ದೆಹಲಿ CJP ಪ್ರತಿಭಟನೆಗಳ ಹಿಂದೆ ಎಲಾನ್ ಮಸ್ಕ್ ಕೈವಾಡ: ವಿದೇಶಿ ಸಂಚಿನ ಬಗ್ಗೆ ಬ್ರಿಜ್ ಭೂಷಣ್ ಸ್ಫೋಟಕ ಹೇಳಿಕೆ

ಭಾರತದಲ್ಲಿ ನಡೆಯುತ್ತಿರುವ ಕೆಲವು ರಾಜಕೀಯ ಬೆಳವಣಿಗೆಗಳು ಮತ್ತು ಪ್ರತಿಭಟನೆಗಳ ಹಿಂದೆ ವಿದೇಶಿಗರ ಕೈವಾಡವಿದೆ ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಇದೀಗ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕ ಮತ್ತು ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಟೆಸ್ಲಾ ಮತ್ತು ಎಕ್ಸ್ ಸೋಶಿಯಲ್‌ ಮೀಡಿಯಾದ ಮಾಲೀಕ ಎಲಾನ್ ಮಸ್ಕ್ ಅವರ ಮೇಲೆ ಗಂಭೀರ ಆರೋಪವೊಂದನ್ನ ಮಾಡಿದ್ದಾರೆ.

ನವದೆಹಲಿ ಮತ್ತು ಮುಂಬೈನಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಪ್ರತಿಭಟನೆಗಳ ಹಿಂದೆ ಎಲಾನ್ ಮಸ್ಕ್ ಅವರ ಕುಮ್ಮಕ್ಕಿದೆ ಮತ್ತು ಇದು ಭಾರತದ ವಿರುದ್ಧದ ದೊಡ್ಡ ಪಿತೂರಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಉನ್ನಾವೋದಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Elon Musk Conspiring Against India BJP s Brij Bhushan Singh Blames Musk for CJP Protests

ಎಲಾನ್ ಮಸ್ಕ್ ವಿರುದ್ಧ ಬ್ರಿಜ್ ಭೂಷಣ್ ಸಿಂಗ್ ಮಾಡಿರುವ ಈ ಆರೋಪಗಳು ಇದೀಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ. "ಸಿಜೆಪಿ ಪಕ್ಷ ಈ ಇಡೀ ಪ್ರತಿಭಟನೆಯನ್ನ ಎಲಾನ್ ಮಸ್ಕ್ ಅವರ ಆದೇಶದ ಮೇರೆಗೆ ನಡೆಸಲಾಗುತ್ತಿದೆ. ಇದು ನಮ್ಮ ರಾಷ್ಟ್ರದ ವಿರುದ್ಧ ನಡೆಯುತ್ತಿರುವ ಬಹುದೊಡ್ಡ ಪಿತೂರಿಯಾಗಿದೆ. ನಮ್ಮ ದೇಶದಲ್ಲಿ ತಮ್ಮದೇ ಷರತ್ತುಗಳ ಮೇಲೆ ವ್ಯಾಪಾರ ಮಾಡಲು ಬಯಸುವ ವಿದೇಶಿಯರು ಈ ಪ್ರತಿಭಟನೆಗಳಿಗೆ ಇಂಧನ ಒದಗಿಸುತ್ತಿದ್ದಾರೆ," ಎಂದು ಬ್ರಿಜ್ ಭೂಷಣ್ ಸಿಂಗ್ ಕಿಡಿಕಾರಿದ್ದಾರೆ.

ವಿದೇಶಿ ಶಕ್ತಿಗಳು ತಮ್ಮ ವಾಣಿಜ್ಯ ಹಿತಾಸಕ್ತಿಗಳನ್ನ ಈಡೇರಿಸಿಕೊಳ್ಳಲು ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸುತ್ತಿವೆ ಎಂಬುದು ಅವರ ಪ್ರಮುಖ ವಾದವಾಗಿದೆ.

ಸಿಜೆಪಿ ಪಕ್ಷದ ಲಹರಾ ದೋ ತಿರಂಗಾ ಪ್ರತಿಭಟನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೆಹಲಿ ಮತ್ತು ಮುಂಬೈನಲ್ಲಿ 'ಲಹರಾ ದೋ ತಿರಂಗಾ' ಎಂಬ ಹೆಸರಿನಡಿ ಬೃಹತ್ ಪ್ರತಿಭಟನೆಗಳನ್ನ ಆಯೋಜಿಸಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ರಿಜ್ ಭೂಷಣ್, "ನಮ್ಮ ದೇಶವನ್ನು ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಹೋಲಿಸಲಾಗುತ್ತಿದೆ.

ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಅನ್ನ ಬೆದರಿಸುವ ಉದ್ದೇಶದಿಂದಲೇ ಇಂತಹದೊಂದು ಪ್ರತಿಭಟನೆ ಆಯೋಜಿಸಲಾಗಿದೆ. ಹಿಂದೆಂದೂ ಇಂತಹ ಘಟನೆಗಳು ನಮ್ಮ ದೇಶದಲ್ಲಿ ನಡೆದಿರಲಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನ್ಯಾಯಾಂಗ ವ್ಯವಸ್ಥೆಯ ಮೇಲೆ ಒತ್ತಡ ಹೇರುವ ತಂತ್ರ ಎಂದು ಅವರು ವಿಶ್ಲೇಷಿಸಿದ್ದಾರೆ.

ಮಹಿಳಾ ಕುಸ್ತಿಪಟುಗಳ ಪ್ರಕರಣ ಮತ್ತು ಬ್ರಿಜ್ ಭೂಷಣ್ ಹಿನ್ನೆಲೆ

ಭಾರತೀಯ ಕುಸ್ತಿ ಫೆಡರೇಶನ್‌ನ (WFI) ಮಾಜಿ ಅಧ್ಯಕ್ಷರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಇತ್ತೀಚಿನ ವರ್ಷಗಳಲ್ಲಿ ಹಲವು ವಿವಾದಗಳ ಕೇಂದ್ರಬಿಂದುವಾಗಿದ್ದಾರೆ. 2023ರಲ್ಲಿ, ಖ್ಯಾತ ಮಹಿಳಾ ಕುಸ್ತಿಪಟುಗಳು ಅವರ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳನ್ನ ಮಾಡಿದ್ದರು.

ಈ ಘಟನೆ ಬ್ರಿಜ್ ಭೂಷಣ್ ಅವರ ರಾಜೀನಾಮೆಗೆ ಆಗ್ರಹಿಸಿ ದೇಶವ್ಯಾಪಿ ಭಾರಿ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಆದರೆ, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಬ್ರಿಜ್ ಭೂಷಣ್ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನ ನಿರಂತರವಾಗಿ ನಿರಾಕರಿಸುತ್ತಲೇ ಬಂದಿದ್ದರು.

ಸುದೀರ್ಘ ಕಾನೂನು ಹೋರಾಟದ ನಂತರ, ಆಗಸ್ಟ್ 3, 2026ರಂದು ದೆಹಲಿ ನ್ಯಾಯಾಲಯವೊಂದು ಈ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಅವರನ್ನ ದೋಷಮುಕ್ತಗೊಳಿಸಿದೆ. ನ್ಯಾಯಾಲಯದ ಈ ತೀರ್ಪು ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿದ್ದರೂ, ಕುಸ್ತಿಪಟುಗಳು ಈ ಖುಲಾಸೆ ಆದೇಶವನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ, ಎಲಾನ್ ಮಸ್ಕ್ ವಿರುದ್ಧ ಬ್ರಿಜ್ ಭೂಷಣ್ ಸಿಂಗ್ ಮಾಡಿರುವ ಈ ಹೊಸ ಆರೋಪಗಳು ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+