'Error 404': ಇಂಟರ್ನೆಟ್ ಇಲ್ಲದೆ ಬೆಂಗಳೂರಿನ ಐಟಿ ಹಬ್ ಬಳಿ ನಿವಾಸಿಗಳ ಪರದಾಟ
ಬೆಂಗಳೂರು, ಜು.01: ಬೆಂಗಳೂರಿನ ಔಟರ್ ರಿಂಗ್ ರೋಡ್ ಪ್ರದೇಶದ ಐಟಿ ಹಬ್‌ಗೆ ಸಮೀಪದಲ್ಲಿರುವ ನೆರೆಹೊರೆಯ ನಿವಾಸಿಗಳಿಗೆ ಸರಿಯಾಗಿ ಇಂಟರ್ನೆಟ್ ಸಿಗುವುದಿಲ್ಲ ಎಂಬ ತಮ್ಮ ಸಮಸ್ಯೆಯನ್ನು ಹಾಗೂ ಅಂತರ್ಜಾಲ ಕಂಪನಿಯ ಏಕಸ್ವಾಮ್ಯತ್ವದ ಬಗ್ಗೆ ಎಂಟು ತಿಂಗಳುಗಳಿಂದ ಹೇಳುತ್ತಲೇ ಇದ್ದಾರೆ. ಆದರೆ ಈ ಸಮಸ್ಯೆಗೆ ಈವರೆಗೆ ಯಾವುದೇ ಪರಿಹಾರವಿಲ್ಲ ಮತ್ತು ಸ್ಥಳೀಯ ಖಾಸಗಿ ಇಂಟರ್ನೆಟ್ ಸೇವೆ ಒದಗಿಸುವುದೇ ಇಲ್ಲಿನ ಏಕೈಕ ಆಯ್ಕೆಯಾಗಿ ಬಿಟ್ಟಿದೆ.
ಬಾಲಗರೆ ರಸ್ತೆ, ಪಂಥೂರ್ ದಿನ್ನೆ, ಮತ್ತು ಗುಂಜೂರ್ ಪ್ರದೇಶಗಳ ನಿವಾಸಿಗಳು ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ change.org ಮೂಲಕ ಆನ್‌ಲೈನ್ ಅರ್ಜಿ ಹಾಕುವುದನ್ನು ಪ್ರಾರಂಭಿಸಿದ್ದಾರೆ.
ಸ್ಥಳೀಯ ರಾಜಕೀಯ ಪ್ರಭಾವದ ಬೆಂಬಲದಿಂದಾಗಿ ಅಂತರ್ಜಾಲ ಕಂಪನಿಯಾದ ಜೆಡ್ನೆಟ್ ಏಕಸ್ವಾಮ್ಯವನ್ನು ಸಾಧಿಸುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ನಿವಾಸಿಗಳ ಈ ಅರ್ಜಿಯ ಮೂಲಕ ತಮ್ಮ ಸಮಸ್ಯೆ ಬಗೆಹರಿಸುವಂತೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ್ ಲಿಂಬಾವಲಿ, ಬೆಂಗಳೂರು ಕೇಂದ್ರ ಸಂಸದ ಚಿಕ್ಕಮುನಿ ಮೋಹನ್, ಪೊಲೀಸ್ ಆಯುಕ್ತ ಕಮಲ್ ಪಂತ್, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್‌ಗೆ ಮನವಿ ಮಾಡಿದ್ದಾರೆ.

ಇನ್ನು ಇದು ಈ ನಿವಾಸಿಗಳು ಆರಂಭಿಸಿದ ಎರಡನೆಯ ಅರ್ಜಿ ಅಭಿಯಾನವಾಗಿದೆ. ಈ ಮನವಿ ಮಾಡಿದವರಲ್ಲಿ ಹೆಚ್ಚಿನವರು ಲಾಕ್‌ಡೌನ್ ಕಾರಣದಿಂದಾಗಿ ಮನೆಯಿಂದಲ್ಲೇ ಕಚೇರಿಯ ಕಾರ್ಯ ನಿರ್ವಹಿಸುವವರು (ವರ್ಕ್ ಫ್ರಮ್ ಹೋಮ್) ಆಗಿದ್ದಾರೆ.
ಜೆಡ್ನೆಟ್ ಮಾಲೀಕರು ದೂರುಗಳನ್ನು ನೀಡುವವರಿಗೆ ಬೆದರಿಕೆ ಹಾಕಿದ್ದಾರೆ ಎಂದು ನಿವಾಸಿಗಳು ಹೇಳಿದ್ದಾರೆ. "ಅನೇಕ ಪ್ರಮುಖ ಇಂಟರ್ನೆಟ್ ಸೇವಾ ಪೂರೈಕೆದಾರರು (ಐಎಸ್ಪಿಗಳು) ತಮ್ಮ ಕೇಬಲ್‌ಗಳನ್ನು ಹಾಕುವ ಮೂಲಕ ತಮ್ಮ ಸೇವೆಯನ್ನು ಹೆಚ್ಚಿಸಲು ಪ್ರಯತ್ನಿಸಿದ್ದಾರೆ. ಆದರೆ ಸ್ಥಳೀಯ ಕೇಬಲ್ ಆಪರೇಟರ್‌ಗಳು ಹೆದರಿ ಹಿಂದೆ ಸರಿದಿದ್ದಾರೆ. ಈ ಕಾರಣದಿಂದಾಗಿ ಈ ಕಠಿಣ ಸಮಯದಲ್ಲಿ ಜನರು ಉದ್ಯೋಗ ಕಳೆದುಕೊಳ್ಳುವಂತೆ ಆಗದಿರಲಿ," ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್ 2020 ರಲ್ಲಿ, ಟಿಎನ್‌ಎಂ ನಿವಾಸಿಗಳು ಮಹಾದೇವಪುರ ಶಾಸಕ ಮತ್ತು ಸಚಿವ ಅರವಿಂದ್ ಲಿಂಬಾವಲಿ ಜೊತೆ ವಾಸ್ತವಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿತ್ತು."ಸಭೆ ನಡೆಯಿತು, ಶಾಸಕರ ಕಚೇರಿ ಈ ವಿಷಯವನ್ನು ಅಂಗೀಕರಿಸಿತು. ಸಭೆಯ ನಂತರ ನಿವಾಸಿಗಳ ಕಳವಳವನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಆದರೆ ಯಾವುದೇ ಬದಲಾವಣೆ ಇಲ್ಲ. ಅದಕ್ಕಾಗಿಯೇ ನಾವು ಈ ಹೊಸ ಅರ್ಜಿ ಅಭಿಯಾನ ಪ್ರಾರಂಭಿಸಿದ್ದೇವೆ," ಎಂದು ಹೆಸರು ಹೇಳಲು ಬಯಸದ ಬಾಲಗೇರೆ ನಿವಾಸಿಯೊಬ್ಬರು ಹೇಳಿದ್ದಾರೆ.
ಬೆಳಗೆರೆ, ಪನತ್ತೂರು ದಿನ್ನೆ ಹಾಗೂ ಗುಂಜೂರಿನ ಸಂಪೂರ್ಣ ಪ್ರದೇಶವು ಒಟ್ಟು 6500 ಕ್ಕೂ ಹೆಚ್ಚು ಮನೆಗಳನ್ನು ಹೊಂದಿದೆ. ಅದರಲ್ಲಿ ಶೇ.80 ಕ್ಕಿಂತಲೂ ಹೆಚ್ಚು ಜನರಿಗೆ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. ಇತರ ಪ್ರಮುಖ ಐಎಸ್‌ಪಿಗಳಿಗೆ ಇಲ್ಲಿ ಅವಕಾಶ ನೀಡುವ ಅವಶ್ಯಕತೆಯಿದೆ ಎಂದು ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications