ಪ್ರಧಾನಿಗಳೇ ಅಭಿನಂದನೆ, ನಿಮ್ಗೆ ನಿಜಕ್ಕೂ ಸಂತೋಷವಾಗಿದೆಯೇ? : ಪ್ರಕಾಶ್ ರೈ
Recommended Video

ಬೆಂಗಳೂರು, ಡಿಸೆಂಬರ್ 18: ನಟ ಪ್ರಕಾಶ್ ರೈ ಅವರು ಮತ್ತೊಮ್ಮೆ ಬಿಜೆಪಿ ವಿರುದ್ಧ ತಮ್ಮ ವಾಗ್ಬಾಣ ಬಿಟ್ಟಿದ್ದಾರೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪ್ರಧಾನಿ ಮೋದಿ ಅವರ ಕಾಲೆಳೆದಿದ್ದಾರೆ.
ಪ್ರೀತಿಯ ಪ್ರಧಾನಮಂತ್ರಿಗಳೇ, ಗೆಲುವಿಗಾಗಿ ನಿಮಗೆ ಅಭಿನಂದನೆ, ಆದರೆ, ನಿಮಗೆ ನಿಜಕ್ಕೂ ಸಂತೋಷವಾಗಿದೆಯೇ? ಸುಮ್ನೆ ಕೇಳುತ್ತಿದ್ದೇನೆ ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

ನಂತರ ಇನ್ನಷ್ಟು ವಿಸ್ತರಿಸಿ, ನಿಮ್ಮ ವಿಕಾಸ ಬಲದಿಂದ 150ಕ್ಕೂ ಅಧಿಕ ಸ್ಥಾನ ಗಳಿಸಬೇಕಾಗಿತ್ತಲ್ಲವೆ? ಒಂದು ಕ್ಷಣ ಸುಮ್ಮನೆ ಇದನ್ನು ಅರ್ಥಮಾಡಿಕೊಳ್ಳುವಿರಾ ಎಂದು ಮೂರು ಅಂಶಗಳನ್ನು ಹಾಕಿದ್ದಾರೆ.
1. ಒಡೆದು ಆಳುವ ರಾಜಕೀಯ ಸಾಕಾರಗೊಳ್ಳಲಿದೆ.
2. ವೈಯಕ್ತಿಕ ದ್ವೇಷ, ಅಹಂಕಾರ, ಬೆದರಿಕೆ, ಜಾತಿ, ಮತ, ಪಾಕಿಸ್ತಾನಕ್ಕಿಂತ ನಮ್ಮ ದೇಶದಲ್ಲಿ ಅತಿದೊಡ್ಡ ಸಮಸ್ಯೆಗಳು ಇವೆ.
3. ಗ್ರಾಮೀಣ ಭಾಗದ ಸಮಸ್ಯೆಗಳತ್ತ ನೋಟ
ರೈತರು, ಬಡವರು, ಶ್ರಮಿಕ ವರ್ಗವನ್ನು ಕಡೆಗಣಿಸಿರುವುದು ದೊಡ್ಡದನಿಯಲ್ಲಿ ಬೊಬ್ಬೆ ಹಾಕುತ್ತಿದೆ ನಿಮಗೆ ಕೇಳಿಸುತ್ತಿದೆಯೇ?
Dear prime minster, Congratulations for the victory... but are you really happy..#justasking pic.twitter.com/9cNU24it3w
— Prakash Raj (@prakashraaj) December 18, 2017
ಗುಜರಾತಿನಲ್ಲಿ 182 ಸ್ಥಾನಗಳ ಫಲಿತಾಂಶ ಡಿಸೆಂಬರ್ 18ರಂದು ಪ್ರಕಟವಾಗಲಿದ್ದು, ಸದ್ಯದ ಟ್ರೆಂಡ್ ನಂತೆ ಬಿಜೆಪಿ ಮ್ಯಾಜಿಕ್ ನಂಬರ್ 92 ದಾಟಿ ಮುನ್ನುಗ್ಗುತ್ತಿದ್ದು ನೂರರ ಗಡಿಯಲ್ಲಿದೆ. ಕಾಂಗ್ರೆಸ್ 81, ಇತರೆ 2 ರಷ್ಟಿದೆ.












Click it and Unblock the Notifications