ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ನೇಪಾಳ ಗಡಿಯಲ್ಲಿ 5.2ರಷ್ಟು ತೀವ್ರತೆ ಭೂಕಂಪ

ಗುರುವಾರ ರಾತ್ರಿ 10.35ರ ವೇಳೆ ಭೂಕಂಪ ಸಂಭವಿಸಿದೆ. ಭೂಕಂಪವು ಉತ್ತರಾಖಂಡದ ಧರಾಚುಲದಲ್ಲಿ ಕೇಂದ್ರೀಕೃತವಾಗಿತ್ತು. ಅಂದಾಜು ಹತ್ತು ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

|
Google Oneindia Kannada News

ನವದೆಹಲಿ, ಡಿಸೆಂಬರ್ 2: ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆಯಿದ್ದ ಭೂಕಂಪ ಭಾರತ-ನೇಪಾಳ ಗಡಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಉತ್ತರಾಖಂಡದ ಚಂಪಾವತ್, ಶ್ರೀನಗರ್, ಗರ್ಹ್ ವಾಲ್ ಮತ್ತು ಅಲ್ಮೋರಾದಲ್ಲಿ ಕಂಪನದ ಅನುಭವವಾಗಿದೆ. ಯಾವುದೇ ಗಾಯಗಳಾದ ಅಥವಾ ಹಾನಿಯಾದ ಬಗ್ಗೆ ಈ ವರೆಗೆ ವರದಿಯಾಗಿಲ್ಲ.

ಈ ವಾರದಲ್ಲಿ ಎರಡು ಬಾರಿಗೆ ನೇಪಾಳದಲ್ಲಿ ಭೂಕಂಪವಾಗಿದೆ. ಕೆಲ ದಿನಗಳ ಹಿಂದೆ 5.5ರಷ್ಟು ತೀವ್ರತೆಯಿದ್ದ ಭೂಕಂಪನ ಸಂಭವಿಸಿತ್ತು. ಕಠ್ಮಂಡು ಪೂರ್ವಕ್ಕೆ ನೂರೈವತ್ತು ಕಿ.ಮೀ ದೂರವಿರುವ ಎವರೆಸ್ಟ್ ಸಮೀಪ ಸೊಲುಖುಂಬು ಪ್ರದೇಶದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು.[ನೇಪಾಳದಲ್ಲಿ 5.4 ಪ್ರಮಾಣದ ಪ್ರಬಲ ಭೂಕಂಪ]

Earthquake

ಗುರುವಾರ ರಾತ್ರಿ 10.35ರ ವೇಳೆ ಭೂಕಂಪ ಸಂಭವಿಸಿದೆ. ಭೂಕಂಪವು ಉತ್ತರಾಖಂಡದ ಧರಾಚುಲದಲ್ಲಿ ಕೇಂದ್ರೀಕೃತವಾಗಿತ್ತು. ಅಂದಾಜು ಹತ್ತು ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ದೆಹಲಿ ಹಾಗೂ ಎನ್ ಸಿಆರ್ ಪ್ರದೇಶದಲ್ಲೂ ಭೂಕಂಪದ ಅನುಭವವಾಗಿದೆ. ಇದರ ಜತೆಗೆ ಇತರ ಪ್ರದೇಶದಲ್ಲೂ ಕಂಪನ ಅನುಭವಕ್ಕೆ ಬಂದಿದೆ ಎಂದು ವರದಿಯಾಗಿದೆ.[ಮಧ್ಯ ಅಮೆರಿಕಾದಲ್ಲಿ 7ರಷ್ಟು ತೀವ್ರತೆಯ ಭೂಕಂಪ]

ಕಳೆದ ಕೆಲ ದಿನಗಳಲ್ಲಿ ಜಪಾನ್, ನ್ಯೂಜಿಲ್ಯಾಂಡ್ ಸೇರಿದಂತೆ ವಿವಿಧೆಡೆ ಭೂಕಂಪ ಸಂಭವಿಸಿದೆ. ಜತೆಗೆ ಸುನಾಮಿ ಭೀತಿ ಸಹ ತಲೆದೋರಿದೆ ಎಂಬುದನ್ನು ಈ ವೇಳೆ ಸ್ಮರಿಸಬಹುದು.

English summary
Parts of northern India felt tremors.Seemingly caused by a medium-intensity earthquake in the India-Nepal border region.The Indian Meteorological Department (IMD) has estimated the earthquake to be of magnitude 5.2 on the Richter scale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X