ಮುದ್ರಾ ಯೋಜನೆಯಿಂದ ಉದ್ಯೋಗ ಸೃಷ್ಟಿ ಅಂಕಿ ಅಂಶ ಬಹಿರಂಗವಿಲ್ಲ
ನವದೆಹಲಿ, ಮಾರ್ಚ್ 14: ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಇಳಿಮುಖವಾದರೂ ನಿರುದ್ಯೋಗ ಪ್ರಮಾಣ ಅಧಿಕವಾಗಿದೆ ಎಂದು ಇತ್ತೀಚೆಗೆ ಸಮೀಕ್ಷೆಯೊಂದು ಹೇಳಿದೆ. ಮಾಧ್ಯಮಗಳ ಸಮೀಕ್ಷೆಗಳು ಕೂಡಾ ಭಯೋತ್ಪಾದನೆಗಿಂತ ನಿರುದ್ಯೋಗ ಸಮಸ್ಯೆಯೇ ಪ್ರಮುಖ ಚುನಾವಣಾ ವಿಷಯ ಎಂದಿವೆ. ಪರಿಸ್ಥಿತಿ ಹೀಗಿರುವಾಗ ಮೋದಿ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದೆನಿಸಿರುವ ಮುದ್ರಾ ಯೋಜನೆ ಮೂಲಕ ಎಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ ಎಂಬ ಅಂಕಿ ಅಂಶ ಬಹಿರಂಗಗೊಳಿಸಿ, ಇಮೇಜ್ ಬದಲಾಯಿಸಲು ಇದ್ದ ಅವಕಾಶ ಈಗ ಬಿಜೆಪಿ ಕೈ ತಪ್ಪಿದೆ.
ಚುನಾವಣಾ ನೀತಿ ಸಂಹಿತೆ ಇರುವುದರಿಂದ Micro units Development & Refinane Agency(Mudra) ಅಂಕಿ ಅಂಶ ಪ್ರಕಟಣೆಯನ್ನು ಎರಡು ತಿಂಗಳ ಅವಧಿಗೆ ನಿರ್ಬಂಧಿಸಲಾಗಿದೆ.
ದೇಶದ ಯುವ ಸಮುದಾಯದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಈಗಾಗಲೇ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ಯಮಶೀಲರಿಗೆ ಹಣಕಾಸಿನ ನೆರವು ಒದಗಿಸುವ ಸಲುವಾಗಿ ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆಯೇ ಮುದ್ರಾ ಯೋಜನೆ.

ಮುದ್ರಾ ಯೋಜನೆಯು ದೇಶದ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳಿಗೆ 10 ಲಕ್ಷ ರೂ.ವರೆಗೆ ಹಣಕಾಸಿನ ನೆರವು ಒದಗಿಸಲಿದ್ದು, ಇದರ ಜತೆಗೆ, ಸಣ್ಣ ಹಣಕಾಸು ಸಂಸ್ಥೆಗಳಿಗೆ ಮರುಹಣಕಾಸು ಸೌಲಭ್ಯ ಒದಗಿಸುವ ಗುರಿ ಇಟ್ಟುಕೊಂಡಿದೆ.
ಎನ್ಡಿಎ ಅವಧಿಯಲ್ಲಿನ ಉದ್ಯೋಗ ನಷ್ಟದ ಬಗ್ಗೆ National Sample survey Office (NSSO) ಸಮೀಕ್ಷೆ ಹಾಗೂ ಕಾರ್ಮಿಕ ಬ್ಯುರೋನ 6ನೇ ಉದ್ಯೋಗ-ನಿರುದ್ಯೋಗ ಸಮೀಕ್ಷೆಯಲ್ಲಿ ಅಂಕಿ ಅಂಶಗಳನ್ನು ಕೂಡಾ ಬಹಿರಂಗಪಡಿಸಿಲ್ಲ.
2016-17ಕ್ಕೆ ಹೋಲಿಸಿದರೆ ಶೇ 3.9ರಷ್ಟು ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ಕಾರ್ಮಿಕ ಖಾತೆ ಸಮೀಕ್ಷೆ ಹೇಳಿದರೆ, ಎನ್ಎಸ್ಎಸ್ಒ ಸಮೀಕ್ಷೆಯಂತೆ 2017-18 ಶೇ 6.1ರಷ್ಟು ಏರಿಕೆ ಕಂಡು 45 ವರ್ಷಗಳಲ್ಲೇ ಅತ್ಯಧಿಕ ಪ್ರಮಾಣ ಮುಟ್ಟಿದೆ ಎಂದು ಹೇಳಿದೆ.
ಸಮೀಕ್ಷೆ ಸಮಯದಲ್ಲಿ ಮುದ್ರಾ ಫಲಾನುಭವಿಗಳ ಸಂಖ್ಯೆ 10.35 ಕೋಟಿ ಇದ್ದಿದ್ದು ಈಗ 15.56 ಕೋಟಿ ಮುಟ್ಟಿದೆ. 50,000ರು ಒಳಗಿನ ಸಾಲ ಪಡೆಯುವವರ ಪ್ರಮಾಣ ಶೇ 90ರಷ್ಟು ಇಳಿಕೆ ಕಂಡಿದೆ ಎಂದು ವಿತ್ತೀಯ ಇಲಾಖೆ ಕಳೆದ ಆಗಸ್ಟ್ ನಲ್ಲಿ ವರದಿ ನೀಡಿದೆ.ಚ್











Click it and Unblock the Notifications