Get Updates
Get notified of breaking news, exclusive insights, and must-see stories!

Arunachal Pradesh Earthquake: ಅರುಣಾಚಲ ಪ್ರದೇಶದಲ್ಲಿ ಭೂಕಂಪ: 3.1 ತೀವ್ರತೆಯಲ್ಲಿ ಕಂಪಿಸಿದ ಭೂಮಿ

ಅರುಣಾಚಲ ಪ್ರದೇಶದಲ್ಲಿ ಇಂದು ಬೆಳಿಗ್ಗೆ (ಮೇ 8) ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಈ ಮಾಹಿತಿಯನ್ನು ಹಂಚಿಕೊಂಡಿದೆ.

ಸುಬನ್ಸಿರಿ (Lower Subansiri) ಜಿಲ್ಲೆಯಲ್ಲಿ ಬೆಳಗ್ಗೆ 4.55 ರ ಸುಮಾರಿಗೆ ಭೂಕಂಪದ ಅನುಭವವಾಗಿದೆ. ಈ ಸಮಯದಲ್ಲಿ ಎಲ್ಲರೂ ಅವರವರ ಮನೆಗಳಲ್ಲಿ ಮಲಗಿದ್ದರು. ಭೂಮಿಯು ನಡುಗಿದಾಗ ಜನರು ಇದ್ದಕ್ಕಿದ್ದಂತೆ ನಿದ್ದೆಯಿಂದ ಎದ್ದು ಗಾಬರಿಯಿಂದ ಹೊರ ಓಡಿ ಬಂದಿದ್ದಾರೆ. ಕೆಲವರು ಮನೆಯಲ್ಲಿ ಸುರಕ್ಷಿತ ಸ್ಥಳದಲ್ಲಿ ಅವಿತುಕೊಂಡಿದ್ದಾರೆ. ಪ್ರಾಣ ಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Earthquake in Arunachal Pradesh 3 1 magnitude quake

ಈ ಹಿಂದೆ ಮಾರ್ಚ್ 21ರ ಮುಂಜಾನೆ ಅರುಣಾಚಲ ಪ್ರದೇಶದಲ್ಲಿ ಎರಡು ಭೂಕಂಪಗಳು ಸಂಭವಿಸಿದ್ದವು. 3.7 ರ ತೀವ್ರತೆಯೊಂದಿಗೆ ಮೊದಲ ಭೂಕಂಪವು 01:49 ಕ್ಕೆ ಸಂಭವಿಸಿತ್ತು. ಅದೇ ಸಮಯದಲ್ಲಿ ಸರಿಯಾಗಿ ಎರಡು ಗಂಟೆಗಳ ನಂತರ ಬೆಳಿಗ್ಗೆ 03:40 ಕ್ಕೆ, ಎರಡನೇ ಭೂಕಂಪನ ವರದಿಯಾಗಿತ್ತು. ಈ ಭೂಕಂಪದ ತೀವ್ರತೆ 3.4 ಮತ್ತು ಅದರ ಕೇಂದ್ರಬಿಂದು ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್‌ನಲ್ಲಿತ್ತು. ಇದರಿಂದ ಜನ ಬೆಚ್ಚಿಬಿದ್ದಿದ್ದರು. ಇದರಿಂದ ಯಾವುದೇ ಹಾನಿ ಅಥವಾ ಸಾವುನೋವುಗಳ ತಕ್ಷಣದ ವರದಿಯಾಗಿಲ್ಲ.

ಭೂಕಂಪದ ಸಮಯದಲ್ಲಿ ಏನು ಮಾಡಬೇಕು?

*ಸುರಕ್ಷಿತ ಸ್ಥಳಕ್ಕೆ ಹೋಗಿ ಮತ್ತು ಅಲುಗಾಡುವಿಕೆ ನಿಲ್ಲುವವರೆಗೆ ಮನೆಯಿಂದ ಹೊರಬರುವುದು ಮುಖ್ಯ.

*ಮನೆಯಿಂದ ಹೊರಬರಲು ಆಗದೇ ಇದ್ದಾಗ ಗಟ್ಟಿಮುಟ್ಟಾದ ಟೇಬಲ್ ಅಥವಾ ಇತರ ಪೀಠೋಪಕರಣಗಳ ಅಡಿಯಲ್ಲಿ ಅಡಗಿ ಕುಳಿತುಕೊಳ್ಳುವುದು ಮರೆಯಬೇಡಿ.

*ನಿಮ್ಮ ತೋಳುಗಳಿಂದ ನಿಮ್ಮ ಮುಖ ಮತ್ತು ತಲೆಯನ್ನು ಕವರ್ ಮಾಡಿ ಮತ್ತು ಕಟ್ಟಡದ ಒಳಗೆ ಒಂದು ಮೂಲೆಯಲ್ಲಿ ಬಾಗಿರಿ.

*ಕೋಣೆಯ ಮೂಲೆಯಲ್ಲಿ, ಮೇಜಿನ ಕೆಳಗೆ ಅಥವಾ ಹಾಸಿಗೆಯ ಕೆಳಗೆ ಅಡಗಿಕೊಂಡು ನಿಮ್ಮನ್ನು ರಕ್ಷಿಸಿಕೊಳ್ಳಿ.

*ಗಾಜು, ಕಿಟಕಿಗಳು, ಹೊರಗಿನ ಬಾಗಿಲುಗಳು ಮತ್ತು ಗೋಡೆ ಸೇರಿದಂತೆ ಅಪಾಯ ಉಂಟು ಂಆಡುವ ವಸ್ತುಗಳಿಂದ ದೂರವಿರಿ.

*ಕಟ್ಟಡದ ಒಳಗೆ ಬೇರೆ ಸ್ಥಳಕ್ಕೆ ಹೋಗಲು ಪ್ರಯತ್ನಿಸಿ ಅಥವಾ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ. ನೀವು ತೆರೆದ ಜಾಗದಲ್ಲಿದ್ದರೆ, ಅಲುಗಾಡುವಿಕೆ ನಿಲ್ಲುವವರೆಗೆ ಅಲ್ಲಿಯೇ ಇರಿ. ಹೆಚ್ಚಿನ ಭೂಕಂಪ-ಸಂಬಂಧಿತ ಸಾವುಗಳು ಗೋಡೆಗಳು, ಗಾಜುಗಳು ಮತ್ತು ಬೀಳುವ ವಸ್ತುಗಳಿಂದ ಉಂಟಾಗುತ್ತವೆ. ಹೀಗಾಗಿ ಇದರ ಪಕ್ಕ ನಿಂತುಕೊಳ್ಳಬೇಡಿ.

*ವಾಹನ ಚಲಿಸುತ್ತಿರುವಾಗ ಭೂಕಂಪ ಸಂಭವಿಸಿದಲ್ಲಿ ವಾಹನ ನಿಲ್ಲಿಸಿ. ಕಟ್ಟಡಗಳು, ಮರಗಳು, ಮೇಲ್ಸೇತುವೆಗಳು ಮತ್ತು ವಿದ್ಯುತ್ ತಂತಿಗಳ ಬಳಿ ರಸ್ತೆಮಾರ್ಗದಲ್ಲಿ ನಿಲ್ಲಿಸಬೇಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+