ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದ್ರೀನಾಥ್ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕಾಪ್ಟರ್ ಪತನ

ಉತ್ತರಾಖಾಂಡದ ಬದ್ರಿನಾಥ್ ನಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದ ವೇಳೆ ಪತನ. ಓರ್ವ ಕಾಪ್ಟರ್ ಸಿಬ್ಬಂದಿ ಸಾವು. ರೆಡಾರ್ ಬ್ಲೇಡ್ ಗಳು ತಲೆಗೆ ಬಡಿದ ಪರಿಣಾಮವಾಗಿ ಹೆಲಿಕಾಪ್ಟರ್ ಇಂಜಿನಿಯರ್ ವಿಕ್ರಮ ಲಂ

|
Google Oneindia Kannada News

ಡೆಹ್ರಾಡೂನ್, ಜೂನ್ 10: ಉತ್ತರಾಖಾಂಡದ ಬದ್ರೀನಾಥ್ ನಿಂದ ತೆರಳುತ್ತಿದ್ದ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದ ಹೆಲಿಕಾಪ್ಟರ್ ಒಂದು ಪತನಗೊಂಡಿದ್ದು, ಅದರಲ್ಲಿದ್ದ ಸಿಬ್ಬಂದಿಯೊಬ್ಬ ನಿಧನರಾಗಿದ್ದಾರೆ.

ತುರ್ತು ಭೂ ಸ್ಪರ್ಶದ ವೇಳೆ ಕಾಪ್ಟರ್ ನಲ್ಲಿದ್ದ ರೇಡಾರ್ ಬ್ಲೇಡ್ ಗಳು ತಲೆಗೆ ಬಡಿದ ಪರಿಣಾಮವಾಗಿ ಆ ಹೆಲಿಕಾಪ್ಟರ್ ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿಕ್ರಮ ಲಂಬಾ ಎಂಬ ಅಸ್ಸಾಂ ಮೂಲದ ಇಂಜಿನಿಯರ್ ಮೃತಪಟ್ಟಿದ್ದಾರೆಂದು ದೆಹಲಿಯಲ್ಲಿರುವ ನಾಗರಿಕ ವಿಮಾನ ಸೇವೆಗಳ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Engineer Killed, 2 Pilots Injured In Badrinath Helicopter Crash

ಇನ್ನು, ಹೆಲಿಕಾಪ್ಟರ್ ನಲ್ಲಿದ್ದ ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್ ಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಹೆಲಿಕಾಪ್ಟರ್ ನಲ್ಲಿದ್ದವರು ಹೆಚ್ಚಾಗಿ ಗುಜರಾತ್ ನ ವಡೋದರಾದವರೆಂದು ಅಧಿಕಾರಿ ತಿಳಿಸಿದ್ದಾರೆ.

ಬದ್ರಿನಾಥ್ ನಿಂದ ಶನಿವಾರ ಬೆಳಗ್ಗೆ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಂದರೆ, ಸುಮಾರು 7: 45ರ ಸುಮಾರಿಗೆ ಹವೆಯ ಒತ್ತಡದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿತು.

ಇದೇ ವೇಳೆ ತುರ್ತು ಭೂಸ್ಪರ್ಶಕ್ಕಾಗಿ ಪ್ರಯತ್ನಿಸುತ್ತಿದ್ದಾಗ ಹೆಲಿಕಾಪ್ಟರ್ ಪತನಗೊಂಡಿತು ಎಂದು ಹೇಳಲಾಗಿದೆ.

English summary
A crew member was killed and two pilots were injured when a helicopter carrying pilgrims crash-landed just after taking off from the Himalayan shrine of Badrinath in Uttarakhand today. All the five passengers were safe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X