ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಬಂತು ಫಾಸ್ಟ್ ಟ್ಯಾಗ್ ವ್ಯವಸ್ಥೆ

ನವದೆಹಲಿ, ಅ.17 : ಹೆದ್ದಾರಿಗಳಲ್ಲಿ ಟೋಲ್‌ ಕಟ್ಟಲು ಇನ್ನು ಮುಂದೆ ಸಾಲುಗಟ್ಟಿ ನಿಲ್ಲಬೇಕಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಪಾವತಿಗೆ 'ಫಾಸ್ಟ್ ಟ್ಯಾಗ್' ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸಿದೆ.

ಆನ್‌ಲೈನ್ ಮೂಲಕ ಎಲೆಕ್ಟ್ರಾನಿಕ್ ಟ್ಯಾಗ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಇವುಗಳಿಗೆ ಮೊಬೈಲ್ ಮಾದರಿಯಲ್ಲಿ ಕರೆನ್ಸಿ ಹಾಕಿಸಿಕೊಂಡರೆ ಟೋಲ್ ಪಾವತಿ ಮಾಡಬಹುದು. ಸೆಪ್ಟೆಂಬರ್‌ನಿಂದ ಹೆದ್ದಾರಿಗಳಲ್ಲಿ ಟೋಲ್ ಗಳಲ್ಲಿ ಇವುಗಳನ್ನು ಬಳಕೆ ಮಾಡಬಹುದಾಗಿದೆ.

 E-toll lanes at all national highway plazas from Sept 1

ಆನ್‌ಲೈನ್ ಅಥವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವೆಬ್ ಸೈಟ್ ಮೂಲಕ ಟ್ಯಾಗ್‌ಗಳನ್ನು ಬುಕ್ ಮಾಡಬಹುದಾಗಿದೆ. ಕೋರಿಯರ್ ಮೂಲಕ ಇವುಗಳನ್ನು ವಿಳಾಸಕ್ಕೆ ಕಳುಹಿಸಿ ಕೊಡಲಾಗುತ್ತದೆ. ಟೋಲ್ ಸಮೀಪವೂ ಟ್ಯಾಗ್ ಮಾರಾಟ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ.

ಟೋಲ್ ಗೇಟ್‌ಗಳು ಇರುವ ಕಡೆ ಒಂದು ಲೈನ್ ಅನ್ನು ಸಂಪೂರ್ಣವಾಗಿ ಟ್ಯಾಗ್ ಹೊಂದಿರುವ ವಾಹನ ಸವಾರರಿಗೆ ಮುಕ್ತವಾಗಿಡಲಾಗುತ್ತದೆ. ವಾಹನ ಟೋಲ್ ಗೇಟ್ ಸಮೀಪಿಸುತ್ತಿದ್ದಂತೆ ಟ್ಯಾಗ್ ಗೆ ಜೋಡಣೆ ಆಗಿರುವ ಅಕೌಂಟ್ ಮೂಲಕ ಹಣ ಕಡಿತವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+