 30: ಆಮ್‌ ಆದ್ಮಿ ಪಕ್ಷವು ನಿಜಕ್ಕೂ ಸಾಕಷ್ಟು ಮೋಡಿ ಮಾಡುತ್ತಿದೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಪಕ್ಷವು ಮತ್ತಷ್ಟು ಪ್ರವರ್ಧನಮಾನಕ್ಕೆ ಬರುವ ಲಕ್ಷಣಗಳು ಹೆಚ್ಚಾಗಿವೆ.

ದೇಶದ ಆದರ್ಶಯುತ ಮಾಜಿ ಪ್ರಧಾನಿ ಲಾಲ್‌ ಬಹಾದೂರ್ ಶಾಸ್ತ್ರಿ ಅವರ (late Lal Bahadur Shastri) ಮೊಮ್ಮಗ ಎಂಬ ಕಾಯಂ Tag ಹೊತ್ತಿರುವ ಜತೆಗೆ Apple ನಂತಹ ಪ್ರತಿಷ್ಠಿತ ಕಂಪನಿಯಲ್ಲಿ ಬಂಗಾರದಂತಹ ಉದ್ಯೋಗ ಹೊಂದಿದ್ದ (ವಾರ್ಷಿಕ 1 ಕೋಟಿ ರೂ. ಪಗಾರದ ನೌಕರಿ) ವ್ಯಕ್ತಿ ಗೌತಮ ಬುದ್ಧನಂತೆ ಅವೆಲ್ಲವನ್ನೂ ತ್ಯಜಿಸಿ, ಜನಸಾಮಾನ್ಯನಂತೆ ಆಮ್‌ ಆದ್ಮಿ ಪಕ್ಷವನ್ನು ಅಪ್ಪಿಕೊಂಡಿದ್ದಾರೆ! ಅಂದಹಾಗೆ, ಇವರು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ, ಸಜ್ಜನ/ ನಿಸ್ಪೃಹ ವ್ಯಕ್ತಿತ್ವದ ಅನಿಲ್ ಶಾಸ್ತ್ರಿ ಅವರ ಮಗ.

ಆ್ಯಪಲ್ ಬಿಟ್ಟು ಪೊರಕೆ ಹಿಡಿದ ಯುವ ನಾಯಕ :

ex-pm-shastri-s-grandson-adarsh-shastri-leaves-apple-job-join-aap

ಇನ್ನು 40 ವರ್ಷದ ಆದರ್ಶ ಶಾಸ್ತ್ರಿ ಅವರು ಆ್ಯಪಲ್‌ ಕಂಪನಿಯಲ್ಲಿ ಪಶ್ಚಿಮ ಭಾರತದ ಮಾರಾಟ ವಿಭಾಗದ ಮುಖ್ಯಸ್ಥರಾಗಿದ್ದರು. 'ನಾನು ನನ್ನ ಸ್ವಂತ ನಿರ್ಧಾರದಿಂದ ಆ್ಯಪಲ್ ಬಿಟ್ಟು ಆಪ್‌ ಸೇರಿದ್ದೇನೆ' ಎಂದು ಶಾಸ್ತ್ರಿ ಹೇಳಿಕೊಂಡಿದ್ದಾರೆ. ಅರವಿಂದ್ ಕ್ರೇಜಿವಾಲ ಅವರಿಂದ ಪ್ರೇರಿತರಾಗಿ ನಾನು ಆಪ್‌ ಸೇರಿದ್ದೇನೆ ಎಂದೂ ಶಾಸ್ತ್ರಿ ತಿಳಿಸಿದ್ದಾರೆ. (ಆಮ್‌ ಆದ್ಮಿ ಕೇಜ್ರಿವಾಲಾ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ದಿನ)

ಆರೇಳು ತಿಂಗಳಿಂದ ಅರವಿಂದ್ ಕ್ರೇಜಿವಾಲಾರ ಆಮ್ ಆದ್ಮಿಯನ್ನು ಗಮನಿಸುತ್ತಾ ಬಂದಿದ್ದೇನೆ. ಅಪ್ಪನೊಂದಿಗೂ ಚರ್ಚಿಸಿದ್ದೇನೆ. ಯಾಕೋ, ಕಾಂಗ್ರೆಸ್ ಕಲ್ಚರ್ ಎಂಬುದು ನನ್ನ ಕಲ್ಚರಿಗೆ ತಾಳಮೇಳ ಇಲ್ಲದಂತಿದೆ. ಹಾಗಾಗಿ ಆಮ್ ಆದ್ಮೀಯಾಗುತ್ತಿದ್ದೇನೆ ಎಂದು ಅಪ್ಪನಿಗೆ ತಿಳಿಸಿರುವೆ. ನಿನಗೆ ಯಾವುದು ಒಳ್ಳೇಯದು ಅನ್ನಿಸುತ್ತದೋ ಅದನ್ನೇ ಮಾಡು ಎಂದು ಅವರೂ ಆಶೀರ್ವದಿಸಿರುವುದಾಗಿ ಆದರ್ಶ ಶಾಸ್ತ್ರಿ ಹೇಳಿದ್ದಾರೆ.

ನನಗೆ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಯಾರಿಗೂ ರಾಜಕೀಯದಲ್ಲಿ ಒಲವಿಲ್ಲ. ಆದರೆ ಆದರ್ಶ ಶಾಸ್ತ್ರಿ ಭಿನ್ನ ದಾರಿ ತುಳಿಯಲು ಹೊರಟಿದ್ದಾನೆ. ವೈಯಕ್ತಿಕವಾಗಿ ಹೇಳಬೇಕೆಂದರೆ ಆತ ಕಾಂಗ್ರೆಸ್ಸಿಗೆ ಸೇರಬೇಕು ಎಂಬುದು ನನ್ನ ಬಯಕೆಯಾಗಿತ್ತು. ಆದರೆ ಬೆಳೆದುನಿಂತ ದೊಡ್ಡ ಮಗ. ಆತನ ತೀರ್ಮಾನ/ ಆಯ್ಕೆಯನ್ನು ತಾನು ಗೌರವಿಸುವುದಾಗಿ ಅಪ್ಪ ಅನಿಲ್ ಶಾಸ್ತ್ರಿ ಅವರು ಪ್ರತಿಕ್ರಿಯಿದ್ದಾರೆ.

ಇನ್ನು, ಆದರ್ಶ ಶಾಸ್ತ್ರಿ ಅವರು 9 ವರ್ಷದ ಅವಳಿ ಮಕ್ಕಳು ಸೇರಿದಂತೆ ತನಗೆ ನಾಲ್ವರು ಮಕ್ಕಳಿದ್ದು, ಜೀವನೋಪಾಯಕ್ಕಾಗಿ ಚಿಕ್ಕದಾದ ಟೆಲಿಕಾಂ ಕಂಪನಿ ಸ್ಥಾಪಿಸುವುದಾಗಿ ಹೇಳಿದ್ದಾರೆ. MBA ಪದವೀಧರ ಆದರ್ಶ ಶಾಸ್ತ್ರಿ ಅವರು 15 ವರ್ಷದಿಂದ ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದಾರೆ.

ಆಮ್‌ ಆದ್ಮಿ ಪಕ್ಷವು ಆದರ್ಶ ಶಾಸ್ತ್ರಿಗೆ ತಕ್ಷಣಕ್ಕೆ ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ನೀಡಿಲ್ಲವಾದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಬಯಸಿದ್ದೇ ಆದರೆ ಟಿಕೆಟ್ ನಬೀಡುವ ಇರಾದೆ ಹೊಂದಿದೆ ಎಂದು ತಿಳಿದುಬಂದಿದೆ. 1989, 1991 ಮತ್ತು 1996ರ ಚುನಾವಣೆಯಲ್ಲಿ ವಾರಣಾಸಿ, ಅಲಹಾಬಾದ್ ಮತ್ತು ಇಂದೋರ್ ಕ್ಷೇತ್ರಗಳಲ್ಲಿ ಅಪ್ಪ ಅನಿಲ್ ಅವರ ಪರ ಆದರ್ಶ್ ಶಾಸ್ತ್ರಿ ಅವರು ಪ್ರಚಾರ ನಡೆಸಿರುವ ಅನುಭವ ಹೊಂದಿದ್ದಾರೆ.

English summary
Ex PM Lal Bahadur Shastri's grandson Adarsh Shastri leaves Apple job joins Aam Aadmi Party. Adarsh Shastri (40), who joined Aam Aadmi Party last week is not just any corporate high-flyer, he's the grandson of former Indian prime minister, late Lal Bahadur Shastri, and the son of Congress leader Anil Shastri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X