• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಅಮೃತ್‌ಸರದಲ್ಲಿ ಲಘು ಭೂಕಂಪ

|
Google Oneindia Kannada News

ಅಮೃತ್ ಸರ್, ನ.14: ಪಂಜಾಬ್ ರಾಜ್ಯದಲ್ಲಿ ಮತ್ತೆ ಭೂಮಿ ಕಂಪಿಸಿದೆ. ಅಮೃತಸರದಾದ್ಯಂತ ಭಾನುವಾರ ಮತ್ತು ಸೋಮವಾರದ ಮಧ್ಯರಾತ್ರಿ ಭೂಕಂಪನವಾಗಿರುವ ವರದಿ ಬಂದಿದೆ. ಭೂಕಂಪದ ಪರಿಣಾಮ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಸೋಮವಾರ ಬೆಳಗ್ಗೆ3.42 AMಗೆ ಭೂಕಂಪ ದಾಖಲಾಗಿದೆ.

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ಟ್ವೀಟ್ ಪ್ರಕಾರ, "4.1 ತೀವ್ರತೆಯ ಭೂಕಂಪ, 14-11-2022 ರಂದು ಸಂಭವಿಸಿದೆ, 03:42:27 IST, ಅಕ್ಷಾಂಶ: 31.95 ಮತ್ತು ರೇಖಾಂಶ: 73.38, ಆಳ: 120 ಕಿಮೀ, ಸ್ಥಳ: 145 ಕಿಮೀ ಅಮೃತಸರ, ಪಂಜಾಬ್."

ಶನಿವಾರ ಸಂಜೆ ದೆಹಲಿ-ಎನ್‌ಸಿಆರ್‌ನಲ್ಲಿ ಭೂಕಂಪ ಸಂಭವಿಸಿತ್ತು. ರಾತ್ರಿ 8 ಗಂಟೆ ಸುಮಾರಿಗೆ ಕಂಪನದ ಅನುಭವವಾಗಿತ್ತು. ಶನಿವಾರ ಸಂಜೆ 7:57 ರ ಸುಮಾರಿಗೆ ನೇಪಾಳದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿತ್ತು, ಭೂಕಂಪದ ಆಳವು ನೆಲದಿಂದ 10 ಕಿ.ಮೀ ಆಳದಲ್ಲಿತ್ತು. ಇದರ ಮುಂದುವರೆದ ಪ್ರಭಾವ ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಲಘು ಭೂಕಂಪಕ್ಕೆ ಕಾರಣವಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ತಿಳಿಸಿದೆ

English summary
An earthquake of 4.1 magnitude was felt across Punjab's Amritsar on the intervening night of Sunday and Monday, informed National Center for Seismology (NCS).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X