ಚುಟುಕು: ಸೋನಿಯಾ ವಿರುದ್ಧ ಉಮಾ ಕಣಕ್ಕೆ?

ಬೆಂಗಳೂರು, ಮಾ.275 ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ. ಮೊದಲಿಗೆ ಗಾಂಧಿ ಮನೆತನದ ಪ್ರತಿಷ್ಠಿತ ಕ್ಷೇತ್ರ ರಾಯ್ ಬರೇಲಿ ಮೇಲೆ ಪ್ರಭುತ್ವ ಸಾಧಿಸಲು ಬಿಜೆಪಿ ಮಾಡಿರುವ ತಂತ್ರಗಾರಿಕೆ ಬಗ್ಗೆ ಓದಿ..

11.15: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪರ್ಧಿಸಲಿರುವ ರಾಯ್ ಬರೇಲಿ ಕ್ಷೇತ್ರದಲ್ಲಿ ಕಠಿಣ ಪ್ರತಿಸ್ಪರ್ಧೆ ಒಡ್ಡಲು ಬಿಜೆಪಿ ನಿರ್ಧಾರ. ಫೈರ್ ಬ್ರ್ಯಾಂಡ್ ಖ್ಯಾತಿ ಉಮಾ ಭಾರತಿಗೆ ಟಿಕೆಟ್ ನೀಡಿಕೆ ಸಾಧ್ಯತೆ. ಜೆಡಿಯುನಿಂದ ಬಿಜೆಪಿಗೆ ಬಂದಿರುವ ಸುಬ್ರಮಣ್ಯಂ ಸ್ವಾಮಿ ಕೂಡಾ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಯಿದೆ.

11.00: ಟೀಂ ಅಣ್ಣಾದ ಮಾಜಿ ಸದಸ್ಯೆ ಕಿರಣ್ ಬೇಡಿ ಅವರು ಗರಂ ಆಗಿದ್ದಾರೆ. ಮಾಧ್ಯಮಗಳು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಕುರಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ರೀತಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸ್ನಾನ, ನಿದ್ದೆ ವಿವರಗಳನ್ನು ಕೂಡಾ ವರದಿ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಟೀಕಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Here are the top news in brief for March 27, Thursday

10.45: ಜಾರ್ಖಂಡ್ ನ ಗುಮ್ಲಾದಲ್ಲಿ ನರೇಂದ್ರ ಮೋದಿ ಅವರ ಭಾರತ್ ವಿಜಯ್ ಸಮಾವೇಶದ ಹಿನ್ನೆಲೆಯಲ್ಲಿ ಬಾಂಬ್ ನಿರೋಧಕ ದಳದಿಂದ ತೀವ್ರ ತಪಾಸಣೆ
9.45: ಉತ್ತರಪ್ರದೇಶದ ಉಗ್ರ ನಿಗ್ರಹ ದಳದಿಂದ ಗೋರಖ್ ಪುರದಲ್ಲಿ ಇಬ್ಬರು ಫಿದಾಯೀನ್ ಉಗ್ರರ ಬಂಧನ
9.30: ನರೇಂದ್ರ ಮೋದಿ ಅವರು ಗುರುವಾರ ಜಾರ್ಖಂಡ್ ನ ಲೋಹರ್ ದಗ್ಗಾ, ಛಾತ್ರಾದಲ್ಲಿ ಸಮಾವೇಶ ನಡೆಸಿ ನಂತರ ಬಿಹಾರದ ಸಸಾರಾಮ್, ಗಯಾಗೆ ಭೇಟಿ ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+