Electoral Bond: 2021-22ರಲ್ಲಿ ಚುನಾವಣಾ ಬಾಂಡ್‌ ಮೂಲಕ ಪಕ್ಷಗಳು ಸಂಗ್ರಹಿಸಿದ ಮೊತ್ತವೇಷ್ಟು?

ನವದೆಹಲಿ, ಜನವರಿ.19: ಇತ್ತೀಚಿಗಷ್ಟೆ ಚುನಾವಣಾ ಆಯೋಗವು 2021-22ರ ಅವಧಿಯಲ್ಲಿ (ಎಲೆಕ್ಟೋರಲ್ ಬಾಂಡ್) ಚುನಾವಣಾ ಬಾಂಡ್‌ಗಳ ಮೂಲಕ ಪಕ್ಷಗಳು ಕಲೆಹಾಕಿರುವ ಮೊತ್ತದ ಅಂಕಿ-ಅಂಶಗಳ ಕುರಿತ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಅಂಕಿ-ಅಂಶಗಳ ಮಾಹಿತಿನಯ್ವಯ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ್ದೇ ಸಿಂಹಪಾಲಾಗಿದೆ.

ಚುನಾವಣಾ ಬಾಂಡ್‌ಗಳ ಮೂಲಕ ಬೃಹತ್ ಪ್ರಮಾಣದಲ್ಲಿ ದೇಣಿಗೆಗಳನ್ನು ಸ್ವೀಕರಿಸಿರುವ ಪಕ್ಷಗಳಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ನಂತರದ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಕ್ರಮವಾಗಿ ಟಿಎಂಸಿ ಮತ್ತು ಕಾಂಗ್ರೆಸ್‌ ಪಕ್ಷಗಳು ಹಂಚಿಕೊಂಡಿವೆ.

Electoral Bond:Know How Much Amount Collected by Political Parties Through Electoral Bond in 2021-22

2018-2022 ರವರೆಗೆ ಅಂದರೇ ಕಳೆದ ಐದು ವರ್ಷಗಳಲ್ಲಿ₹ 9,208 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಚುನಾವಣಾ ಆಯೋಗವು ಮಾಹಿತಿ ನೀಡಿದೆ. ಈ ಪೈಕಿ ಮಾರಾಟವಾಗಿರುವ ಬಾಂಡ್‌ಗಳಲ್ಲಿ ಬಿಜೆಪಿ ಪಕ್ಷವು ಸುಮಾರು 57%ಕ್ಕಿಂತ ಅಧಿಕ ಬಾಂಡ್‌ಗಳನ್ನು ಪಡೆದುಕೊಂಡಿದೆ.

ಬಿಜೆಪಿಯದ್ದೇ ಸಿಂಹಪಾಲು !

2022 ಮಾರ್ಚ್‌ 31ರಂತೆ ಬಿಜೆಪಿಯು ಚುನಾವಣಾ ಬಾಂಡ್‌ಗಳ ಮೂಲಕ 1,033 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ ಎಂಬ ಮಾಹಿತಿಯನ್ನು ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಈವರೆಗೂ ಅಂದರೇ ಕಳೆದ ಐದು ವರ್ಷಗಳಲ್ಲಿ ಸುಮಾರು ಒಟ್ಟು 6,303 ಕೋಟಿ ರೂ ಮೌಲ್ಯದ ಬಾಂಡ್‌ಗಳು ಬಿಜೆಪಿ ಪಕ್ಷದ ಖಜಾನೆಗೆ ಸೇರಿಕೊಂಡಿದೆ. 2018 ರಿಂದ 2021ರ ವರೆಗೆ ಬಿಜೆಪಿ ಪಕ್ಷವು ಕ್ರಮವಾಗಿ ₹ 22.38 ಕೋಟಿ, ₹ 2,555 ಕೋಟಿ, ₹ 1,450 ಕೋಟಿ, ₹ 210 ಕೋಟಿ ₹ 210 ಕೋಟಿ ರೂಪಾಯಿ ಮೊತ್ತದ ಬಾಂಡ್‌ಗಳನ್ನು ಸ್ವೀಕರಿಸಿದೆ.

Electoral Bond:Know How Much Amount Collected by Political Parties Through Electoral Bond in 2021-22

ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷವು 2021-2022ರಲ್ಲಿ ಎಲೆಕ್ಟೋರಲ್ ಬಾಂಡ್‌ಗಳಿಂದ 528 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಪಕ್ಷವು 2021,2020 ಮತ್ತು 2019 ರಲ್ಲಿ ಕ್ರಮವಾಗಿ 42 ಕೋಟಿ ರೂ, 100 ಕೋಟಿ ರೂ ಮತ್ತು 97 ಕೋಟಿ ರೂ ಮೌಲ್ಯದ ಬಾಂಡ್‌ಗಳನ್ನು ಪಡೆದುಕೊಂಡಿದೆ. ಒಟ್ಟಾರೆಯಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಪಕ್ಷವು 767 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಿದೆ.

ಕಳೆದ ಹಣಕಾಸು ವರ್ಷದಲ್ಲಿ 253 ಕೋಟಿ ರೂ ಮೌಲ್ಯದ ಚುನಾವಣಾ ಬಾಂಡ್ ಗಳಿಸುವ ಮೂಲಕ ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನದಲ್ಲಿದೆ. 2021 ರಲ್ಲಿ ₹ 10 ಕೋಟಿ, 2020 ರಲ್ಲಿ ₹ 317 ಕೋಟಿ ಮತ್ತು 2019 ರಲ್ಲಿ ₹ 383 ಕೋಟಿ ಮೌಲ್ಯದ ಬಾಂಡ್‌ಗಳನ್ನು ಗಳಿಸುವಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿದೆ. ಕಾಂಗ್ರೆಸ್ ಪಕ್ಷವು ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 964 ಕೋಟಿ ರೂ ಮೊತ್ತದ ಬಾಂಡ್‌ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಕಳೆದ ವರ್ಷದಲ್ಲಿ ಭಾರತವನ್ನು ಹೊರತುಪಡಿಸಿ ಮತ್ಯಾವುದೇ ಅನ್ಯ ಮೂಲಗಳಿಂದ ದೇಣಿಗೆ ಸ್ವೀಕರಿಸಿಲ್ಲ ಎಂದು ಪಕ್ಷವು ಘೋಷಿಸಿದೆ.

Electoral Bond:Know How Much Amount Collected by Political Parties Through Electoral Bond in 2021-22

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಚುನಾವಣಾ ಬಾಂಡ್‌ಗಳನ್ನು ಮಾರಾಟ ಮತ್ತು ರಿಡೀಮ್ ಮಾಡುವ ಏಕೈಕ ಅಧಿಕೃತ ಬ್ಯಾಂಕ್ ಆಗಿದೆ.ಸರ್ಕಾರವು ಸೂಚಿಸಿದಂತೆ ವರ್ಷಕ್ಕೆ ನಾಲ್ಕು ಬಾರಿ (ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್‌ನಲ್ಲಿ) 10 ದಿನಗಳವರೆಗೆ ಮಾತ್ರ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಗಳನ್ನು ಸ್ವೀಕರಿಸಲು ರಾಜಕೀಯ ಪಕ್ಷವು ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳು ಅಥವಾ ಅಸೆಂಬ್ಲಿ ಚುನಾವಣೆಗಳಲ್ಲಿ ಕನಿಷ್ಠ 1% ಮತ ಪಾಲನ್ನು ಹೊಂದಿರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+