ಈಶಾನ್ಯ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ: ಫೆ.18, 27 ಕ್ಕೆ ಮತದಾನ

Posted By:
Subscribe to Oneindia Kannada

ನವದೆಹಲಿ, ಜನವರಿ 18: ಈಶಾನ್ಯ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರ ವಿಧಾನಸಭೆಗಳಿಗೆ ಇಂದು(ಜ.18) ಚುನಾವಣೆ ದಿನಾಂಕ ಘೋಷಣೆಯಾಗಿದೆ.

ಫೆ.18 ರಂದು ತ್ರಿಪುರ ಮತ್ತು ಫೆ.27 ರಂದು ಮೇಘಾಲಯ ಮತ್ತು ನಾಗಾಲ್ಯಾಂಡ್ ಗಳಿಗೆ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎ.ಕೆ.ಜೋತಿ ತಿಳಿಸಿದ್ದಾರೆ.

ನವದೆಹಲಿಯಲ್ಲಿಂದು(ಜ.18) ಸುದ್ದಿಗೋಷ್ಠಿ ನಡೆಸಿದ ಅವರು, ಮೂರು ರಾಜ್ಯಗಳಲ್ಲೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ತಿಳಿಸಿದ್ದಾರೆ. ಮೂರು ರಾಜ್ಯಗಳಲ್ಲೂ ತಲಾ 60 ವಿಧಾನಸಭಾ ಕ್ಷೇತ್ರಗಳಿದ್ದು, ಮತ ಎಣಿಗೆ ಮಾರ್ಚ್ 3 ರಂದು ನಡೆಯಲಿದೆ.

ಈ ಮೂರೂ ರಾಜ್ಯಗಳಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದ್ದು, ಚುನಾವಣೆಯಲ್ಲಿ ಇವಿಎಂ ಮತ್ತು ವಿವಿಪಿಎಟಿ ಯಂತ್ರ ಬಳಸಲಾಗುವುದು ಎಂದು ಜೋತಿ ಹೇಳಿದ್ದಾರೆ.

ಸಪ್ತ ಸಹೋದರಿಯರಲ್ಲಿ ಮೂರು ರಾಜ್ಯಗಳಿಗೆ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ರಾಜಕೀಯ ಕ್ಷೇತ್ರದಲ್ಲಿ ಚಟುವಟಿಕೆ ಗರಿಗೆದರಿದೆ.

ಮತದಾನ: ತ್ರಿಪುರದಲ್ಲಿ ಫೆಬ್ರವರಿ 18(ಭಾನುವಾರ)

ನಾಗಾಲ್ಯಾಂಡ್, ಮೇಘಾಲಯದಲ್ಲಿ ಫೆ. 27(ಮಂಗಳವಾರ)

ಮತ ಎಣಿಕೆ: ಮಾರ್ಚ್ 3(ಶನಿವಾರ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Election Commission of India (ECI) announces the poll dates for Assembly elections in Meghalaya, Tripura and Nagaland in the New Delhi on Jan 18th. Polling for legislative assembly elections in Tripura to be held on 18 Feb, polling in Meghalaya & Nagaland to be held on 27 Feb; Counting for all three states on 3 March.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X