ನಿಮ್ಮ ದೇಶದಲ್ಲಿ ಗೋಮಾಂಸ ತಿಂದು, ನಂತರ ಭಾರತಕ್ಕೆ ಬನ್ನಿ: ಅಲ್ಫಾನ್ಸ್
Recommended Video

Tourism minister k j alphonso :Eat beef in your own country and then come to India
ನವದೆಹಲಿ, ಸೆಪ್ಟೆಂಬರ್ 8: 'ಗೋಮಾಂಸ ತಿನ್ನುವ ವಿದೇಶಿಗರು ತಮ್ಮ ದೇಶದಲ್ಲೇ ಅದನ್ನು ತಿಂದು ನಂತರ ಭಾರತಕ್ಕೆ ಬನ್ನಿ!' ಇದು ಕೇಂದ್ರ ಸಚಿವ ಕೆ.ಜೆ.ಅಲ್ಫಾನ್ಸ್ ನುಡಿ.
'ಭಾರತದ ಕೆಲವು ರಾಜ್ಯಗಳಲ್ಲಿ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಯನ್ನು ನಿಷೇಧಿಸಿರುವುದು ಭಾರತಕ್ಕೆ ಬರುವ ವಿದೇಶಿಗರಿಗೆ ನೀಡುವ ಆತಿಥ್ಯದ ಮೇಲೆ ಪರಿಣಾಮ ಬೀರುತ್ತಿದೆಯೇ?' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಸೆಪ್ಟೆಂಬರ್ 3 ರಂದು ನಡೆದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರವಾಸೋದ್ಯಮ ಸಚಿವರಾಗಿ ಆಯ್ಕೆಯಾದ ಆಲ್ಫಾನ್ಸ್, ಭಾರತೀಯ ಪ್ರವಾಸೋದ್ಯಮ ಕ್ಷೇತ್ರವನ್ನು ಬಲಪಡಿಸುವುದಕ್ಕೆ ಹಲವು ಕ್ರಿಯಾಶೀಲ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದ ಪ್ರಗತಿಗೆ ಸಂಬಂಧಿಸಿದಂತೆ ಜನರೂ ಸರ್ಕಾರಕ್ಕೆ ಸಲಹೆ- ಸೂಚನೆಗಳನ್ನು ನೀಡಬಹುದು ಎಂದು ಅವರು ಹೇಳಿದ್ದಾರೆ.












Click it and Unblock the Notifications