ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು, ನಾಲ್ವರು ಸಾವು-ಎಲ್ಲಿ ಹಾಗೂ ಕಾರಣ ತಿಳಿಯಿರಿ
ಉತ್ತರಪ್ರದೇಶ, ಜನವರಿ, 10: ಇತ್ತೀಚಿನ ದಿನಗಳಲ್ಲಿ ಹೇಚ್ಚಾಗಿ ಎಲೆಕ್ಟ್ರಿಕ್ ವಾಹನಗಳು ಬೆಂಕಿಗೆ ತುತ್ತಾಗುತ್ತಲೇ ಇವೆ. ಹಾಗೆಯೇ ಇದೀಗ ಉತ್ತರಾಖಂಡದ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಲೆಕ್ಟ್ರಿಕ್ ವಾಹನ ಪರೀಕ್ಷೆ ನಡೆಸಲು ತೆಗೆದುಕೊಂಡು ಹೋಗಿದ್ದ ಕಾರು ಅಪಘಾತಕ್ಕೀಡಾಗಿ ಇಬ್ಬರು ಅರಣ್ಯ ರಕ್ಷಕರು, ಓರ್ವ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ಮಂಗಳವಾರ (ಜನಬರಿ 10) ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
STORY | Trial EV accident: EV company deeply saddened; driver says was forced to speed, overload
— Press Trust of India (@PTI_News) January 10, 2024
Four people, including two forest rangers, died after their trial EV met with an accident in Uttarakhand's Rajaji Tiger Reserve on Monday evening. The accident was recorded in the… pic.twitter.com/7xObtnfVFZ
ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ಸ್ಟಾರ್ಟ್ ಅಪ್ ಪ್ರವೈಗ್ ಡೈನಾಮಿಕ್ಸ್ ಕಂಪೆನಿಯು ಈ ಬಗ್ಗೆ ಹೆಚ್ಚಿನ ವಿವರಗಳಿಗೆ ತನಿಖಾ ಸಂಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದಾಗಿಯೂ ಹೇಳಿದೆ ಎಂದು ಪಿಟಿಐನಲ್ಲಿ ವರದಿಯಾಗಿದೆ. ಅಲ್ಲದೆ ವಿಡಿಯೋವೊಂದನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ವಾಹನ ಚಲಾಯಿಸುತ್ತಿದ್ದ ಬಿಇ ಮೆಕ್ಯಾನಿಕಲ್ ಎಂಜಿನಿಯರ್ ಅಶ್ಬಿನ್ ಬಿಜು ಅವರು ಮದ್ಯಪಾನ ಮಾಡಿರಲಿಲ್ಲ. ಹಾಗು ಹೆಚ್ಚು ಸುಸ್ತು ಆಗಿರಲಿಲ್ಲ. ಅರಣ್ಯ ಅಧಿಕಾರಿಗಳು ತಮ್ಮನ್ನು ವಾಹನದಲ್ಲಿ ಕೂರಿಸಿಕೊಂಡು ಹೋಗಲು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಾಹನದ ವೇಗ ಹೆಚ್ಚಿಸಲು ಚಾಲಕನ ಮೇಲೆ ಒತ್ತಡ ಹೇರಿದ್ದರು ಅಂತಾ ವರದಿಯಾಗಿದೆ. ಇನ್ನು ಈ ಅಪಘಾತದ ದೃಶ್ಯ ಇವಿಯ ಡ್ಯಾಶ್‌ಬೋರ್ಡ್ ಕೆಮರಾದಲ್ಲಿ ಸೆರೆಯಾಗಿದೆ.












Click it and Unblock the Notifications